ಕರ್ನಾಟಕ ಸರ್ಕಾರದ ಸಂಚಾರ ಇಲಾಖೆ ನೀಡಿರುವ 50 ಪ್ರತಿಶತ ಟ್ರಾಫಿಕ್ ದಂಡ ರಿಯಾಯಿತಿಗೆ ರಾಜ್ಯಾದ್ಯಂತ ಅಪಾರ ಸ್ಪಂದನೆ ವ್ಯಕ್ತವಾಗಿದೆ. ಈ ಯೋಜನೆ ಡಿಸೆಂಬರ್ 12 ರವರೆಗೆ ಮಾತ್ರ ಅನ್ವಯವಾಗಲಿದ್ದು, ಈ ಅವಧಿಯೊಳಗೆ ಬಾಕಿ ಇರುವ ಎಲ್ಲ ಟ್ರಾಫಿಕ್ ದಂಡವನ್ನು ಪಾವತಿಸಿದರೆ ಶೇ.50 ರಿಯಾಯಿತಿ ಲಭಿಸಲಿದೆ.
ಕೇವಲ 10 ದಿನಗಳಲ್ಲಿ ಸರ್ಕಾರಕ್ಕೆ ಬರೋಬ್ಬರಿ 8 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಭಾನುವಾರ ಸಂಜೆಯವರೆಗಿನ ಅಂಕಿಅಂಶದ ಪ್ರಕಾರ 8 ಕೋಟಿ1 ಲಕ್ಷ12 ಸಾವಿರ 350 ರೂಪಾಯಿ ದಂಡ ವಸೂಲಿ ಆಗಿದೆ.GoSriKi Women's Rayon Viscose Ethnic Co-Ord Set | Kurta Pant Set | Kurta Palazzo Set | Stylish Cotton Suit Set for Women
ಇದರೊಂದಿಗೆ ಒಟ್ಟು 2,82,792 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳುಗಳು ಇತ್ಯರ್ಥಗೊಂಡಿವೆ.ಈ ರಿಯಾಯಿತಿಯಿಂದಾಗಿ ದೀರ್ಘಕಾಲದಿಂದ ಬಾಕಿ ಇದ್ದ ದಂಡಗಳನ್ನು ಜನರು ತ್ವರಿತವಾಗಿ ಪಾವತಿಸುತ್ತಿದ್ದಾರೆ.
ವಿಶೇಷವೆಂದರೆ, ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಳಗಾವಿ ಮುಂತಾದ ನಗರಗಳಲ್ಲಿ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ದಂಡ ಪಾವತಿಗೆ ಉತ್ತಮ ಸ್ಪಂದನೆ ದೊರೆತಿದೆ. ಇದನ್ನು ಓದಿ: ಲೈಂಗಿಕ ಸಮಸ್ಯೆ ಪರಿಹಾರದ ಹೆಸರಲ್ಲಿ ಟೆಕ್ಕಿಗೆ ₹48 ಲಕ್ಷ ವಂಚನೆ: 'ಟೆಂಟ್ ಗುರೂಜಿ' ಸೇರಿ ಇಬ್ಬರ ಬಂಧನ!
ಈ ಯೋಜನೆಯಿಂದ ಸರ್ಕಾರಕ್ಕೆ ಭಾರೀ ಆದಾಯ ಸಿಗುತ್ತಿರುವುದು ಮಾತ್ರವಲ್ಲ, ರಸ್ತೆ ಸಂಚಾರ ನಿಯಮ ಪಾಲನೆಯ ಬಗ್ಗೆ ಜಾಗೃತಿಯೂ ಹೆಚ್ಚಳವೂ ಆಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಇನ್ನೂ10 ದಿನಗಳು ಮಾತ್ರ ಬಾಕಿ ಇರುವುದರಿಂದ ಉಳಿದವರು ತಪ್ಪದೇ ಈ ಅವಕಾಶ ಬಳಸಿಕೊಳ್ಳಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.ಇದನ್ನು ಓದಿ: ಮಾನಸಿಕ ಖಿನ್ನತೆಯಿಂದ ತಾಯಿ ಆತ್ಮಹತ್ಯೆ, ಇಬ್ಬರು ಮಕ್ಕಳು ಅನಾಥ..!