ಅಮೆರಿಕಾ - ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರು ಝೀರೋಧಾ ಸಹ ಸಂಸ್ಥಾಪಕರಾದ ನಿಖಿಲ್ ಕಾಮತ್ ಪಾಡ್ ಕಾಸ್ಟ್ ಸಂದರ್ಶನದಲ್ಲಿ ನನ್ನ ಮಗನ ಹೆಸರು ಶೇಖರ್ ಎಂದು ಭಾರತೀಯ ಹೆಸರಿಡಲು ಸಗಪೂರ್ತಿ ಪ್ರೊಫೆಸರ್ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರು ಎಂದಿದ್ದಾರೆ.
ಹಾಗಾದರೆ ಈ ಪ್ರೋಫೆಸರ್ ಸುಬ್ರಮಣ್ಯ ಚಂದ್ರಶೇಖರ್ ಯಾರು ?
20ನೇ ಶತಮಾನದ ಅತ್ಯಂತ ಪ್ರಭಾವಶಾಲಿ ಭೌತಶಾಸ್ತ್ರಜ್ಞರು ಮತ್ತು ಗಣಿತಜ್ಞರಲ್ಲಿ ಒಬ್ಬರು. ಖಗೋಳ ಭೌತಶಾಸ್ತ್ರಕ್ಕೆ ಇವರ ಕೊಡುಗೆಗಳು ವಿಶೇಷವಾಗಿ ನಕ್ಷತ್ರಗಳು ತಮ್ಮ ಜೀವನ ಚಕ್ರದ ಅಂತ್ಯದಲ್ಲಿ ಹೇಗೆ ವರ್ತಿಸುತ್ತವೆ ಎಂಬುದರ ಕುರಿತಾದ ಅಧ್ಯಯನಗಳು ವಿಜ್ಞಾನದ ಇತಿಹಾಸದಲ್ಲಿ ಒಂದು ಮಹತ್ವದ ತಿರುವನ್ನು ನೀಡಿದವು.
ಹಿನ್ನೆಲೆ ಮತ್ತು ಆರಂಭಿಕ ಜೀವನ
ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರು ಅಕ್ಟೋಬರ್ 19 -1910 ರಂದು ಬ್ರಿಟಿಷ್ ಭಾರತದ ಲಾಹೋರ್‌ನಲ್ಲಿ
ಅಂದರೆ ಈಗಿನ ಪಾಕಿಸ್ತಾನ ಭಾಗದಲ್ಲಿ ಜನಿಸಿದರು. ಮದ್ರಾಸ್‌ನ ಈಗಿನ ಚೆನ್ನೈ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅವರು ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞರಾದ ಸಿ. ವಿ. ರಾಮನ್ ಅವರ ಸೋದರಳಿಯ. ಈ ಬಲವಾದ ವೈಜ್ಞಾನಿಕ ಹಿನ್ನೆಲೆ ಅವರ ಆರಂಭಿಕ ಆಸಕ್ತಿಯನ್ನು ಪ್ರಚೋದಿಸಿತು.
ಭಾರತದಿಂದ ಇಂಗ್ಲೆಂಡ್‌ಗೆ ಪ್ರಯಾಣಿಸುವಾಗ ಕೇವಲ 19 ವರ್ಷದ ಯುವಕನಾಗಿದ್ದಾಗಲೇ ಅವರು ಚಂದ್ರಶೇಖರ್ ಮಿತಿ ಎಂಬ ಕ್ರಾಂತಿಕಾರಿ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದರು. ಚಂದ್ರಶೇಖರ್ ಅವರ ಅತ್ಯಂತ ಗಮನಾರ್ಹ ಕೊಡುಗೆ ಎಂದರೆ ಅವರು ಲೆಕ್ಕಹಾಕಿದ ಚಂದ್ರಶೇಖರ್ ಮಿತಿಯಾಗಿದೆ. ಯಾವುದೇ ನಕ್ಷತ್ರವು ತನ್ನ ಪರಮಾಣು ಇಂಧನವನ್ನು ಸುಟ್ಟು ಮುಗಿಸಿದ ನಂತರ ಅದರ ಗುರುತ್ವಾಕರ್ಷಣೆಯು ಆಂತರಿಕ ಒತ್ತಡವನ್ನು ಎದುರಿಸುವ ಸಾಮರ್ಥ್ಯವನ್ನು ಅವಲಂಬಿಸಿ ಅದರ ಭವಿಷ್ಯ ನಿರ್ಧಾರವಾಗುತ್ತದೆ.
ಸೂರ್ಯನ ದ್ರವ್ಯರಾಶಿಯ ಸುಮಾರು 1.4 ಪಟ್ಟು ದ್ರವ್ಯರಾಶಿಯನ್ನು ಮೀರಿದ ನಕ್ಷತ್ರಗಳು ಶ್ವೇತ ಕುಬ್ಜಗಳಾಗಿ ಉಳಿಯಲು ಸಾಧ್ಯವಿಲ್ಲ.
ಈ ಮಿತಿಯನ್ನು ಮೀರಿದ ನಕ್ಷತ್ರಗಳು ಕುಸಿದು ನ್ಯೂಟ್ರಾನ್ ನಕ್ಷತ್ರಗಳು ಅಥವಾ ಕಪ್ಪು ಕುಳಿಗಳಾಗಿ ಮಾರ್ಪಡುತ್ತವೆ. ಈ ಸಿದ್ಧಾಂತವು ನಕ್ಷತ್ರಗಳ ವಿಕಾಸ ಮತ್ತು ಕಪ್ಪು ಕುಳಿಗಳ ರಚನೆಯ ಬಗ್ಗೆ ಆಧುನಿಕ ತಿಳುವಳಿಕೆಗೆ ಆಧಾರಸ್ತಂಭವಾಯಿತು.
1930 ರ ದಶಕದಲ್ಲಿ ಚಂದ್ರಶೇಖರ್ ಅವರು ತಮ್ಮ ಮಿತಿಯನ್ನು ಮಂಡಿಸಿದಾಗ ಆಗಿನ ಪ್ರಖ್ಯಾತ ಖಗೋಳ ಭೌತಶಾಸ್ತ್ರಜ್ಞ ಸರ್ ಆರ್ಥರ್ ಎಡ್ಡಿಂಗ್ಟನ್ ಅವರು ಅದನ್ನು ಬಹಿರಂಗವಾಗಿ ತಿರಸ್ಕರಿಸಿದರು. ಈ ವಿರೋಧವು ಯುವ ಚಂದ್ರಶೇಖರ್ ಅವರಿಗೆ ತೀವ್ರ ನಿರಾಶೆಯನ್ನು ಉಂಟುಮಾಡಿತು. ಆದರೆ ಅವರು ಅಮೆರಿಕಕ್ಕೆ ತೆರಳಿ ತಮ್ಮ ಸಂಶೋಧನೆಯನ್ನು ಮುಂದುವರೆಸಿದರು.
1937 ರಲ್ಲಿ ಅವರು ಶಿಕಾಗೋ ವಿಶ್ವವಿದ್ಯಾಲಯಕ್ಕೆ ಸೇರಿ ಅಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅವರು 1953 ರಲ್ಲಿ ಅಮೆರಿಕದ ಪೌರತ್ವವನ್ನು ಪಡೆದರು.1983 ರಲ್ಲಿ ತಮ್ಮ ಸಹೋದ್ಯೋಗಿ ವಿಲಿಯಂ ಎ. ಫೌಲರ್ ಅವರೊಂದಿಗೆ ಜಂಟಿಯಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ನಕ್ಷತ್ರಗಳ ರಚನೆ ಮತ್ತು ವಿಕಸನದ ಮೇಲೆ ಮಹತ್ವದ ಭೌತಿಕ ಪ್ರಕ್ರಿಯೆಗಳ ಸೈದ್ಧಾಂತಿಕ ಅಧ್ಯಯನಕ್ಕಾಗಿ ಅವರಿಗೆ ಈ ಗೌರವ ದೊರಕಿತು. CRESTELLO Silicone Strap Analog Wrist Watch for Women (Black/Blue/Green/Brown) | CR-Ck137
ಸಮಾಜಕ್ಕೆ ಮತ್ತು ವಿಜ್ಞಾನಕ್ಕೆ ಕೊಡುಗೆ
ಚಂದ್ರಶೇಖರ್ ಅವರು ಆಳವಾದ ಸೃಜನಶೀಲತೆ ಮತ್ತು ಬೌದ್ಧಿಕ ಶಿಸ್ತಿಗೆ ಹೆಸರುವಾಸಿಯಾಗಿದ್ದರು. ಅವರು ಖಗೋಳ ಭೌತಶಾಸ್ತ್ರದ ಹಲವಾರು ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ.
ವಿಕಿರಣ ವರ್ಗಾವಣೆ , ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ ಮತ್ತು ಗುರುತ್ವಾಕರ್ಷಣೆಯ ಅಲೆಗಳು ,ಬೀಳುಕು ಮತ್ತು ಸ್ಥಿರತೆಯ ಅಧ್ಯಯನ ಅವರು ತಮ್ಮ ಬೋಧನೆ ಮತ್ತು ಮಾರ್ಗದರ್ಶನದ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು. ಇದನ್ನೂ ಓದಿ: ಉದ್ಯೋಗ ವಿಧಾತ - ಉದ್ಯೋಗಾವಕಾಶಗಳಿಗಾಗಿ ತೆರೆದ ಬಾಗಿಲು - ಇಲ್ಲಿದೆ ವಿವಿಧ ಇಂಟರ್ನ್‌ಷಿಪ್ ಡಿಟೇಲ್ಸ್
ಭಾರತದೊಂದಿಗಿನ ನಂಟು
ಚಂದ್ರಶೇಖರ್ ಅವರು ತಮ್ಮ ವೃತ್ತಿಜೀವನದ ಬಹುಪಾಲು ಭಾಗವನ್ನು ಅಮೆರಿಕದಲ್ಲಿ ಕಳೆದರೂ ಭಾರತದೊಂದಿಗಿನ ಅವರ ಬಾಂಧವ್ಯವು ಉಳಿದಿತ್ತು.
ಅವರ ವೈಜ್ಞಾನಿಕ ಸಾಧನೆಗಳು ಭಾರತೀಯ ವಿಜ್ಞಾನಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ದೊಡ್ಡ ಸ್ಫೂರ್ತಿಯ ಮೂಲವಾಗಿದೆ. ಎಲೋನ್ ಮಸ್ಕ್ ಅವರ ಸಂಗಾತಿ ಶಿವೋನ್ ಝಿಲಿಸ್ ತಮ್ಮ ಮಗನಿಗೆ ಅವರ ಗೌರವಾರ್ಥವಾಗಿ ಶೇಖರ್ ಎಂದು ಮಧ್ಯದ ಹೆಸರನ್ನು ಇಟ್ಟಿರುವುದು. ಭಾರತೀಯ ಪ್ರತಿಭೆಗೆ ಜಾಗತಿಕವಾಗಿ ಇರುವ ಮೌಲ್ಯವನ್ನು ತೋರಿಸುತ್ತದೆ.
ಅವರ ಸೋದರಮಾವ ಸಿ. ವಿ. ರಾಮನ್ ಅವರ ಕಾರಣದಿಂದಾಗಿ ಭಾರತೀಯ ವಿಜ್ಞಾನದ ಮೇಲಿನ ಅವರ ಆಸಕ್ತಿ ಸದಾ ಉಳಿದಿತ್ತು.ಚಂದ್ರಶೇಖರ್ ಅವರು ಫೆಬ್ರವರಿ 21, 1995 ರಂದು ನಿಧನರಾದರು. ವಿಜ್ಞಾನಕ್ಕೆ ಅವರು ನೀಡಿದ ಕೊಡುಗೆಗಳು ಮತ್ತು ಕಪ್ಪು ಕುಳಿಗಳಂತಹ ನಿಗೂಢ ವಿದ್ಯಮಾನಗಳ ಬಗ್ಗೆ ಅವರು ತೆರೆದಿಟ್ಟ ಮಾರ್ಗ ಇಂದಿಗೂ ವಿಶ್ವದಾದ್ಯಂತದ ಖಗೋಳಶಾಸ್ತ್ರಜ್ಞರಿಗೆ ದಾರಿದೀಪವಾಗಿದೆ. ಇದನ್ನೂ ಓದಿ: 'ಥ್ಯಾಂಕ್ಸ್ ಗಿವಿಂಗ್' - ಕೃತಜ್ಞತೆಯೆಂಬ ಸಾತ್ವಿಕ ಗುರುತು!