ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ವಿರುದ್ದ ನಡೆಸಿದ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಸೌಜನ್ಯಪರ ನ್ಯಾಯ ಹೋರಾಟಗಾರ ಮಹೇಶ್‌ಶೆಟ್ಟಿ ತಿಮರೋಡಿ ಸೇರಿದಂತೆ ಮತ್ತಿತರರ ಚಲನವಲನದ ಕುರಿತು ತನಿಖೆ ನಡೆಸಲು ನಿರ್ದೇಶನ ಕೋರಿರುವ ಅರ್ಜಿ ಸಂಬಂಧ ಉತ್ತರಿಸಬೇಕೆಂದು ಕರ್ನಾಟಕ ರಾಜ್ಯದ ಉನ್ನತ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಧರ್ಮಸ್ಥಳ ಪ್ರಕರಣದಲ್ಲಿ ಭಾಗಿಯಾಗಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ.ಜಯಂತ್ ಹಾಗೂ ಯೂಟ್ಯೂಬರ್ ಸಮೀರ್ ಎಂ.ಡಿ ಅವರಿಗೆ ಹಣಕಾಸಿನ ಮೂಲಗಳು ಹಾಗೂ ಚಟುವಟಿಕೆಗಳ ಸಂಬಂಧ ದೂರಿದ್ದ ಕ್ರಮಗಳ ಬಗ್ಗೆ ಸಮಗ್ರ ವರದಿ ನೀಡಲು ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿಯ ಉಜಿರೆ ನಿವಾಸಿ ಭಾಸ್ಕರ್ ಬಡೆಕೊಟ್ಟು, ಬೆಂಗಳೂರಿಗರಾದ ತೇಜಸ್ ಎ ಗೌಡ ಹಾಗೂ ಧರ್ಮಸ್ಥಳ ನಿವಾಸಿಗಳಾದ ಸುರೇಂದ್ರ ಪ್ರಭು ಹಾಗೂ ಧನಕೀರ್ತಿ ಅರಿಗ ಅವರು ಆಗಸ್ಟ್ 20, ಸೆಪ್ಟೆಂಬರ್ 5, 8 ಹಾಗೂ 9 ರಂದು ಸಲ್ಲಿಸಿದ್ದ ಮನವಿ ಮತ್ತು ದೂರಗಳಿಗೆ ಸಂಬಂಧಿಸಿದಂತೆ, ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯಪೀಠವು, ವಿಚಾರಣೆಯನ್ನು ನಡೆಸಿತು. Coach Elliot Qtz Basic Silver Round Dial Women's Watch
ದಕ್ಷಿಣ ಕನ್ನಡದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯವು ತಿಳಿಸಿದೆ. ಸರ್ಕಾರದ ಪರ ವಕೀಲರು, “ಸರ್ಕಾರದ ನಿಲುವು ತಿಳಿಸಲು ಮೂರುದಿನಗಳ ಕಾಲಾವಧಿಯನ್ನು ನೀಡಬೇಕೆಂದರು. ಈ ಬಗ್ಗೆ ಆಲಿಸಿದ ಪೀಠವು, ಮೂರು ದಿನಗಳಲ್ಲಿ ರಾಜ್ಯ ಸರ್ಕಾರ ಉತ್ತರಿಸಬೇಕೆಂದು ಮಂಗಳವಾರ, ಹೈಕೋರ್ಟ್ ಸೂಚನೆ ನೀಡಿದ್ದು, ವಿಚಾರಣೆಯನ್ನು ಡಿಸೆಂಬರ್ 16 ಕ್ಕೆ ಮುಂದೂಡಿದೆ ಎಂದು ವರದಿಯು ತಿಳಿಸಿದೆ. ಇದನ್ನೂ ಓದಿ: ಡಿಜಿಟಲ್ ಇ-ಸ್ಟ್ಯಾಂಪ್: ಕಾಗದರಹಿತ ಯಶಸ್ವಿ ನೋಂದಣಿ ಪಡೆಯುವುದು ಹೇಗೆ? ಇಲ್ಲಿದೆ ಇದರ ಪ್ರಯೋಜನಗಳು!