ರಾಜ್ಯದ ಕಂದಾಯ ಇಲಾಖೆಯು ಡಿಜಿಟಲ್ ಇ-ಸ್ಟ್ಯಾಂಪ್ (ಡಿಇಎಸ್) ಅನ್ನು ಕಡ್ಡಾಯಗೊಳಿಸಿದೆ. ರಾಜ್ಯಾದ್ಯಾಂತ ನೋಂದಣಿ ಪ್ರಕಿಯೆಯನ್ನು ಡಿಜಿಟಲೀಕರಣಗೊಳಿಸಿದೆ. ಈ ನೋಂದಣಿ ಪ್ರಕ್ರಿಯೆಯು ಭದ್ರತಾ ವ್ಯವಸ್ಥೆಯಲ್ಲಿ ಸುರಕ್ಷತೆ ಹಾಗೂ ಪಾರದರ್ಶಕತೆಯನ್ನು ತೋರುವ ಗುರಿ ಹೊಂದಿದೆ.
ಛಾಪಾ ಕಾಗದ (ಸ್ಟ್ಯಾಂಪ್ ಪೇಪರ್) ವಹಿವಾಟುಗಳಿಗೆ ಬ್ರೇಕ್ ಹಾಕಿ, ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಭದ್ರತಾ ಲೋಪ ಹಾಗೂ ನಕಲಿ ಇ-ಸ್ಟ್ಯಾಂಪ್ ಪ್ರಮಾಣಪತ್ರಗಳಿಂದ ಸರ್ಕಾರಕ್ಕೆ ಆಗುತ್ತಿದ ನಷ್ಟಕ್ಕೆ ಕಡಿವಾಣ ಹಾಕಲು, ಇದು ಸಹಕಾರಿಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಿಜಿಟಲ್ ಇ-ಸ್ಟ್ಯಾಂಪ್ ಪಡೆಯುವ ಮಾರ್ಗ -
ಕಾವೇರಿ ಪೋರ್ಟಲ್ ಮೂಲಕ ನೋಂದಣಿ ಆಗಬೇಕು.
ಪೋರ್ಟಲ್ ಲಾಗಿನ್ ಆದ ಬಳಿಕ ಸ್ಟಾರ್ಟ್ ನ್ಯೂ ಅಪ್ಲಿಕೇಶನ್ ಒತ್ತಿದರೆ, ವಿವಿಧ ಸೇವೆಗಳ ಪಟ್ಟಿ ಕಾಣಲ್ಪಡುತ್ತದೆ. ಅದರಲ್ಲಿ ಇ-ಸ್ಟ್ಯಾಂಪ್ ಆಯ್ಕೆ ಮಾಡಬೇಕು.
ಸ್ಟ್ಯಾಂಪ್ ಡೌನ್‌ಲೋಡ್ ಮಾಡುವಲ್ಲಿ ಏಳು ಹಂತಗಳಿರುತ್ತದೆ.
ಮೊದಲ ಹಂತದಲ್ಲಿ ದಾಖಲೆಯ ವಿಧಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆನಂತರ ವಿವರಗಳನ್ನು ಭರ್ತಿ ಮಾಡುವುದು.
ಅರ್ಜಿದಾರರ ಆಧಾರ್ ಹಾಗೂ ಸಹಿ ಸಹಿತ ಪರಿಶೀಲನೆಗೊಳಿಸಿ ಗುರುತು ದೃಡಪಡಿಸಬೇಕು
(ಆಸ್ತಿ ಸಂಬಂಧಿತ ದಾಖಲೆಗಳಿದ್ದರೆ, ಸರ್ಕಾರದ ದತ್ತಾಂಶಗಳು ಈ ವ್ಯವಸ್ಥೆಯಲ್ಲಿ ಸ್ವಯಂ ಚಾಲಿತವಾಗಿ ಪರಿಶೀಲನೆಗೊಳ್ಳುತ್ತದೆ.)
ಸ್ಟ್ಯಾಂಟ್ ಶುಲ್ಕ ಪಾವತಿಯನ್ನು ಖಜಾನೆಯ ಪಾವತಿ ಗೇಟ್ ವೇಯಲ್ಲಿ ಪಾವತಿ ಮಾಡಬೇಕು
ಶುಲ್ಕ ಪಾವತಿ ದೃಢಪಟ್ಟ ನಂತರ, ಇ-ಸ್ಟ್ಯಾಂಪ್ ಸೃಷ್ಟಿಗೊಳ್ಳುತ್ತದೆ.
ದಾಖಲೆಗಳಿಗೆ ಸಹಿಗಾಗಿ ಮೊಬೈಲ್‌ಗೆ ಇ-ಸಹಿ ಲಿಂಕ್ ಬರುತ್ತದೆ.
ಇ-ಸಹಿ ಆದ ಬಳಿಕ ಇ-ಸ್ಟ್ಯಾಂಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. GUESS Analog Gold Dial Women's Watch-GW0744L2
ಡಿಜಿಟಲ್ ಇ-ಸ್ಟ್ಯಾಂಪ್ ಪ್ರಯೋಜನಗಳು-
ಮಧ್ಯವರ್ತಿಗಳಿಲ್ಲದೇ, ಎಲ್ಲಿದ್ದರೂ ಅರ್ಜಿ ಸಲ್ಲಿಸಿ ಈ ಸ್ಟ್ಯಾಂಪ್ ಪಡೆಯಬಹುದು.
ಸುರಕ್ಷಿತ ಆನ್‌ಲೈನ್ ಪಾವತಿ ವ್ಯವಸ್ಥೆ
ಡಿಜಿಟಲ್ ಸಹಿ ಪ್ರಮಾಣಪತ್ರದಿಂದಾಗಿ ಸುರಕ್ಷಿತ ನೋಂದಣಿ ಪ್ರಕ್ರಿಯೆ
ದಾಖಲೆಗಳ ನಕಲು, ಶುಲ್ಕ ವಂಚನೆಗೆ ಕಡಿವಾಣ
ಸ್ಟ್ಯಾಂಪ್ ವಿವರಗಳು ಸ್ವಯಂ ಚಾಲಿತ ವ್ಯವಸ್ಥೆಗೆ ಒಳಪಟ್ಟಿರುವುದರಿಂದಾಗಿ ತಪ್ಪು ವರ್ಗೀಕರಣ ಹಾಗೂ ಆದಾಯ ವಂಚನೆಗಳಿಗೆ ಅವಕಾಶವಿರುವುದಿಲ್ಲ.
ದಾಖಲೆಯಲ್ಲಿ ಸಹಿ ಮಾಡಿರುವವರ ಗಮನಕ್ಕೆ ಬಾರದೇ ಬದಲಾವಣೆಗಳನ್ನು ಮಾಡಲು ಅಸಾಧ್ಯ.
ದಾಖಲೆಗಳು ಕಾನೂನು ಬದ್ಧವಾಗಿದ್ದು ಭೌತಿಕ ಪ್ರತಿಯ ಅಗತ್ಯವಿಲ್ಲ. ಇದನ್ನೂ ಓದಿ: ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಅಸಮಾಧಾನ ಶಮನಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ..!