Skip to main content
ವಿಡಿಯೋ
1/3
entertainment

ಬಿಗ್ ಬಾಸ್ ಕನ್ನಡ 12: ರಜತ್–ಚೈತ್ರಾ ವೈಲ್ಡ್ ಕಾರ್ಡ್ ಟ್ವಿಸ್ಟ್‌! ಈ ವಾರವೇ ಎಲಿಮಿನೇಶನ್ ಶಾಕ್?

By Ram Chethan
ಬಿಗ್ ಬಾಸ್ ಕನ್ನಡ 12: ರಜತ್–ಚೈತ್ರಾ ವೈಲ್ಡ್ ಕಾರ್ಡ್ ಟ್ವಿಸ್ಟ್‌! ಈ ವಾರವೇ ಎಲಿಮಿನೇಶನ್ ಶಾಕ್?

ರಜತ್ ಮತ್ತು ಚೈತ್ರಾ ವೈಲ್ಡ್ ಕಾರ್ಡ್ ಆಗಿ ಮನೆಗೆ ಬಂದಿದ್ದರೂ, ಈಗಲೇ ಹೊರ ನಡೆಯಲಿದ್ದಾರೆ ಎನ್ನುವ ಸುದ್ದಿ BBK12 ಮನೆಗೆ ಹೊಸ ಕುತೂಹಲ ತಂದಿದೆ. ಬಿಗ್ ಬಾಸ್ ನೀಡಿರುವ ಅನಿರೀಕ್ಷಿತ ಟ್ವಿಸ್ಟ್‌ಗಳು ವೀಕ್ಷಕರಲ್ಲಿ ಚರ್ಚೆ ಹೆಚ್ಚಿಸಿವೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅನಿರೀಕ್ಷಿತ ಟ್ವಿಸ್ಟ್‌ಗಳು ಒಂದಾದ ಮೇಲೊಂದು ನಡೆಯುತ್ತಿವೆ. ಇತ್ತೀಚೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಮನೆಗೆ ಬಂದ ರಜತ್ ಮತ್ತು ಚೈತ್ರಾ ಈಗ ಮತ್ತೆ ಚರ್ಚೆಯ ಕೇಂದ್ರವಾಗಿದ್ದಾರೆ. ಇವರನ್ನು ಈ ವಾರವೇ ಮನೆಯಿಂದ ಹೊರ ಕಳುಹಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ.

ಕಳೆದ ವಾರ ಹಿಂದಿನ ಸೀಸನ್‌ನ ಐದು ಸ್ಪರ್ಧಿಗಳನ್ನು ವಿಶೇಷವಾಗಿ ಕರೆಸಲಾಗಿದ್ದು, ಅವರ ಪೈಕಿ ರಜತ್ ಮತ್ತು ಚೈತ್ರಾ ಅವರನ್ನು ಮಾತ್ರ ವೈಲ್ಡ್ ಕಾರ್ಡ್ ಆಗಿ ಉಳಿಸಿಕೊಳ್ಳಲಾಯಿತು. 58ನೇ ದಿನ ದೊಡ್ಮನೆಗೆ ಎಂಟ್ರಿ ಕೊಟ್ಟ ಇವರಿಬ್ಬರೂ ಮೊದಲ ವಾರದಲ್ಲೇ ಸಾಕಷ್ಟು ಗಣೇಶ ತಂದಿದ್ದರು. ನಂತರ ಅವರು ಎಲ್ಲಾ ಸದಸ್ಯರ ಜೊತೆ ಬೆರೆತು ಹಿಂತೆಗೆದುಕೊಂಡರೂ, ಈಗ ಮತ್ತೆ ಅವರಿಗೇ ಎಲಿಮಿನೇಶನ್ ಗಾಳಿ ಬೀಳುತ್ತಿದೆ.Arayna Women's Cotton Printed Floral Straight Kurta with Palazzo Pants and Dupatta

ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಇವರ ವೈಲ್ಡ್ ಕಾರ್ಡ್ ಎಂಟ್ರಿಯನ್ನು ಘೋಷಿಸಿದ್ದರೂ, ಬಿಗ್ ಬಾಸ್ ಇನ್ನೊಂದು ಹೊಸ ಟ್ವಿಸ್ಟ್‌ಗೆ ಸಿದ್ಧರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಮನೆಯೊಳಗೆ ತೀವ್ರ ಸ್ಪರ್ಧೆ ಮೂಡಿಸಲು ಹಾಗೂ ವೀಕ್ಷಕರಲ್ಲಿ ಕುತೂಹಲ ಹುಟ್ಟಿಸಲು ಇವರನ್ನು ಕೇವಲ ಒಂದು ವಾರ ಮಾತ್ರ ಉಳಿಸಿಕೊಳ್ಳಲಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.ಬಿಗ್ ಬಾಸ್ ಕನ್ನಡ ಫೇವರಿಟ್ ಗಿಲ್ಲಿ ನಟ ‘ಸೂಪರ್ ಹಿಟ್’ ಸಿನಿಮಾದಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ.

ರಜತ್ ಮತ್ತು ಚೈತ್ರಾ ಇಬ್ಬರಿಗೂ ಕೆಲವು ಸಾಮ್ಯತೆಗಳಿವೆ. ಇಬ್ಬರ ಮೇಲೂ ಕೇಸ್ ಇದ್ದುದು, ಜಗಳ ಬಂದಾಗ ಮುಂಚೂಣಿಯಲ್ಲಿ ನಿಲ್ಲುತ್ತಿದ್ದದ್ದು ಇವರಿಬ್ಬರ ವ್ಯಕ್ತಿತ್ವಕ್ಕೆ ಮತ್ತಷ್ಟು ಗಮನ ಸೆಳೆಯುವಂತೆ ಮಾಡಿತ್ತು. ಇದೇ ಕಾರಣಕ್ಕೆ ಅವರನ್ನು ಮನೆಗೆ ಒಳಗೊಳಿಸಲಾಯಿತು ಎಂಬ ಮಾತು ಕೇಳಿಬಂದಿತ್ತು.

ಇದರ ನಡುವೆ, ಮನೆಗೆ ಆಕರ್ಷಕ ಎನಿಸಿರುವ ಗಿಲ್ಲಿ ನಟ ಅವರು ವೀಕ್ಷಕರ ಹೃದಯ ಗೆದ್ದಿದ್ದಾರೆ. ರಿಯಾಲಿಟಿ ಶೋಗಳ ಅನುಭವ ಹೊಂದಿರುವ ಅವರು, ಸಿನಿಮಾ ಡೈಲಾಗ್‌ಗಳು ಮತ್ತು ಪ್ರಸಿದ್ಧ ದೃಶ್ಯಗಳನ್ನು ರೀ-ಕ್ರಿಯೇಟ್ ಮಾಡಿ ಮನೆಯವರಿಗೆ ಉತ್ತಮ ಮನರಂಜನೆ ನೀಡುತ್ತಿದ್ದಾರೆ. ‘ಕೆಜಿಎಫ್’, ‘ಸೂರ್ಯವಂಶ’ ಮೊದಲಾದ ಸಿನಿಮಾಗಳ ಡೈಲಾಗ್‌ಗಳ ಮೂಲಕ ಅವರು ಮನೆಮಂದಿಯನ್ನು ನಗಿಸುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 12 ಈಗ ಎರಡು ತಿಂಗಳು ಪೂರೈಸಿದೆ. ಹೊಸ ಟ್ವಿಸ್ಟ್‌ಗಳು, ವೈಲ್ಡ್ ಕಾರ್ಡ್ ಡ್ರಾಮಾ ಮತ್ತು ಮಂನರಜನೆಯೊಂದಿಗೆ ಈ ಸೀಸನ್ ಇನ್ನಷ್ಟು ರೋಚಕವಾಗುತ್ತಿದೆ. ರಜತ್ ಮತ್ತು ಚೈತ್ರಾ ನಿಜವಾಗಿಯೂ ಹೊರ ಹೋಗ್ತಾರಾ ಅಥವಾ ಇದು ಮತ್ತೊಂದು ಬಿಗ್ ಬಾಸ್ ಆಟವಾ ಎಂಬುದು ವೀಕೆಂಡ್‌ನಲ್ಲೇ ಸ್ಪಷ್ಟವಾಗಲಿದೆ.