ಭಾನುವಾರದಂದು ವಿಜಯಪುರ ನಾಗರೀಕರ ವೇದಿಕೆ ಹಾಗೂ ಅಮ್ಮ ಫೌಂಡೇಶನ್ ಸಹಯೋಗದೊಂದಿಗೆ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟನೆ ಮಾಡಿ ಸನ್ಮಾಯಿಸಲಾಯಿತು.
ಸಾಹಿತಿ ಹಾಗೂ ಚಿಂತಕರಾದ ಡಾ. ರಹಮತ್ ತರೀಕೆರೆ ಅವರು ಸಾಂಸ್ಕೃತಿಕ ಶಿಕ್ಷಣ ಹಾಗೂ ಸಾಮಾಜಿಕ ನಾಯಕತ್ವದ ಮೌಲ್ಯಗಳ ಕುರಿತಾಗಿ ಪ್ರತಿಪಾದಿಸಿದರು. ಇವತ್ತಿನ ಸಾಮಾಜಿಕ ಸಂದರ್ಭದಲ್ಲಿ ಸಾಂಸ್ಕೃತಿಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಹೀಗೆ ಸಾಂಸ್ಕೃತಿಕ ಶಿಕ್ಷಣವಿಲ್ಲದ ರಾಜಕಾರಣಿಗಳು, ವಿದ್ಯಾರ್ಥಿಗಳು ಸಮಾಜಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ. ಇವತ್ತಿನ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಶಿಕ್ಷಣ ಹಾಗೂ ಸಾಮಾಜಿಕ ನಾಯಕತ್ವದ ತುರ್ತು ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಆಧುನಿಕ ಶಿಕ್ಷಣದಿಂದ ವೃತ್ತಿಜೀವನ ಸುಭದ್ರಗೊಳ್ಳುತ್ತಿದೆ. ವಿದ್ಯಾರ್ಥಿಗಳು ಪ್ರತಿಭಾಸಂಪನ್ನರಾಗುತ್ತಿದ್ದಾರೆ. ಆದರೆ, ನಾಡು, ನುಡಿ ಹಾಗೂ ಸಾಂಸ್ಕೃತಿಕ ಗರಿಮೆಯನ್ನು ಮರೆತಿದ್ದಾರೆ. ದೇಶವು ಸ್ವತಂತ್ಯ್ರ ಪಡೆದ ಸಂದರ್ಭದಲ್ಲಿ ಆರೋಗ್ಯವಂತರ ಕೈಗೆ ಸಿಕ್ಕಿದ್ದು ಅದೃಷ್ಟಕರ. ಅಂದು ಮಾನವೀಯ ದೃಷ್ಟಿಯಿಂದ ದೇಶವನ್ನು ಕಟ್ಟಿದರು. ಆದರೆ, ಇವತ್ತಿನ ಸಂದರ್ಭದಲ್ಲಿ ಅಂತಹ ನಾಯಕರ ಬಗ್ಗೆಯೂ ತುಚ್ಛವಾಗಿ ಮಾತನಾಡುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದಿದ್ದಾರೆ. Noise Pulse 2 Max 1.85" Display, Bluetooth Calling Smart Watch, 10 Days Battery, 550 NITS Brightness, Smart DND, 100 Sports Modes, Smartwatch for Men and Women (Jet Black)
ಸಾಂಸ್ಕೃತಿಕ ಸಿರಿತನವನ್ನು ಸ್ಮರಿಸುವುದು, ಚಾರಿತ್ರಿಕ ಹಿನ್ನಲೆಯನ್ನು ತಿಳಿಯಪಡಿಸುವ ಇತಿಹಾಸ ಪ್ರಚಾರ ಪಡಿಸುವ ಕೆಲಸವಾಗಬೇಕಿದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಅವರನ್ನೊಳಗೊಂಡಂತೆ ಹ.ಮ.ಪೂಜಾರ, ಸೋಮನಿಂಗ ಧನಗೊಂಡ ಅವರನ್ನು ಸನ್ಮಾನಿಸಲಾಯಿತು. ಇದನ್ನೂ ಓದಿ: ಸೈಬರ್ ಕಿರುಕುಳ - ಇದು ಮಹಿಳೆಯರಿಗಾಗುತ್ತಿರುವ ಆನ್‌ಲೈನ್ ದೌರ್ಜನ್ಯದ ಕರಾಳ ಮುಖ!