Skip to main content
ವಿಡಿಯೋ
1/3
lifestyle

ಮಕ್ಕಳ ಓದು - ಪ್ರಕೃತಿಯೇ ಮೊದಲ ನುಡಿಯಂಗಳ!

By Shravanthi R
ಮಕ್ಕಳ ಓದು - ಪ್ರಕೃತಿಯೇ ಮೊದಲ ನುಡಿಯಂಗಳ!

ಮಗುವು ತಾಯಿಯ ಗರ್ಭದಲ್ಲಿರುವಾಗಲೇ ಹೊರಗಿನ ಸದ್ದುಗಳನ್ನು ಕೇಳಿಸಿಕೊಳ್ಳಲು ತೊಡಗುತ್ತದೆ. ಮುಂದೆ ಆಲಿಸಿಕೊಳ್ಳುತ್ತಲೇ ಹೊರಜಗತ್ತಿನಲ್ಲಿ, ಮನೆಯವರ ಮಾತುಗಳನ್ನು ಕೇಳಲು ಆರಂಭಿಸುತ್ತದೆ. ಅನಂತರ, ತೊದಲುನುಡಿಗಳಿಂದ ಕಣ್ಣರಳಿಸಿ ಅರ್ಥೈಸಿಕೊಳ್ಳುತ್ತದೆ, ಅಮ್ಮನ ಮಾತು ಕೇಳುತ್ತಲೇ ಕಲಿಕೆಗೆ ಬುನಾದಿಯಾಗುತ್ತದೆ.

ಮಕ್ಕಳು ವ್ಯವಸ್ಥಿತ ಕಲಿಕೆ ಹಾಗೂ ಓದಿಗೂ ತೆರೆದುಕೊಳ್ಳುವ ಮೊದಲು ಮನೆಯವರ ಪ್ರತಿಕ್ರಿಯೆ ಹಾಗೂ ಪ್ರವರ್ತನೆಗಳಿಂದ ಕಲಿಯುತ್ತಾರೆ. ಆ ಬಳಿಕ ಅವರನ್ನು ಪ್ರಭಾವಿಸುವುದೇ ಪರಿಸರ ಅಥವಾ ಅವರ ಸುತ್ತಮುತ್ತಲಿನ ವಾತಾವರಣ. ಹೀಗಾಗಿ ಅವರನ್ನು ನಿಸರ್ಗಪ್ರಿಯರನ್ನಾಗಿ ಮಾಡುವುದರಿಂದ ಸಾಮಾಜಿಕ ಜವಾಬ್ದಾರಿಯುಳ್ಳವರಾಗುತ್ತಾರೆ ಎಂದು ಅರಿತುಕೊಳ್ಳಬೇಕಿರುತ್ತದೆ. 

ಆನಂತರ, ಅವರು ಬೆಳೆಸಿಕೊಳ್ಳುವ ಹವ್ಯಾಸಗಳಿಂದ ಪ್ರೇರಿತರಾಗುತ್ತಾರೆ. ಅವರ ಪ್ರಾಕೃತಿಕ ಕಲಿಕೆಗೆ ಬೇಕಾದ ಕೆಲವೊಂದು ಸಹಜ ಹವ್ಯಾಸಗಳನ್ನು ಇಲ್ಲಿ ತಿಳಿಸಲಾಗಿದೆ. ಅವುಗಳಲ್ಲಿ ಮುಖ್ಯವಾಗಿ ಅವರ ಮೇಲೆ ಪ್ರಭಾವ ಬೀರುವ ಸಾಧನಗಳೆಂದರೆ:

ಪತ್ರಿಕೆ ಓದು - ಸಾಮಾನ್ಯವಾಗಿ ಜಗತ್ತಿನಲ್ಲಾಗುವ ಆಗು-ಹೋಗುಗಳ ಬಗ್ಗೆ ಕುತೂಹಲವಿರುತ್ತದೆ. ಇದಕ್ಕಾಗಿ ದಿನನಿತ್ಯ ನ್ಯೂಸ್‌ ಅಪ್‌ಡೇಟ್‌ ಬಹುಮುಖ್ಯವಾಗಿರುತ್ತದೆ.

ಪುಸ್ತಕ ಓದು - ಮತ್ತೆ ಮತ್ತೆ ತೆರೆದು ನೋಡಬಹುದಾದ ಉಡುಗೊರೆಯೆಂದರೆ ಪುಸ್ತಕ - ಗ್ಲಾರಿಸನ್‌ ಕ್ಲೇಯರ್‌ ಅವರ ನುಡಿಮುತ್ತಿನಂತೆ, ಪುಸ್ತಕಗಳು ನಮಗೆ ಜೀವನಸಂಗಾತಿಗಳಾಗಿರುತ್ತದೆ. 

ಸಂಗೀತ ಕೇಳುವುದು, ನಾಟಕ-ಕಥೆ ಓದು - ಸಾಕ್ಷರರಲ್ಲದವರ ವಿದ್ಯೆ ಕಲೆ. ಮಕ್ಕಳು ಕಥೆ,ಕವನದಂತಹ ಸಣ್ಣ ಮಟ್ಟದ ಅಭಿರುಚಿ ಹಾಗೂ ಸಂಗೀತವನ್ನು ಆಲಿಸುವ ಕೌಶಲಗಳ ಹೊಂದಿರುವುದು ಅವರ ಬೆಳವಣಿಗೆ ಹಾಗೂ ಸಕಾರಾತ್ಮಕ ಚಿಂತನೆಗೆ ಉಪಯುಕ್ತವಾಗಿದೆ. OLEVS Watch for Women Analog Quartz Original Womens Watch Fashion Ultra Thin Minimalist Silicone Strap Waterproof Slim Watches for Ladies

ಬರೆಯುವ ಕೌಶಲ - ಮಕ್ಕಳಿಗೆ ಸಮಗ್ರ ಓದು ಮುಖ್ಯ ಆದರೆ, ಓದಿದ್ದನ್ನು ಜೀರ್ಣಿಸುವ ಕಲೆಯೇ ಬರವಣಿಗೆ. ಹೀಗಾಗಿ ಅವರಿಗೆ ಮೊಬೈಲ್‌ ಕಾರ್ಟೂನ್‌, ಗೇಮ್ಸ್‌ನಿಂದ ಕಾಲಕಳೆಯುವಂತೆ ಮಾಡದೇ ಅವರಿಗೆ ಬರೆಯುವುದರ ಮಹತ್ವವನ್ನು ಮುಕ್ತಗೊಳಿಸುವುದು ಅನಿವಾರ್ಯವಾಗಿರುತ್ತದೆ.

ಪರಿಸರದೊಲವು - ಮಗುವಿನ ಮುಗ್ಧವಾದ ಗುರು ಪ್ರಕೃತಿಯೆಂದು ಕುವೆಂಪು ಅವರ ನಾಣ್ಣುಡಿಯಿದೆ. ಅವರ ಕಲಿಕೆಯು ನೈಸರ್ಗಿಕತೆ ಹಾಗೂ ಸರಳತೆಯಿಂದ ಕೂಡಿದ್ದರೆ ಅವರಲ್ಲಿ ಪರಿಸರ ಕಾಳಜಿ ಹಾಗೂ ಅದರ ಕುರಿತ ಮೌಲ್ಯಗಳು ಹೆಚ್ಚುತ್ತದೆ.

ಮಕ್ಕಳು ನೋಡಿದಂತೆ ನಡೆಯುತ್ತಾರೆ. ಹಾಗಾಗಿ ಅವರ ಸುತ್ತಲಿನ ಪರಿಸರ ಹಾಗೂ ವಾತಾವರಣವನ್ನು ಅವಲೋಕಿಸುವುದು ಅಗತ್ಯ. ಇವುಗಳಲ್ಲದೇ ಅವರ ವೈಚಾರಿಕ ಬೆಳವಣಿಗೆಗೆ ದೈಹಿಕ ಆಟೋಟಗಳು, ಟ್ಯೂಷನ್ಸ್‌, ತರಬೇತಿ ಶಿಬಿರಗಳ ಅವಲಂಬನೆಗಿಂತಲೂ, ಅಕ್ಷರ ಬೀಜಗಳನ್ನು ಬಿತ್ತಿ ಅವರ ಸಾಮರ್ಥ್ಯವನ್ನು ಪರಿಚಯಗೊಳಿಸುವುದು ಪೋಷಕರ ಕರ್ತವ್ಯವಾಗಿರುತ್ತದೆ. ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸಬಲ: ಕ್ರ್ಯಾಕ್‌ ಮಾಡಬೇಕೇ? ಇಲ್ಲಿವೆ ಅತ್ಯುತ್ತಮ 10 ಟಿಪ್ಸ್‌!