ಈ ಯಾಂತ್ರಿಕ ಜೀವನದಲ್ಲಿ ನಿಮ್ಮ ಮಾನಸಿಕ ಸ್ಥಿತಿಯ ಮೇಲೆ ಅನೇಕ ಪರಿಣಾಮಗಳು ಬೀರುತ್ತದೆ. ಜೀವನದ ಸತ್ಯವನ್ನು ಕಂಡುಕೊಳ್ಳುವಿಕೆಯಿಂದ ಹಿಡಿದು ನಿತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಿಕೆಯವರೆಗೆ ಹೊಸ ಬಗೆಯ ಭಯಗಳು ಇದಕ್ಕೆ ಮನೋವಿಜ್ಞಾನದ ಹೆಸರಿನಲ್ಲಿ ʻಫೋಬಿಯಾʼ ಎಂದು ಕರೆಸಿಕೊಳ್ಳುವ ಭಯಗಳು ನಮಗೂ ಗೊತ್ತಿಲ್ಲದೇ ನಮಗೆ ಮುತ್ತತ್ತವೆ ಎಂದು ಮಾನಸಿಕ ತಜ್ಞರ ಅಭಿಪ್ರಾಯಗಳು ತಿಳಿಸಿವೆ ಎನ್ನಲಾಗಿದೆ.
ಇವುಗಳಲ್ಲಿ ಅತ್ಯಂತವಾಗಿ ಕಾಡುತ್ತಿರುವ ಮಾನಸಿಕ ಗುಣಲಕ್ಷಣಗಳ ವಿಧಗಳನ್ನು ಇಲ್ಲಿ ಹೆಸರಿಸಲಾಗಿದೆ. ನಾಲ್ಕಕಕ್ಷರದ ಈ ಮನೋರೋಗ ಲಕ್ಷಣಗಳ ಬಗ್ಗೆ ಮಾಹಿತಿ ಕೆಳಗಿನಂತಿದೆ:
FOMO: (Fear Of Missing Out) - ಕಳೆದುಕೊಳ್ಳುವ ಭಯ
ಇದು ಮತ್ತೊಬ್ಬರ ಸಾಧನೆ ಅಥವಾ ಅಭ್ಯುದಯವನ್ನು ಕಂಡಾಗ ನಮ್ಮಲ್ಲಿ ಉಂಟಾಗಲಿರುವ ಒತ್ತಡದ ಭಯವಾಗಿರುವುದು. ಇನ್ನೊಬ್ಬರಿಗೆ ಸಿಗುವ ಅವಕಾಶಗಳು ನಮಗಿಲ್ಲದಿದ್ದಾಗ, ಕಳೆದುಕೊಂಡ ಅಥವಾ ವಂಚಿತರಾಗಿದ್ದೇವೆ ಎಂಬ ಆತಂಕ ಮತ್ತು ಭಯ.
FOBO: (Fear Of Better Options) - ಉತ್ತಮ ಆಯ್ಕೆ ಮಾಡುವ ಗೊಂದಲ
ನಿರ್ಧಾರವನ್ನು ತೆಗೆದುಕೊಳ್ಳುವ ಸಂದರ್ಭ ಬಂದಾಗ, ಮುಂದೆ ಇನ್ನೂ ಉತ್ತಮ ಆಯ್ಕೆ ದೊರಕಬಹುದೆಂಬ ಪೂರ್ವನಿರ್ಧರಿತ ತಪ್ಪು ಆಯ್ಕೆ ಹಾಗೂ ನಿರ್ಧಾರ ತೆಗೆದುಕೊಳ್ಳುವುದನ್ನು ಮುಂದೂಡುವುದು, ಸಮಯ ವ್ಯರ್ಥಕ್ಕೆ ಅವಕಾಶ ಮಾಡಿಕೊಡುವಂತಾಗುವುದು.
FODO: (Fear Of Doing Over) - ಪುನರಾವರ್ತನೆಯ ಭಯ
ಯಾವುದೇ ಕೆಲಸ ಅಥವಾ ಹಾಕಿಕೊಂಡ ಯೋಜನೆಯನ್ನು ಆರಂಭಿಸುವುದರಲ್ಲಿ ಹಿಂದೇಟು ಹಾಕುವುದು. ಕಾರ್ಯ ಯಶಸ್ಸು ಕಾಣದಿದ್ದಲ್ಲಿ ಮತ್ತೊಮ್ಮೆ ಮೊದಲಿನಿಂದ ಆರಂಭಿಸಬೇಕಾಗುತ್ತದೆ ಅಥವಾ ಮಾಡಬೇಕೆಂಬ ಆತಂಕದ ಛಾಯೆಯಾಗಿರುವುದು. ಇದು ಪರ್ಫೆಕ್ಷನಿಸ್ಟ್‌ಗಳಲ್ಲಿ ನಿರ್ಧಿಷ್ಟತಾಗುಣ ಹೊಂದಿರುವವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. Xiaomi Wired in-Ear Earphones with Mic, Ultra Deep Bass & Metal Sound Chamber (Black)
FOFO: (Fear Of Finding Out) - ಸತ್ಯವನ್ನು ತಿಳಿದುಕೊಳ್ಳುವ ಭಯ
ಸತ್ಯಾಂಶವನ್ನು ತಿಳಿದುಕೊಳ್ಳುವಲ್ಲಿ ಉಂಟಾಗುವ ತೀವ್ರ ಆತಂಕ ಅಥವಾ ಒತ್ತಡ. ವಾಸ್ತವಾಂಶದ ತವಕ ಹಾಗೂ ಸತ್ಯವೂ ನಕಾರಾತ್ಮಕವಾಗಿರಬಹುದು ಎಂಬ ನಿರೀಕ್ಷೆಯಿಂದ ಸಮಸ್ಯೆಗಳನ್ನು ಎದುರಿಸುವುದರಿಂದ ನುಣುಚಿಕೊಳ್ಳುವ ಗುಣಸ್ವಭಾವದವರಾಗಿತ್ತಾರೆ.
FOSO: (Fear Of Starting Over) - ಹೊಸದಾಗಿ ಪ್ರಾರಂಭಿಸುವ ಭಯ
ಪ್ರಸ್ತುತವಾಗಿ ತೃಪ್ತರಾಗದಿದ್ದರೂ, ದೊಡ್ಡ ಬದಲಾವಣೆಗಾಗಿಯೇ ಆಗಲಿ ಹಿಂಜರಿಯುವುದು. ಯಶಸ್ವಿಯಾಗುತ್ತೇನೋ ಇಲ್ಲವೋ ಎಂದು ಅನಿಶ್ಚಿತತೆಯಿಂದ ಹಳೆಯ ಸಂಗತಿಗಳಿಗೆ ಅಂಟಿಕೊಂಡು ಹೊಸದನ್ನು ಪ್ರಯತ್ನಿಸುವುದನ್ನು ಕಷ್ಟವೆಂದು ಭಾವಿಸುವವರು.
ಇದಲ್ಲದೇ,
FoPo - Fear Of Other People Opinions,
FoMU - Fear Of Messing Up
FoDA - Fear Of Doing Anything
FoBA - Fear Of Being Alone
ಈ ಎಲ್ಲಾ ಗುಣಲಕ್ಷಣಗಳು ಸಹಜ ಸ್ವಭಾವದ ಭಾಗಗಳಾಗಿವೆ ಎಂದು ಹೇಳಲಾಗುತ್ತದೆ. ಆದರೆ, ಇವು ಮಾನಸಿಕ ಆರೋಗ್ಯಕ್ಕೆ, ಜೀವನದ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲು ತೊಡಕುಂಟು ಮಾಡುತ್ತದೆ. ಹೀಗಾಗಿ, ಇವುಗಳ ಬಗ್ಗೆ ಗುರುತಿಸಿಕೊಳ್ಳುವಿಕೆ ಹಾಗೂ ನಿರ್ವಹಣೆ ಅಗತ್ಯವಾಗಿದೆ. ಇದನ್ನು ಒಪ್ಪಿಕೊಳ್ಳುವ ಹಾಗೂ ಬದಲಾವಣೆಗಾಗಿ ಪ್ರಯತ್ನಿಸುವುದು ಅತಿಮುಖ್ಯವಾಗಿದೆ. ಇದನ್ನೂ ಓದಿ: 16 ವರ್ಷದ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧ: ಪರಿಣಾಮವೇನು?