Skip to main content
ವಿಡಿಯೋ
1/3
general

ವಿದ್ಯಾರ್ಥಿಗಳಿಗೆ ಸಮರ್ಥವಾಗಿ ಓದುವ ತಂತ್ರಗಳು - ಇಲ್ಲಿದೆ ಮಾಹಿತಿ!

By Shravanthi R
ವಿದ್ಯಾರ್ಥಿಗಳಿಗೆ ಸಮರ್ಥವಾಗಿ ಓದುವ ತಂತ್ರಗಳು - ಇಲ್ಲಿದೆ ಮಾಹಿತಿ!

ಕಡಿಮೆ ಅವಧಿಯಲ್ಲಿ ಹೆಚ್ಚು ಓದುವ ಸವಾಲು ಇದ್ದಿದ್ದೆ. ವಿಷಯವಾರು ಸಮರ್ಥವಾಗಿ ಓದುವ ಹಾಗೂ ಓದಿದ್ದನ್ನು ಅರ್ಥಮಾಡಿಕೊಳ್ಳಲು ಇಲ್ಲಿವೆ ಸಹಾಯಕಾರಿ ತಂತ್ರಗಳು.

ಇವತ್ತಿನ ವೇಗವಾದ ಜಗತ್ತಿನಲ್ಲಿ ರಾಶಿ ರಾಶಿ ಇನ್‌ಫಾರ್ಮೇಶನ್‌ಗಳು ಒದಗುತ್ತದೆ. ಆದರೆ, ಎಲ್ಲವನ್ನೂ ಅಧ್ಯಯನ ಮಾಡುವಷ್ಟು ಸಮಯದ ಅಭಾವ ಒಂದೆಡೆಯಾದರೆ, ಒತ್ತಡ, ಅಸಮರ್ಥತೆ ಮತ್ತೊಂದೆಡೆ. ಇದಕ್ಕಾಗಿ, ಸುಲಭ ಹಾಗೂ ತ್ವರಿತ ಓದುವ ಶೈಲಿಗಾಗಿ ಮಾರ್ಗಗಳನ್ನು ಇಲ್ಲಿ ತಿಳಿಸಲಾಗಿದೆ.

  1. ಚಂಕ್‌ ರೀಡಿಂಗ್‌ - ಪ್ರತಿ ಸಲವೂ ಓದುವಾಗ ಪದ ಪದಗಳನ್ನು ಪ್ರತ್ಯೇಕವಾಗಿ ಓದುವುದು ಬಿಟ್ಟು, ಪದ ಗುಚ್ಛಗಳನ್ನು ಓದುವುದು. ಪದಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಇದು ಸಹಕರಿಸಲಿವೆ. ಉದಾಹರಣೆಗೆ - ಫ್ರೇಸಲ್‌ ರೀಡಿಂಗ್‌ - ಒಂದು ಸುತ್ತಿನಲ್ಲಿ ವಾಕ್ಯವನ್ನು ಓದುವುದು. ದೊಡ್ಡ ವಾಕ್ಯಗಳನ್ನು ತುಂಡರಿಸಿ, ಅರ್ಥವಾಗದ ಪದಗಳನ್ನು ನೋಟ್‌ ಮಾಡಿಕೊಳ್ಳುವುದು.

  1. ಫಿಂಗರ್‌ ಪೇಸಿಂಗ್‌ - ಓದುವಾಗ ನಿಮ್ಮ ಬೆರಳು ಅಥವಾ ಪೆನ್‌ನಿಂದ ಸಾಲು ಸಾಲಿಗೆ ಪಾಯಿಂಟ್‌ ಮಾಡಿ ಓದುವುದಾಗಿದೆ. ಇದರಿಂದ ಕಣ್ಣಿಗೂ ನಿಮ್ಮ ಜ್ಞಾನಾರ್ಜನೆಗೆ ಕೆಲಸ ನೀಡಿದಂತಾಗುವುದು. ಇದರಿಂದ ಓದಿನ ವೇಗ ಮತ್ತು ಮರು ಓದಿಗೆ (Back-reading) ಪರಿಣಾಮಕಾರಿಯಾಗಿ ಹಚ್ಚುತ್ತದೆ. 

  1. ಸಬ್‌ವೋಕಲೈಸೇಶನ್‌ ಮಾಡದಿರುವುದು - ಮೌನ ಉಚ್ಛರಣೆ ಹಾಗೆಂದರೆ, ಮನಸ್ಸಿನಲ್ಲೇ ಪಠ್ಯವನ್ನು ಉಚ್ಛರಿಸುವ ಕ್ರಿಯೆ(Silent Pronounciation). ಇದನ್ನು ತಪ್ಪಿಸುವುದು ಬಹುಮುಖ್ಯವಾಗಿದೆ. ಇದರಿಂದ ಪದಗಳ ಅರ್ಥ ಹಾಗೂ ಸಾರವನ್ನು ಕಳೆದುಕೊಂಡಂತಾಗುವುದು. ಆದ್ದರಿಂದ ಓದುವಾಗ ಉಚ್ಛಾರಣೆಗಿಂತಲೂ ಅದರ ಸಾರಾಂಶದ ಮೇಲೆ ಗಮನವಿರಿಸಿ. 

  1. ಸ್ಕಿಮ್ಮಿಂಗ್‌ ಮತ್ತು ಸ್ಕ್ಯಾನಿಂಗ್‌ - 

ಸ್ಕಿಮ್ಮಿಂಗ್‌ - ವಿಷಯಗಳನ್ನು ಸಂಕ್ಷಿಪ್ತವಾಗಿ ಓದಿ ಅರ್ಥೈಸಿಕೊಂಡು ಗ್ರಹಿಸಿಕೊಳ್ಳುವುದು. ಇದರಿಂದ ಪುನಾರವರ್ತನೆ ಹಾಗೂ ಮನನಕ್ಕೆ ಅನುಕೂಲವಾಗಲಿದೆ.

ಸ್ಕ್ಯಾನಿಂಗ್‌ - ಮಾಹಿತಿ ಅಥವಾ ಓದಿನ ಸಮಗ್ರತೆಯನ್ನು ಸರಳವಾಗಿ ತಿಳಿದುಕೊಳ್ಳಲು ಕೀವರ್ಡ್ಸ್‌, ಪಾಯಿಂಟ್ಸ್‌ಗಳನ್ನು ಪಟ್ಟಿಮಾಡಿಕೊಳ್ಳುವುದು. ಇದು ವಿಷಯಗಳನ್ನು ಶೀರ್ಘವಾಗಿ ನೆನಪಿಟ್ಟುಕೊಳ್ಳಲು ಹಾಗೂ ವಿಶ್ಲೇಷಿಸಲು ಸಹಕರಿಸುತ್ತದೆ. 

  1. ಕನಿಷ್ಠ 10 ನಿಮಿಷದ ಅಭ್ಯಾಸ - ಈ ಎಲ್ಲಾ ತಂತ್ರಗಳನ್ನು ಪ್ರತಿದಿನವೂ ಸಮಯಕ್ಕೆ ತಕ್ಕಂತೆ ಅಭ್ಯಾಸ ಮಾಡಿಕೊಳ್ಳುವುದರಿಂದ ವೇಗದ ಓದು ಹಾಗೂ ತಿಳುವಳಿಕೆ ಎರಡೂ ಸುಧಾರಣೆ ಹೊಂದುತ್ತದೆ. OnePlus Bullets Wireless Z3 in-Ear Neckband with 12.4mm Drivers, 3D Spatial Audio,10 mins Charge for 27 hrs Playback, 4 EQ preset, Dynamic bass Enhancement & BT5.4

ಸಲಹೆಗಳನ್ನು ಆರಂಭಿಸುವುದು ಹೇಗೆ?

  • ಓದುವ ಮನಸ್ಥಿತಿಗೆ ಒಪ್ಪುವ ಸಮಯ ಹಾಗೂ ಸ್ಥಳವನ್ನು ಆಯ್ಕೆ ಮಾಡಿ.

  • ಮೊದಲಿಗೆ ಓದುವ ಪ್ರಾರಂಭದಲ್ಲಿ ತಂತ್ರಗಳನ್ನು ಅಳವಡಿಸಿಕೊಳ್ಳಲು ತರಾತುರಿ ಬೇಡ. ತಾಳ್ಮೆಯಿಂದ ನಿಯಮಿತವಾಗಿ ಅಭ್ಯಾಸ ಮಾಡಿ.

  • ಓದೋಕೆ ಬಾಯಿಪಾಠ ಮಾಡುವುದಕ್ಕಿಂತಲೂ ವಿಷಯಗಳ ಅರ್ಥಗಳನ್ನು ಗ್ರಹಿಸಲು ಮುಂದಾಗಿ.

ಸಾಮಾನ್ಯ ಓದುವ ಮಾನದಂಡಗಳಿಗಿಂತಲೂ ವಿಷಯವನ್ನು ಸಮರ್ಥವಾಗಿ ಗ್ರಹಿಸಲು Speed Reading ಗೆ ಮೇಲಿನ ಮಾರ್ಗಗಳು ಸಹಯಾಕವಾಗಲಿದೆ. ಯಾವುದೇ ಜ್ಞಾನ ಅಥವಾ ಕೌಶಲ್ಯವನ್ನು ಕರಗತವಾಗಿಸಿಕೊಳ್ಳಲು ಅದಕ್ಕೆ ಬೇಕಾದಷ್ಟು ಸಮಯವನ್ನು ಹಿಡಿದೇ ತೀರುವುದು. ಅದರಿಂದ ಸಮಯವನ್ನು ಸಮರ್ಥವಾಗಿ, ಸಂತುಷ್ಟವಾಗಿ ಬಳಸಿಕೊಳ್ಳುವುದು ಒಳಿತು. ಇದನ್ನೂ ಓದಿ: ದೇಶದಲ್ಲಿನ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳ ಗಾಳಕ್ಕೆ ಸಿಬಿಐ ತನಿಖೆ - ಸುಪ್ರೀಂಕೋರ್ಟ್‌ ಆದೇಶ!