ಮನುಷ್ಯರಿಗೆ ಜೀವನ ನಡೆಸಲು ಮೂಲಭೂತ ಅವಶ್ಯಕತೆಗಳಾದ ನೀರು, ಗಾಳಿ, ವಸತಿ, ಆಹಾರ ಸೇವನೆ ಬೇಕೇ ಬೇಕು. ಅದರಂತೆಯೇ, ಒಂದು ಹೊಸ ಉದ್ಯಮದ ಉಗಮಕ್ಕಾಗಿ ಬೇಕಾಗಿರುವ ಮೂಲಭೂತ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.
ಇದಕ್ಕಾಗಿ ಸ್ವ-ಉದ್ಯೋಗ ಮಾಡುವ ಮುನ್ನ ಗಮನಿಸಿಕೊಳ್ಳಬೇಕಾದ ಕೆಲವಂಶಗಳೆಂದರೆ:
ಉದ್ದಿಮೆದಾರನ ಗುಣಲಕ್ಷಣಗಳು
ಬಲವಾದ ಹೊಣೆಗಾರಿಕೆ
ಬಿಜಿನೆಸ್ ಪ್ಲಾನ್
ಹಣಕಾಸು ವ್ಯವಸ್ಥೆ
ಕಾರ್ಯಸಾಧನ ಉತ್ಪನ್ನ
ವ್ಯವಹಾರ ಯೋಜನೆ
ಕಾನೂನಾತ್ಮಕ ಅಂಶಗಳು
ಬ್ಯ್ರಾಂಡ್ ಕ್ರಿಯೇಷನ್ ಮತ್ತು ಮಾರ್ಕೆಟಿಂಗ್ ತಂತ್ರಗಳು
ದತ್ತಾಂಶ ನಿರ್ವಹಣೆ ಮತ್ತು ಗೌಪ್ಯತೆ
ತಜ್ಞರ ಮಾಹಿತಿ ಪ್ರಕಾರ, ಈ ಎಲ್ಲಾ ಮೂಲಭೂತ ಸೌಲಭ್ಯಗಳು ಮುಖ್ಯವಾಗಿದೆ. ಅದರಂತೆ ಒಬ್ಬ ಉದ್ದಿಮೆದಾರನಾಗ ಬಯಸುವ ವ್ಯಕ್ತಿಗಿರಬೇಕಾದ ಗುಣಲಕ್ಷಣಗಳು ಈ ಕೆಳಗಿನಂತಿವೆ:
ದೂರದೃಷ್ಟಿ ಹಾಗೂ ಸಂಯಮ - ಒಂದು ನಿಖರವಾದ ವಿಷನ್, ಸ್ಪಷ್ಟನೆ ಹಾಗೂ ಅದನ್ನು ಸಾಧಿಸಲು ಇರಬೇಕಾದ ತಾಳುವ ಗುಣ ಹೊಂದಿರಬೇಕು
ಮನೋಧೈರ್ಯ ಹಾಗೂ ನಮ್ಯತೆ - ಎಂಥದ್ದೇ ಸಂದರ್ಭದಲ್ಲೂ ಸ್ಥಿತಿಸ್ಥಾಪಕತ್ವ ಕಳೆದುಕೊಳ್ಳದ ಹಾಗೂ ಸದಾ ಚಲನಶೀಲ ವ್ಯಕ್ತಿತ್ವ ಹೊಂದುವುದು.
ಕ್ಯಾಲ್ಕ್ಯುಲೇಟೆಡ್ ರಿಸ್ಕ್ - ಅನಿರೀಕ್ಷಿತವಾಗಿ ಒದಗುವ ಅಪಾಯಗಳನ್ನು ಎದುರಿಸುವಿಕೆ ಹಾಗೂ ಸಂಭಾವ್ಯ ರಿಸ್ಕ್‌ಗಳನ್ನು ತೆಗೆದುಕೊಳ್ಳುವ ಜಾಣ್ಮೆ ಹೊಂದಿರುವುದು.
ಕುತೂಹಲ ಹಾಗೂ ತೆರೆದ ಮನಸ್ಸು - ಹೊಸದಾದ ಕಲಿಕೆಗೆ ಮುಕ್ತ ಮನಸ್ಸು ಹೊಂದಿರುವುದು ಹಾಗು ಸದಾ ಹೊಸ ವಿಷಯಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು
ಆತ್ಮವಿಶ್ವಾಸದ ನಾಯಕತ್ವ - ಕೆಲಸಗಳನ್ನು ನಿಯೋಜಿಸುವುದು ಹಾಗು ಆಂತರಿಕ ಶಕ್ತವಾಗಿ ಸಕಾರಾತ್ಮಕ ಚಿಂತನೆ ಹಾಗೂ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಶಕ್ತರಾಗಿರುವುದು. Coach Analog Grey Dial Women's Watch-14504210
ಓರ್ವ ಉದ್ದಿಮೆದಾರನಿಗೆ ಹಾಗೂ ಆತನ ಉದ್ದಿಮೆಯನ್ನು ನಿಯಂತ್ರಿಸಲು ಬೇಕಾದ ಕೌಶಲಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ತಿಳಿಯುವುದು ಚಿಂತನಶೀಲ, ಆಶಾವಾದ ಹಾಗೂ ಸಹಿಷ್ಣುತೆಯ ಸಂಕೇತವಾಗುತ್ತದೆ. ಇದನ್ನೂ ಓದಿ: ಧರ್ಮಸ್ಥಳ ಷಡ್ಯಂತ್ರ ಪ್ರಕರಣ: ಸಮಗ್ರ ತನಿಖೆ ಕೋರಿಕೆ ಅರ್ಜಿ - ರಾಜ್ಯ ಸರ್ಕಾರ ಉತ್ತರಿಸಲು ಕರ್ನಾಟಕ ಹೈಕೋರ್ಟ್ ಸೂಚನೆ!