Skip to main content
ವಿಡಿಯೋ
1/3
politics

ಎಸ್‌ಐಆರ್ ವಿರೋಧಿಸಿ ವಿಪಕ್ಷಗಳ ತೀವ್ರ ಪ್ರತಿಭಟನೆ: ಸಂಸತ್‌ನಲ್ಲಿ ಗದ್ದಲ..!

By Sushmitha R
ಎಸ್‌ಐಆರ್ ವಿರೋಧಿಸಿ ವಿಪಕ್ಷಗಳ ತೀವ್ರ ಪ್ರತಿಭಟನೆ: ಸಂಸತ್‌ನಲ್ಲಿ ಗದ್ದಲ..!

ಅದಾನಿ ಆರೋಪಗಳ ಕುರಿತಾದ ಎಸ್‌ಐಆರ್ ಮತ್ತು ಅದರಲ್ಲಿ ಪ್ರಧಾನಿ ಮೋದಿ ಹೆಸರು ಬಂದಿರುವ ಬಗ್ಗೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿ ವಿಪಕ್ಷಗಳು ಇಂದು ಸಂಸತ್‌ನ ಎರಡೂ ಸದನಗಳಲ್ಲಿ ಭಾರೀ ಗಲಾಟೆ ನಡೆಸಿದವು.

ನವದೆಹಲಿ: ಅದಾನಿ ಆರೋಪಗಳ ಕುರಿತಾದ ಎಸ್‌ಐಆರ್ ಮತ್ತು ಅದರಲ್ಲಿ ಪ್ರಧಾನಿ ಮೋದಿ ಹೆಸರು ಬಂದಿರುವ ಬಗ್ಗೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿ ವಿಪಕ್ಷಗಳು ಇಂದು ಸಂಸತ್‌ನ ಎರಡೂ ಸದನಗಳಲ್ಲಿ ಭಾರೀ ಗಲಾಟೆ ನಡೆಸಿದವು.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬೆಳಗ್ಗೆಯೇ ಪ್ರತಿಭಟನೆ ಆರಂಭವಾಯಿತು. “ಅದಾನಿ ಭ್ರಷ್ಟಾಚಾರದಲ್ಲಿ ಮೋದಿ ಭಾಗಿ” ಎಂದು ಘೋಷಣೆ ಕೂಗುತ್ತಾ ವಿಪಕ್ಷ ನಾಯಕರು ಸ್ಪೀಕರ್ ಆಸನದೆದುರು ಧಾವಿಸಿದರು. ಆ ನಂತರ ಸಂಸತ್ ಆವರಣದಲ್ಲಿಯೇ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಧರಣಿ ನಡೆಸಿದರು. Varanga Women Thread Embroidered Floral Motif Kurta

ಕಾಂಗ್ರೆಸ್‌ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್, ಡಿಎಂಕೆ ನಾಯಕ ಟಿ.ಆರ್. ಬಾಲು, ಕಾಂಗ್ರೆಸ್‌ನ ಸುದೀಪ್ ಬಂಡೋಪಾಧ್ಯಾಯ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಎಡಪಕ್ಷಗಳ ನಾಯಕರು ಸೇರಿದಂತೆ ನೂರಾರು ಸಂಸದರು ಈ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟಿಸಿದರು. ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಯಾವುದೇ ಚರ್ಚೆಗೆ ಅವಕಾಶ ನೀಡದೇ ಇರುವುದನ್ನು ಖಂಡಿಸಿದ ವಿಪಕ್ಷಗಳು ಮಧ್ಯಾಹ್ನ 12 ಗಂಟೆವರೆಗೆ ಕಲಾಪ ನಡೆಯಲು ಬಿಡಲಿಲ್ಲ.ಇದನ್ನು ಓದಿ: ಕೃತಕಬುದ್ದಿಮತ್ತೆಯಿಂದಾಗಿ ಜನರು ಕೆಲಸವನ್ನೇ ಮಾಡದ ದಿನಗಳು ಬರಲಿವೆ - ಎಲಾನ್‌ ಮಸ್ಕ್‌ ಭವಿಷ್ಯವಾಣಿ!

ಆ ನಂತರ ಎರಡೂ ಸದನಗಳನ್ನು ದಿನವಿಡೀ ಮುಂದೂಡಲಾಯಿತು. ಜನರ ಹಣ ಲೂಟಿ ಮಾಡಿದ ಆರೋಪ ಇದೆ, ಪ್ರಧಾನಿಯೇ ಭಾಗಿಯಾಗಿದ್ದಾರೆ ಎಂಬ ದಾಖಲೆಗಳಿವೆ. ಇದನ್ನು ಚರ್ಚಿಸದೇ ಸರ್ಕಾರ ತಪ್ಪಿಸಿಕೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.ಇದನ್ನು ಓದಿ: ಡಿ.ಕೆ. ಶಿವಕುಮಾರ್ ಸಿಎಂ ಆಗಲಿ: ಶಬರಿಮಲೆಯಾತ್ರೆ ದೀಪು ಸಿ.ಆರ್..!