ಬೆಂಗಳೂರು: ಇಂದು ಬೆಳಗ್ಗೆ ಸದಾಶಿವನಗರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದಾರೆ. ಡಿಕೆಶಿ ಮನೆಯಲ್ಲಿ ನಡೆಯುತ್ತಿರುವ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಡಿಕೆಶಿ ಮನೆಗೆ ಸಂಪರ್ಕಿಸುವ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಸಂಪೂರ್ಣ ಬಂದ್ ಮಾಡಲಾಗಿದೆ. ಸಿಎಂ ಬಂದು ಹೋಗುವವರೆಗೆ ವಾಹನ ಸಂಚಾರಕ್ಕೆ ತಡೆ. 7 ಇನ್‌ಸ್ಪೆಕ್ಟರ್, 12 ಸಬ್ ಇನ್‌ಸ್ಪೆಕ್ಟರ್ ಸೇರಿ ಒಟ್ಟು 120 ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ನಿಯೋಜನೆ. EthnicJunction Women Georgette Relaxed Fit Tie & Dye & Embroidered A-Line Flared Kurta,Summer Kurta,Kurta For Office,Long Kurti
ಶನಿವಾರ ಡಿಕೆಶಿ ಸಿಎಂ ಮನೆಗೆ ಬ್ರೇಕ್‌ಫಾಸ್ಟ್‌ಗೆ ಭೇಟಿ ನೀಡಿದ್ದರು. ಇಂದು ಅದರ ಮುಂದುವರಿದ ಭಾಗವಾಗಿ ಸಿಎಂ ಡಿಕೆಶಿ ಮನೆಗೆ ಆಗಮಿಸಿದ್ದು, ಪಕ್ಷದಲ್ಲಿ ಒಗ್ಗಟ್ಟಿನ ಸಂದೇಶ ನೀಡುವ ಉದ್ದೇಶ ಹೊಂದಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಈ ಬ್ರೇಕ್‌ಫಾಸ್ಟ್ ರಾಜಕೀಯ ತಂತ್ರಗಾರಿಕೆ ನಡೆಯುತ್ತಿದೆ.
ಪೋಸ್ಟರ್ ಕದನ, ನಾಯಕತ್ವ ಗೊಂದಲದ ಊಹಾಪೋಹಗಳ ನಡುವೆ ನಾವು ಒಗ್ಗಟ್ಟಾಗಿದ್ದೇವೆ ಎಂಬ ಸ್ಪಷ್ಟ ಸಂದೇಶ ಸಿಎಂ-ಡಿಸಿಎಂ ಸಂಧಾನದಿಂದ ಹೊರಬೀಳಲಿದೆ. ತಮ್ಮ ಪಕ್ಷದ ಶಾಸಕರಿಗೆ, ವಿರೋಧ ಪಕ್ಷಗಳಿಗೆ, ಒಡೆಯಲು ಹೊಂಚು ಹಾಕುವ ಶತ್ರುಗಳಿಗೆಲ್ಲ ಈ ಮೀಟಿಂಗ್ ಸಂದೇಶವಾಗಿದೆ.ಇದನ್ನು ಓದಿ: ದೈವ ಅನುಕರಣೆ ವಿವಾದ: ಕ್ಷಮೆಯಾಚಿಸಿದ ನಟ ರಣವೀರ್ ಸಿಂಗ್! ಇದು ಕನ್ನಡಿಗರ ಗೆಲುವು?
ಬ್ರೇಕ್‌ಫಾಸ್ಟ್ ಮುಗಿದ ಬಳಿಕ ಉಭಯ ನಾಯಕರು ಸಂಯುಕ್ತ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ. ಆದರೆ ಈ ಬ್ರೇಕ್‌ಫಾಸ್ಟ್ ರಾಜಕಾರಣಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಬ್ರೇಕ್‌ಫಾಸ್ಟ್ ಇಲಾಖೆ ಮಾತ್ರ ಕರ್ನಾಟಕದಲ್ಲಿ ಚುರುಕಾಗಿ ಚಾಲ್ತಿಯಲ್ಲಿದೆ. ಸಿಎಂ-ಡಿಸಿಎಂ ಆಹಾರ ಪ್ರವಾಸ ನಿಲ್ಲಿಸಿ, ಆಡಳಿತದ ಕಡೆ ಗಮನ ಹರಿಸಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟಾಂಗ್ ನೀಡಿದ್ದಾರೆ.ಇದನ್ನು ಓದಿ: ದೈವವನ್ನು ಮಿಮಿಕ್ರಿ ಮಾಡಿ ಕನ್ನಡಿಗರನ್ನು ಕೆದಕಿದ ರಣವೀರ್ ಸಿಂಗ್‌ನ ಸಿನಿಮಾಗೆ ಸಂಕಷ್ಟ!ಇಲ್ಲಿದೆ ಮಾಹಿತಿ