ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಹಿರಿಯ ಸಚಿವರು, ಶಾಸಕರು ಪಾಲ್ಗೊಂಡಿದ್ದರು.
ಈ ಸಭೆಯ ನಂತರ ಅಧಿಕಾರ ಹಂಚಿಕೆ ಹಾಗೂ ಕುರ್ಚಿ ಕಿತ್ತಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಿದೆ ಎನ್ನಲಾಗುತ್ತಿದೆ.ಈ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಯಾರಿಗೂ ಅಧಿಕಾರ ಶಾಶ್ವತವಲ್ಲ. 30 ತಿಂಗಳು ಮುಗಿದ ಮೇಲಾದರೂ ಸಿಎಂ ಸಿದ್ದರಾಮಯ್ಯ ಅಧಿಕಾರ ಬಿಟ್ಟೇ ಬಿಡಬಹುದು. ಅದಕ್ಕಿಂತ ಮೊದಲೇ ಬಿಡಬಹುದು, ಯಾವಾಗ ಬೇಕಾದರೂ ಬಿಡಬಹುದು.rytras Women's Cotton A-Line Kurta Set with Palazzo Pants
ಹೈಕಮಾಂಡ್ ಬಿಡಿ ಅಂದರೆ ಬಿಡಲೇ ಬೇಕಾಗುತ್ತದೆ. ಎಲ್ಲವೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.ಈ ಹೇಳಿಕೆಯಿಂದ ಸಿದ್ದರಾಮಯ್ಯ ಅವರ ಅಧಿಕಾರದ ಭವಿಷ್ಯ ಪೂರ್ತಿಯಾಗಿ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಕೈಯಲ್ಲಿರುವುದು ಮತ್ತೊಮ್ಮೆ ದೃಢಪಟ್ಟಿದೆ.
ಡಿ.ಕೆ. ಶಿವಕುಮಾರ್ ಪಾಳಯದಲ್ಲಿ ಸಚಿವರೊಬ್ಬರೇ ಈ ರೀತಿ ಮಾತನಾಡಿರುವುದು ಪಕ್ಷದ ಒಳಗಿನ ಒತ್ತಡ ಮತ್ತು ರಾಜ್ಯ ನಾಯಕತ್ವದ ಬದಲಾವಣೆಗೆ ತಯಾರಿಯ ಸೂಚನೆಯೆಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಬಿಗ್ ಬಾಸ್ ಕನ್ನಡ 12: ರಜತ್–ಚೈತ್ರಾ ವೈಲ್ಡ್ ಕಾರ್ಡ್ ಟ್ವಿಸ್ಟ್! ಈ ವಾರವೇ ಎಲಿಮಿನೇಶನ್ ಶಾಕ್?
ಬ್ರೇಕ್‌ಫಾಸ್ಟ್ ಮೀಟಿಂಗ್‌ಗಳು, ಒಗ್ಗಟ್ಟಿನ ಫೋಟೋಗಳು ತಾತ್ಕಾಲಿಕ ಶಾಂತಿಯನ್ನು ತಂದರೂ, 2.5 ವರ್ಷದ ಒಪ್ಪಂದದ ಚರ್ಚೆ ಇನ್ನೂ ಜೀವಂತವಾಗಿದೆ. ಬೆಳಗಾವಿ ಚಳಿಗಾಲ ಅಧಿವೇಶನದ ನಂತರ ಹೈಕಮಾಂಡ್ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.ಇದನ್ನು ಓದಿ: ಬಿಗ್ ಬಾಸ್ ಕನ್ನಡ ಫೇವರಿಟ್ ಗಿಲ್ಲಿ ನಟ ‘ಸೂಪರ್ ಹಿಟ್’ ಸಿನಿಮಾದಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ.