Skip to main content
ವಿಡಿಯೋ
1/3
general

ಕೃತಕಬುದ್ದಿಮತ್ತೆಯಿಂದಾಗಿ ಜನರು ಕೆಲಸವನ್ನೇ ಮಾಡದ ದಿನಗಳು ಬರಲಿವೆ - ಎಲಾನ್‌ ಮಸ್ಕ್‌ ಭವಿಷ್ಯವಾಣಿ!

By Shravanthi R
ಕೃತಕಬುದ್ದಿಮತ್ತೆಯಿಂದಾಗಿ ಜನರು ಕೆಲಸವನ್ನೇ ಮಾಡದ ದಿನಗಳು ಬರಲಿವೆ -  ಎಲಾನ್‌ ಮಸ್ಕ್‌ ಭವಿಷ್ಯವಾಣಿ!

ಜೆರೋಧಾದ ಸಹಸಂಸ್ಥಾಪಕ ನಿಖಿಲ್‌ ಕಾಮತ್‌ ಅವರ ʻಪೀಪಲ್‌ ಬೈ ಡಬ್ಲ್ಯೂಟಿಎಪ್‌ʼ ಪಾಡ್‌ಕಾಸ್ಟ್‌ನಲ್ಲಿ, ಎಐ ಕುರಿತು ಸಂವಾದ ನಡೆಸಿದ ಸ್ಪೇಸ್‌ಎಕ್ಸ್‌ ಹಾಗೂ ಟೆಸ್ಲಾದ ಮಾಲೀಕ ಹಾಗೂ ಜಾಗತೀಕ ಸಿರಿವಂತ ಉದ್ಯಮಿ ಎಲಾನ್‌ ಮಸ್ಕ್‌ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಆರ್ಟಿಫೀಷಿಯಲ್‌ ಇಂಟಲಿಜೆನ್ಸ್‌ (ಎಐ) ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿದೆ. ಇದರ ಪರಿಣಾಮದಿಂದಾಗಿ ಮುಂದಿನ ದಿನಮಾನಗಳಲ್ಲಿ ಜನರು ಕೆಲಸವನ್ನು ಮಾಡುವ ಪ್ರಮೇಯಗಳು ಕಡಿಮೆಯಿರಬಹುದು ಎಂದು ಅವರು ಉದ್ಯಮಿ ನಿಖಿಲ್‌ ಕಾಮತ್‌ ಅವರೊಟ್ಟಿಗಿನ ಪಾಡ್‌ಕಾಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. 

ಕೃತಕಬುದ್ದಿಮತ್ತೆಯ ಎಫೆಕ್ಟ್‌ನಿಂದಾಗಿ, ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲೇ ಭಾರಿ ಬದಲಾವಣೆಯುಂಟಾಗಲಿದ್ದು, ಜನರಿಗೆ ಕೆಲಸ ಮಾಡುವುದು ಆಯ್ಕೆಯಾಗಿ ಉಳಿಯಲಿದೆ ಎಂದು ಅವರು ವ್ಯಕ್ತಪಡಿಸಿದ್ದಾರೆ. ಎಐನಿಂದ ಕಂಡುಬರುತ್ತಿರುವ ಪ್ರಗತಿಯಿಂದಾಗಿ ಕೆಲಸ ಮಾಡುವುದು ಐಚ್ಛಿಕ ಎಂಬ ಹಂತಕ್ಕೆ ತಲುಪಲಿವೆ. OnePlus Nord Buds 2r True Wireless in Ear Earbuds with Mic, 12.4mm Drivers, Playback:Upto 38hr case,4-Mic Design, IP55 Rating [Deep Grey]

ಎಐ ಭವಿಷ್ಯಕಾಲದ ಕುರಿತು ನುಡಿದಿರುವ ಅವರು, ಎಐ ಬೆಳವಣಿಗೆಯು ಮುಂದಿನ ಹಂತವಾಗಿ ನಿಮ್ಮ ತೋಟದಲ್ಲಿ ನೀವೇ ತರಕಾರಿ ಬೆಳೆಸಬಹುದು ಹಾಗೂ ಅಂಗಡಿಗೆ ಹೋಗಿ ಖರೀದಿಸುವುದು ನಿಮ್ಮ ಕೆಲಸವಾಗಬಹುದು, ಜನರು ಏಳು ದಿನಗಳ ತೀವ್ರ ನಿದ್ದೆ ಹಾಗೂ ತಮ್ಮ ಕೆಲಸ ಪುನರಾವರ್ತನೆಯ ಎಚ್ಚರಿಕೆಯ ವೇಳಾಪಟ್ಟಿಯನ್ನು ಅನುಸರಿಸಬಹುದೆಂದು ಅವರು ಹಾಸ್ಯ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸಮರ್ಥವಾಗಿ ಓದುವ ತಂತ್ರಗಳು - ಇಲ್ಲಿದೆ ಮಾಹಿತಿ!