ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಆಗಿ ಬಂದ ರಜತ್ ಹಾಗೂ ಚೈತ್ರಾ ಕುಂದಾಪುರ ಈಗ ಮನೆ ಬಿಡಬಹುದು ಎಂಬ ವದಂತಿ ಬಿಗ್ ಚರ್ಚೆಗೆ ಕಾರಣವಾಗಿದೆ. ಇತ್ತೀಚಿನ ಟಾಸ್ಕ್‌ನಲ್ಲಿ ಸೋತ ನಂತರ, ರಜತ್ “ಇದೇ ವಾರ ನಾವು ಹೊರ ಹೋಗಿದ್ದರೆ?” ಎಂದು ಹೇಳಿದ ಮಾತೇ ಗಾಸಿಪ್‌ಗೆ ಕಲ್ಲು ಹೊಡೆದಂತಾಗಿದೆ. ಇವರಿಬ್ಬರೂ ಈ ವಾರ ನಾಮಿನೇಶನ್‌ನಲ್ಲಿ ಇರದಿದ್ದರೂ, ಹಠಾತ್ ಆಗಿ ವಿಲೆಪನ ಸಾಧ್ಯತೆ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿವೆ.Calvin Klein Ck Flex Qtz Multifunction Tonneau Dial Men's Watch
ಈ ಇಬ್ಬರೂ ಮೊದಲಿಗೆ ಅತಿಥಿಗಳಾಗಿ ಪ್ರವೇಶಿಸಿ, ನಂತರ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಮನೆಯೊಳಗೆ ಉಳಿದರು. 58ನೇ ದಿನಕ್ಕೆ ಮನೆ ಸೇರಿದ ಇವರ ಆಟ ನೋಡಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದರು. ಆದರೆ, ಟಾಸ್ಕ್ ಸೋತ ನಂತರ ರಕ್ಷಿತಾ ಶೆಟ್ಟಿ “ನಿಮಗೆ ಮುಂದಿನ ವಾರಗಳಲ್ಲಿ ಇನ್ನೂ ಅವಕಾಶ ಸಿಗುತ್ತದೆ” ಎಂದು ಹೇಳಿದಾಗ, ಅದಕ್ಕೆ ಕೋಪಗೊಂಡ ರಜತ್ “ಈ ವಾರವೇ ನಾವು ಹೋಗಿದ್ದರೆ?” ಎಂದು ಪ್ರಶ್ನಿಸಿದರು. ಈ ಮಾತೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಎಡೆ ಮಾಡಿದೆ.ಇದನ್ನು ಓದಿ:ರೇಣುಕಾಸ್ವಾಮಿ ಕೇಸಿನಲ್ಲಿ ಮತ್ತೊಂದು ತಿರುವು: ಏನಾಯಿತು ವಶಪಡಿಸಿಕೊಂಡ ₹82 ಲಕ್ಷ..? ಇಲ್ಲಿದೆ ಮಾಹಿತಿ
ಡಿಸೆಂಬರ್ 3ರಂದು ನಡೆದ ಜೋಡಿ ಟಾಸ್ಕ್‌ನಲ್ಲಿ ರಜತ್–ಚೈತ್ರಾ ತಂಡ ಸೋತಿದ್ದು, ರಕ್ಷಿತಾ–ಮಾಳು ತಂಡ ಇವರನ್ನು ಆಟದಿಂದ ಹೊರಗಿಟ್ಟಿತು. ಇದರಿಂದ ರಜತ್ ಬೇಸರಗೊಂಡರೂ, ಆತ ಈ ಬಾರಿ ಶಾಂತವಾಗಿದ್ದು, ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಗಿಲ್ಲಿ ಮೇಲೆ ಕೋಪ ತೋರಿಸಿಲ್ಲ. ಅತಿಥಿಯಾಗಿ ಬಂದಿದ್ದಾಗಿದ್ದಷ್ಟು ಆಕ್ರಮಣಕಾರಿ ಆಟ ಈಗ ಕಾಣಿಸುತ್ತಿಲ್ಲ.
ಇವರಿಬ್ಬರೂ ನಾಮಿನೇಟ್ ಆಗದಿದ್ದರೂ, ಏಕಾಏಕಿ ಮನೆ ಬಿಡುವ ಸಾಧ್ಯತೆ ಇದೆ ಎಂಬ ಮಾತು ಜನರ ನಡುವೆ ಹರಿದಾಡುತ್ತಿದೆ. ಇದು ನಿಜವಾ? ಅಥವಾ ಕೇವಲ ಪ್ರಚಾರ? ಇದಕ್ಕೆ ಉತ್ತರ ಸಿಕ್ಕುದು ಬಿಗ್ ಬಾಸ್ ಮುಂದಿನ ಎಪಿಸೋಡ್‌ನಲ್ಲೇ.