Skip to main content
ವಿಡಿಯೋ
1/3
cinema

ಮತ್ತೆ ಒಂದಾದ KGF ಜೋಡಿ! ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್–ರವಿ ಬಸ್ರೂರು ಸಂಗೀತ ಮೆರೆವಣಿಗೆ ಆರಂಭ!

By Ram Chethan
ಮತ್ತೆ ಒಂದಾದ KGF ಜೋಡಿ! ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್–ರವಿ ಬಸ್ರೂರು ಸಂಗೀತ ಮೆರೆವಣಿಗೆ ಆರಂಭ!

ಯಶ್ ಅಭಿನಯದ ಸಿನಿಮಾಗೆ ರವಿ ಬಸ್ರೂರು ಸಂಗೀತ ಸಂಯೋಜನೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ, ಹಾಲಿವುಡ್ ಮಟ್ಟದ ಮೇಕಿಂಗ್‌ ಸಿನಿಮಾ ಸಿದ್ಧತೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ಕುರಿತು ಅಭಿಮಾನಿಗಳಲ್ಲಿ ನಿರೀಕ್ಷೆ ಇದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಸಿನಿಮಾ ಕುರಿತ ಯಾವುದೇ ಮಾಹಿತಿ ಲೀಕ್ ಆಗದಂತೆ ತಂಡ ವಿಶೇಷ ಎಚ್ಚರಿಕೆ ವಹಿಸಿದೆ. ಇದೀಗ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡುವವರ ಹೆಸರು ಸ್ಪಷ್ಟವಾಗಿದೆ. ಹಲವಾರು ಚರ್ಚೆಗಳ ಮಧ್ಯೆ, ಅಂತಿಮವಾಗಿ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಅವರನ್ನು ಮ್ಯೂಸಿಕ್ ಡೈರೆಕ್ಟರ್ ಆಗಿ ಆಯ್ಕೆ ಮಾಡಲಾಗಿದೆ.

ಅನಿರುದ್ಧ್ ರವಿಚಂದರ್ ಹೆಸರು ಸಾಕಷ್ಟು ಕಾಲ ಕೇಳಿಬಂದಿದ್ದರೂ, ತಂಡ ಕೊನೆಯಲ್ಲಿ ಮನಸ್ಸು ಬದಲಿಸಿಕೊಂಡಿದೆ. ಅನಿರುದ್ಧ್ 15 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವರದಿ ಕೂಡ ಇದ್ದರೂ, ಈಗ ಆಯ್ಕೆಯಾದದ್ದು ಕನ್ನಡದ ಪ್ರತಿಭೆಯಾದ ರವಿ ಬಸ್ರೂರೇ. ಯಶ್ ಅವರ ‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳಿಗೆ ರವಿ ನೀಡಿದ ಸಂಗೀತ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದಿತ್ತು. ‘ಟಾಕ್ಸಿಕ್’ ಗ್ಲಿಂಪ್ಸ್ ವಿಡಿಯೋಕ್ಕೂ ರವಿ ಅವರು ಸಂಗೀತ ನೀಡಿದ್ದರು.Safari Genius Alley Set of 3 (Cabin + Medium + Large) Trolley Bags, Hard Case Polypropylene, 4 Wheels, 360 Degree Wheeling Luggage, Suitcase for Travel, Black

‘ಟಾಕ್ಸಿಕ್’ ಸಿನಿಮಾವನ್ನು ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲಿ ಸಹ ಒಂದೇ ವೇಳೆ ಶೂಟ್ ಮಾಡಲಾಗುತ್ತಿದೆ. ಹಾಲಿವುಡ್ ಮಟ್ಟದ ಪ್ರೇಕ್ಷಕರಿಗೆ ತಲುಪಬೇಕು ಎಂಬ ಉದ್ದೇಶದಿಂದ ಮೇಕಿಂಗ್ ಗಟ್ಟಿಯಾಗಿದ್ದು, ಸ್ಟಂಟ್ ಸೀಕ್ವೆನ್ಸ್‌ಗಳನ್ನು ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆಜೆ ಪೆರ್ರಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಛಾಯಾಗ್ರಹಣವನ್ನು ರಾಜೀವ್ ರವಿ ನಡೆಸುತ್ತಿದ್ದಾರೆ.

ಯಶ್ ಹಾಗೂ ತಂಡದವರು ರವಿ ಬಸ್ರೂರಿನ ಸ್ಟುಡಿಯೋಗೆ ಆಗಾಗ ಭೇಟಿ ನೀಡಿ, ಸಂಗೀತ ಕೆಲಸದ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ರವಿ ‘ಟಾಕ್ಸಿಕ್’ಗೆ ಯಾವ ರೀತಿ ತೀವ್ರ ಮತ್ತು ಭಾವನಾತ್ಮಕ ಸಂಗೀತ ಸಿದ್ಧಪಡಿಸುತ್ತಾರೆ ಎಂಬುದರ ಕುರಿತು ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಹೆಚ್ಚಿದೆ.ಸಮಂತಾ–ರಾಜ್ ವಿವಾಹ ಯಾವ ಪದ್ಧತಿಯಲ್ಲಿ ಆಯ್ತು ಗೊತ್ತಾ? ಇದರ ವಿಶೇಷತೆ ಏನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್’ ಸಂಸ್ಥೆಗಳು ಚಿತ್ರವನ್ನು ನಿರ್ಮಿಸುತ್ತಿವೆ. ಈ ಭಾರೀ ಬಜೆಟ್ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಲಿದ್ದಾರೆ. ಮಾರ್ಚ್ 19ರಂದು ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ.