ತಂತ್ರಜ್ಞಾನ ಬೆಳವಣಿಗೆಯೆಂಬುದು ಹೊಸ ಆವಿಷ್ಕಾರಗಳಿಂದ ಜಗತ್ತನ್ನು ಪರಿವರ್ತಿಸುತ್ತಿದೆ. ಆನ್‌ಲೈನ್ ಪ್ರಭಾವಿತ ಕ್ಷಿಪ್ರ ಬೆಳವಣಿಗೆಗಳು ಹಾಗೆಯೇ ವರದಿಯಾಗುತ್ತಲೂ ಇದೆ. ಡಾಕ್ಸಿಂಗ್, ಸ್ಟಾಕಿಂಗ್, ಮಾರ್ಫಿಂಗ್, ಡೀಪ್ ಫೇಕ್, ಅಶ್ಲೀಲ ಕಂಟೆಂಟ್ ಹೀಗೆ ಇನ್ನೂ ವಿಧವಿಧವಾಗಿವೆ ಆನ್‌ಲೈನ್ ಕಿರುಕುಳದ ಮುಖಗಳು.
ಕೆಲವೇ ಸೆಕೆಂಡುಗಳಲ್ಲಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸುತ್ತದೆ ಈ ಸೈಬರ್ ಕಿರುಕುಳವೆಂಬ ಡಿಜಿಟಲ್ ಭೂತಗಳು. ಇವು ದಾಖಲೆಗೇ ಬಾರದ ಮನಸ್ಸಿನಲ್ಲೇ ಹುದುಗಿಹೋಗುವ ಕಿರಿಕಿರಿಯಾಗಿ, ಕಿರುಕುಳವಾಗಿ ಮಹಿಳೆಯರಿಗೆ ಪರಿಣಮಿಸಿದೆ. ಇಂತಹ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವುದಾಗಿ ವರದಿ ತಿಳಿಸಿದೆ.
ಇತ್ತೀಚೆಗೆ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್‌ನ ದತ್ತಾಂಶದ ಪ್ರಕಾರ, 2020 ರಿಂದ 2024ರವರೆಗೆ, 20+ ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಟುತ್ತಿದೆ ಎನ್ನಲಾಗಿದೆ. ಇವು ಕೇವಲ ನೊಂದಾಯಿತ ಪ್ರಕರಣಗಳಾಗಿದ್ದು, ಈ ಅಜ್ಞಾತ ಅಪಾಯದಿಂದ ದೂರು ನೀಡದೇ ಹಿಂಜರಿದವರೇ ಹೆಚ್ಚಿದ್ದಾರೆ ಎನ್ನಲಾಗಿದೆ. Watches for Women Green/Red Dial with Leather Strap Ladies Wristwatch Fashion Quartz Analog Dress Watch Casual Diamond Waterproof Elegant Wrist Watch RW0209S
NLU ಹಾಗೂ IJFMR ಸಂಸ್ಥೆಗಳ ಅಧ್ಯಯನದ ಪ್ರಕಾರ, ಶೇ60 ರಷ್ಟು ಮಹಿಳೆಯರು ಭಾರತದಲ್ಲಿ ಆನ್‌ಲೈನ್ ಕಿರುಕುಳವನ್ನು ಅನುಭವಿಸಿದ ಕುರಿತು ಪ್ರಕರಣ ದಾಖಲಿಸಲು ಹೆದರುತ್ತಾರೆ ಎಂದು ತಿಳಿಸಲಾಗಿದೆ. ಭಾರತದಲ್ಲಿ 38-45 ಶೇ ಮಹಿಳಾ ಇಂಟರ್‌ನೆಟ್ ಬಳಕೆದಾರರು ಜೀವನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಸೈಬರ್ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.
ಡಿಜಿಟಲ್ ಶಿಸ್ತಿಗೆ ವಿರುದ್ದವಾಗಿರುವ ಇಂತಹ ಬೆಳವಣಿಗೆಗಳ ಕುರಿತು ಕ್ರಮಕೈಗೊಳ್ಳಬೇಕಿರುವುದು ಅತ್ಯವಶ್ಯಕ. ಮಹಿಳೆಯರಿಗೆ ತೊಡಕಾಗಿರುವ ತಂತ್ರಜ್ಞಾನ ಅಸುರಕ್ಷತೆ ಬಗ್ಗೆ ಜಾಣ್ಮೆಯಿಂದ ಕ್ರಮಕೈಗೊಳ್ಳಬೇಕಿರುತ್ತದೆ. ಇದಕ್ಕಾಗಿ ಸೈಬರ್ ಹೈಜಿನ್ ತಂತ್ರವನ್ನು ಬಲಪಡಿಸುವುದು ಕಾನೂನಷ್ಟೇ ಅಲ್ಲದೇ ತಾರ್ಕಿಕ ನಿಲುವಿಗೆ ಒತ್ತುಕೊಡಬೇಕು. ಇದನ್ನೂ ಓದಿ: ಮಕ್ಕಳ ಓದು - ಪ್ರಕೃತಿಯೇ ಮೊದಲ ನುಡಿಯಂಗಳ!