ಸಮಸ್ತ ಜಗವು ಜೀವಜಾಲದ ಉಗಮ ಹಾಗೂ ಪರಿಚಲನೆಯೊಂದಿಗೆ ನಂಟು ಬೆಸೆದಿದೆ. ಪ್ರಕೃತಿಯಲ್ಲಾಗುವ ಬದಲಾವಣೆಗಳು, ಸಂಚಲನೆಗಳು ಮನುಷ್ಯನ ಆರೋಗ್ಯದ ಮೇಲೆ ಪ್ರಭಾವಿಸಲಿದೆ ಎಂದು ವರದಿಯು ತಿಳಿಸಿದೆ. ತೀವ್ರವಾದ ಶಾಖವು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದರಿಂದುಂಟಾಗುವ ಮಾನಸಿಕ ಅಸ್ವಸ್ಥತೆಯು, ಮಾನವನ ಮಾನಸಿಕ ನೆಮ್ಮದಿಗೆ ಭಂಗ ತರುವುದು.
ಪ್ರಕೃತಿಯಲ್ಲಿ ಉಂಟಾಗಿರುವ ವೈಪರೀತ್ಯಗಳಿಂದಾಗಿ ಹವಾಮಾನ ಬದಲಾವಣೆ, ಜಾಗತೀಕ ತಾಪಮಾನ ಸೇರಿದಂತೆ, ಪರಿಸರ- ಆತಂಕ (Eco Anxiety) ಪರಿಸರ ಅಪರಾಧಿ ಪ್ರಜ್ಞೆ (Eco - guilt) ಹಾಗೂ ಪರಿಸರ ದುಖಃ (Eco - guilt) ಅನ್ನು ತರಿಸಿದೆ ಎನ್ನಲಾಗಿದೆ. ಇದಕ್ಕೆ ನೇರನಿದರ್ಶನವೆಂದರೆ, ರೈತರ ಸರಣಿ ಆತ್ಮಹತ್ಯೆ. ಈ ಅಶಿಸ್ತಿನಿಂದ ಹಾಗೂ ಬದಲಾಗುತ್ತಿರುವ ಜೀವನಶೈಲಿಯಿಂದ ಜನರು ನರಳುವಂತಾಗಿದೆ.
ಪರಿಸರದಲ್ಲಿ ಹೆಚ್ಚುತ್ತಿರುವ ಪ್ರವಾಹಭೀತಿಗಳು, ಭೂಕುಸಿತಗಳು, ಕ್ಷಾಮ/ಬರಗಾಲ, ಅಸಾಂದರ್ಭಿಕ ಮಹಾ ಮಳೆಗಳು, ಏರುತ್ತಿರುವ ತಾಪಮಾನ, ಸಮುದ್ರಮಟ್ಟ ಏರಿಕೆ ಹೀಗೆ ಸಾಲು ಸಾಲು ವಿದ್ಯಮಾನಗಳು ಮಾನವನ ಜೀವನಾಂಶಗಳಿಗೆ ಪರಿಣಮಿಸಿ, ಕೃಷಿಪರಿಸ್ಥಿತಿಗಳು, ಜಲಮೂಲಗಳು, ಆಹಾರ ಪದ್ದತಿಯಿಂದ ಹಿಡಿದು ಮೂಲ ಸೌಕರ್ಯ, ಆರ್ಥಿಕತೆ ಸೇರಿದಂತೆ ಮಾನಸಿಕ ಒತ್ತಡಕ್ಕೆ ಎಡೆಮಾಡುತ್ತಲಿದೆ. Acnos Brand Analog Watch for Girls 5 Diffrent Dial Diamond Cut Glass Black Leather Watch for Women Analog Girl Watches
ಇನ್ನೂ ಮುಂದುವರೆದಂತೆ ಈ ಕೆಳಗಿನ ಅಂಶಗಳು ಹವಾಮಾನ ಹಾಗೂ ಮಾನವನ ಆರೋಗ್ಯ ಪರಿಮಿತಿಗಳೊಟ್ಟಿಗೆ ಸಂಬಂಧಿಸಿವೆ ಎನ್ನಲಾಗಿದೆ:
ಬಿಸಿಗಾಳಿ ಅಥವಾ ಶಾಖದ ಅಲೆಗಳಿಂದ ʻಸ್ಕಿಜೋಫ್ರೆನಿಯಾʼ ಒತ್ತಡ ಉಂಟಾಗುತ್ತದೆ.
ಹವಾಮಾನ ಬದಲಾವಣೆ, ಭೂಮಿಯ ಅನೈಸರ್ಗಿಕ ಪ್ರವರ್ತನೆ, ಮಳೆ ಏರಿಳಿತಗಳಿಂದ ಕೃಷಿ ವಲಯದಲ್ಲಿ ಆರ್ಥಿಕ ವೈರುಧ್ಯದಿಂದಾಗಿ ರೈತರ ಆತ್ಮಹತ್ಯೆಗಳು ಸಂಭವಿಸುತ್ತಲಿರುವುದು.
ನೈಸರ್ಗಿಕ ವಿಪತ್ತುಗಳಿಂದ ಜಾಗತಿಕ ಸಂಕಷ್ಟ ಹಾಗೂ ಮಾನಸಿಕ ಪ್ರಕ್ಷುಬ್ಧತೆ ತರುವಂಥ ಖಿನ್ನತೆ ಹಾಗೂ ಖಾಯಿಲೆಗಳು ಉಂಟಾಗುತ್ತದೆ.
ಮತ್ತಲವು ಪರಿಸರ ಸಂಬಂಧಿ ಪ್ರಮುಖ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ವೈದ್ಯಕೀಯ ವಿಧಾನ ಮಾತ್ರವಲ್ಲದೇ ನೀತಿ ನಿರೂಪಣಾ ಮಟ್ಟದಲ್ಲೂ ಗುರುತಿಸಲಾಗಿದೆ ಎನ್ನಲಾಗಿದೆ.
ಹವಾಮಾನ ಬದಲಾವಣೆಯು ತರುವ ಮಾನಸಿಕ ಸಮಸ್ಯೆಗಳನ್ನು ಪರಿಗಣಿಸಿ ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ವರದಿಯು ತಿಳಿಸಿದೆ. ಇದನ್ನೂ ಓದಿ: ಕೃತಕಬುದ್ದಿಮತ್ತೆಯಿಂದಾಗಿ ಜನರು ಕೆಲಸವನ್ನೇ ಮಾಡದ ದಿನಗಳು ಬರಲಿವೆ - ಎಲಾನ್ ಮಸ್ಕ್ ಭವಿಷ್ಯವಾಣಿ!