Skip to main content
ವಿಡಿಯೋ
1/3
webstory

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸಬಲ: ಕ್ರ್ಯಾಕ್‌ ಮಾಡಬೇಕೇ? ಇಲ್ಲಿವೆ ಅತ್ಯುತ್ತಮ 10 ಟಿಪ್ಸ್‌!

By Shravanthi R
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸಬಲ: ಕ್ರ್ಯಾಕ್‌ ಮಾಡಬೇಕೇ? ಇಲ್ಲಿವೆ ಅತ್ಯುತ್ತಮ 10 ಟಿಪ್ಸ್‌!

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಪೂರ್ವ ತಯಾರಿಗೆ ಮಾರ್ಗದರ್ಶಕನಾಗಿ ಹಾಗೂ ಪರಿಣಾಮಕಾರಿಯಾಗಿ ಈ ಎಲ್ಲಾ ಟಿಪ್ಸ್‌ಗಳು ಸಹಕಾರಿಯಾಗಲಿವೆ.

ಯಾವುದೇ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಮೊದಲ ಕೈಪಿಡಿಯು ಅವರ ಅವಿರತ ಪೂರ್ವ ಯೋಜನೆ ಹಾಗೂ ಕಾರ್ಯತಂತ್ರವಾಗಿರುತ್ತದೆ. ಇದನ್ನೊಳಗೊಂಡ ಹಲವು ಟಿಪ್ಸ್‌ ಈ ಕೆಳಗಿನಂತಿವೆ:

  • ಪೂರ್ವ ತಯಾರಿ - ಜ್ಞಾನಕ್ಕಾಗಿ ಹಸಿವಿರಬೇಕು. ಯಾವುದೇ ಸಮಯದಲ್ಲೂ ಓದುವ ಅಚಲ ಅರಿವಿರಬೇಕಿರುತ್ತದೆ. ಅದಕ್ಕಾಗಿ ಸಮಯಪಾಲನೆ ಹಾಗೂ ಸಮಯದ ಸದ್ಬಳಕೆಯನ್ನು ಮಾಡಿಕೊಳ್ಳುವುದು. 

  • ಏಕಾಗ್ರತೆ ಮತ್ತು ಅಭ್ಯಾಸ - ಯಾವುದೇ ಒಂದು ವಿಷಯವನ್ನು ಸಂಪೂರ್ಣ ಗಮನವಿಟ್ಟು ಕಲಿತುಕೊಳ್ಳಲು ಸಮಚಿತ್ತದಿಂದ ಓದಬೇಕಿರುತ್ತದೆ. ಸಮಯೋಚಿತ ಅಭ್ಯಾಸದಿಂದ ಇದು ಸಾಧ್ಯವಾಗಲಿದೆ.

  • ಆತ್ಮವಿಶ್ವಾಸ - ಯಾವುದೇ ತರಹೇವಾರಿ ಪ್ರಶ್ನೋತ್ತರಗಳನ್ನು ಕೇಳಲ್ಪಟ್ಟರೂ ಅದಕ್ಕಾಗಿ ವಿಚಲಿತರಾಗದೇ, ಸೂಕ್ತಿಗಳನ್ನು ಬಿಡಿಸುವ ಕ್ರಿಯಾತ್ಮಕ ಕಲೆಯನ್ನು ಬೆಳೆಸಿಕೊಳ್ಳುವ ಆತ್ಮವಿಶ್ವಾಸ ಇರಬೇಕಾಗುತ್ತದೆ. 

  • ಆರೋಗ್ಯಪೂರ್ಣ ತಯಾರಿ - ಪರೀಕ್ಷೆಗೂ ಮುನ್ನ ಆರಾಮದಾಯಕ ನಿದ್ರೆ, ಊಟ ಹಾಗೂ ಉಸಿರಾಟದ ಬಗ್ಗೆ ಗಮನವಿರಲಿ. ಒತ್ತಡ ಹಾಗೂ ಆಯಾಸಗೊಳ್ಳುವುದರಿಂದ ದೂರವಿದ್ದು, ದೈಹಿಕ ಹಾಗೂ ಮಾನಸಿಕವಾಗಿ ಸಧೃಡರಾಗಿರುವುದು ಮುಖ್ಯವಾಗಿರುತ್ತದೆ.

  • ಸ್ಟಡಿ ಪ್ಲಾನ್‌ - ಎಕ್ಸಾಂ ಸಿಲಬಸ್‌, ಸಬ್‌ಜೆಕ್ಟ್‌ಗಳು, ಪ್ರಶ್ನೆ ಪತ್ರಿಕೆ ಪ್ಯಾಟರ್ನ್‌ಗಳು ಇನ್ನಿತರೆ ಪರಿಕರಗಳ ಸಂಯುಕ್ತ ತಯಾರಿಯನ್ನು ಮಾಡಿಕೊಳ್ಳುವುದಕ್ಕಾಗಿ ಸಂಪೂರ್ಣ ಸ್ಟಡಿ ಪ್ಲಾನ್‌ನ್ನು ಸಿದ್ದಪಡಿಸಿಕೊಳ್ಳಬೇಕಿರುತ್ತದೆ. 

  • ಶಾರ್ಟ್‌ ನೋಟ್ಸ್‌ ಹಾಗೂ ಪಾಯಿಂಟ್ಸ್‌ - ಕಿರುದಾಗಿ ಮಾಡಿಟ್ಟುಕೊಂಡ ನೋಟ್ಸ್‌ಗಳಿಂದ ಕಡೆಹಂತದ ತಯಾರಿಗೆ ಅನುಕೂಲವಾಗುತ್ತದೆ. ವಿವಿಧ ಅಪ್‌ಡೇಟ್ಸ್‌ ಹಾಗೂ ಕೀವರ್ಡ್ಸ್‌ಗಳಿಂದ ಪರೀಕ್ಷೆ ತಯಾರಿಯನ್ನು ಸುಲಭಗೊಳಿಸುತ್ತದೆ. LOUIS DEVIN LD-L144-BLU-CH Mesh Blue Dial Silver Band Stainless Steel Chain Analog Wrist Watch for Women

  • ಸ್ಮರಣೆ ತೊಂದರೆ ಭಯ ಬೇಡ - ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ದೊಡ್ಡ ಸಾಹಸವೆಂದು ಭಯಭೀತರಾಗುವುದು ಬೇಡ. ಬರವಣಿಗೆಯಿಂದ ಇದನ್ನು ಹೋಗಲಾಡಿಸಬಹುದು. ಹೆಚ್ಚು ಬರೆದಂತೆ, ಮೆದುಳಿಗೆ ಚುರುಕಿನ ಕ್ರಿಯೆ ನೀಡುವಂತಾಗುವುದು.

  • ಬೈಹಾಟ್‌ ಬೇಡ - ವಿಷಯಗಳನ್ನು ಮನನ ಮಾಡುವುದಕ್ಕಾಗಿ ಗಟ್‌ ಮಾಡುವ ಪ್ರಯತ್ನಗಳು ಬೇಡವಾಗಿರುತ್ತದೆ. ಮಗ್‌ಅಪ್‌ ನಿಂದ ಮೆಮೊರೈಜ್‌ ಆಗುವುದಿಲ್ಲ. ಬದಲಾಗಿ, ಅರ್ಥೈಸಿಕೊಂಡು ಓದುವುದರಿಂದ ಹೆಚ್ಚು ಉಪಯುಕ್ತವಾಗಲಿದೆ. 

  • ರಿವೈಸ್‌ ಅಂಡ್‌ ರೀಟ್ರೈ - ಯಾವುದೇ ಸಂದರ್ಭದಲ್ಲೂ ಓದಿದ್ದು ವ್ಯರ್ಥವಾಗುವುದಿಲ್ಲ. ಮಾಡಿಟ್ಟುಕೊಂಡ ಪಾಯಿಂಟ್ಸ್‌ಗಳನ್ನು ನಿಯೋಜಿತವಾಗಿ ಮನನ ಮಾಡುವುದು ಸಹಾಯಕಾರಿಯಾಗಲಿದೆ.

  • ಆತ್ಮವಿಮರ್ಶೆ - ಎಕ್ಸಾಂ ಕೈಗೊಳ್ಳುವ ಮೊದಲು ನಿಮ್ಮ ಬಗ್ಗೆ ನಿಮಗೆ ಒಲುಮೆಯಿರಲಿ. ಈ ವರೆಗೆ ಏನೆಲ್ಲಾ ತಯಾರಿ ನಡೆಸಿರುವೆನೋ ಅದರ ಫಲಪ್ರಧಕ್ಕಾಗಿ ನಿರೀಕ್ಷಿಸದೇ ಸಮತೋಲನದ ಅಭಿವ್ಯಕ್ತಿ ಹೊಂದಿರಿ.

ಇದೆಲ್ಲಕ್ಕೂ ಮಿಗಿಲಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯವಾಗಿ ಓದುವ ಕ್ರಮ, ವಿಶ್ವಾಸಪೂರ್ಣ ಅಭ್ಯಾಸ ವಿಧಾನಗಳು ಹಾಗೂ ತಂತ್ರಗಳನ್ನು ಅನುಸರಿಸುವುದು ಯಶಸ್ಸಿನ ಗುಟ್ಟಾಗಿಸಿದೆ. ಇದನ್ನೂ ಓದಿ: ಚಂದ್ರನ ಮಿತಿ ಮೀರಿ ಬೆಳೆದ ತಾರೆ - ಎಲಾನ್ ಮಾಸ್ಕ್ ಮಗನ ಹೆಸರಿಡಲು ಸ್ಪೂರ್ತಿಯಾದ ಪ್ರೊಫೆಸರ್ ಎಸ್. ಚಂದ್ರಶೇಖರ ರೋಚಕ ಜೀವನಗಾಥೆ