Skip to main content
ವಿಡಿಯೋ
1/3
technology

ಶೈಕ್ಷಣಿಕ ಕಲಿಕೆಗೆ ಚಾಟ್‌ಜಿಪಿಟಿ ಶಾಪವೋ.. ವರವೋ..?!

By Shravanthi R
ಶೈಕ್ಷಣಿಕ ಕಲಿಕೆಗೆ ಚಾಟ್‌ಜಿಪಿಟಿ ಶಾಪವೋ.. ವರವೋ..?!

ಓಪನ್‌ಎಐ ಪರಿಚಿತ ಚಾಟ್‌ಜಿಪಿಟಿಯು ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ಹೇಗೆ ಪರಿಣಿಮಿಸಲಿದೆ ಎಂಬುದರ ಕುರಿತಾದ ಸಣ್ಣ ವಿಮರ್ಶೆ ಇದಾಗಿದೆ.

ಚಾಟ್‌ಜಿಪಿಟಿ - ಎಂದರೆ, ಚಾಟ್‌ ಜನರೇಟಿವ್‌ ಪ್ರೀ - ಟ್ರೇನ್ಡ್‌ ಟ್ರಾರ್ನ್ಸ್‌ಫಾರ್ಮರ್‌. ಇದು ಕೃತಕಬುದ್ದಿಮತ್ತೆಯಿಂದ ಒದಗಿಬಂದಿರುವ ಸಾಧನವಾಗಿದ್ದು, ಮಾಹಿತಿ ಯುಗದಲ್ಲಿ ಹೊಸ ಸಂಚಲನ ಮೂಡಿಸಿದೆ. ತಮ್ಮೆಲ್ಲಾ ಪ್ರಶ್ನೆಗಳಿಗೆ, ಶಕ್ತಿಶಾಲಿ ಕಲ್ಪನಾ ಆಲೋಚನೆಗಳಿಂದ ಹಿಡಿದು, ಉಪಯುಕ್ತವಾದ ಮಾಹಿತಿಯನ್ನು ನೀಡುವುದರಿಂದ ಸಹಕರಿಸುತ್ತದೆ. 

ಆದರೆ, ಇದರಿಂದ ಮನುಷ್ಯನ ಬೌದ್ದಿಕ ವಿಕಾಸ ಹಾಗೂ ಮಾನವ ಆಲೋಚನೆಗಳಿಗೆ ಸವಾಲೆಸೆದಿದೆ. ಅಭಿವೃದ್ದಿ ವಿಷಯವಾಗಿ ಪ್ರಗತಿಯತ್ತ ಸಾಗುತ್ತಿರುವ ಈ ಸಾಧನ ಬಳಕೆ ಶಿಕ್ಷಣಕ್ಕೆ ಯಾವ ರೀತಿ ಪ್ರಭಾವ ಬೀರುವುದು ಎಂದು ವಿಶ್ಲೇಷಿಸಲಾಗುತ್ತಿದೆ. ಮಕ್ಕಳು ಇದರಲ್ಲಿ ಅವಲಂಬಿತರಾದರೆ, ತಮ್ಮ ಸ್ವಂತಿಕೆಯ ಗುಣಮಟ್ಟದಿಂದ ಸೃಜನರಾಗುವಲ್ಲಿ ಎಡವುತ್ತಾರೆಂದು ಹೇಳಲಾಗಿದೆ. 

ಇದರ ಪ್ರಾಯೋಗಿಕತೆ ಹಾಗೂ ಸಾಮರ್ಥ್ಯದಿಂದಾಗಿ ಕೆಲಸವನ್ನು ಸುಲಭಗೊಳಿಸಿದೆ. ಅದೇ ಸಮಯದಲ್ಲಿ ಮಾನವನ ಬುದ್ದಿಮಟ್ಟವನ್ನು ಕಸಿಯಲಾಗುತ್ತಿದೆ ಎನ್ನುವ ಧೋರಣೆಗಳೂ ಒಟ್ಟೊಟ್ಟಿಗೆ ಕೇಳಿಬಂದಿದೆ ಎನ್ನಲಾಗಿದೆ. ಎಲ್ಲವನ್ನೂ ಬೆರಳತುದಿಯಲ್ಲಿರಿಸಿ ಮುಗಿಸುವ ಈ ಸಾಧನವು ದೊಡ್ಡ ದೊಡ್ಡ ಪುಸ್ತಕಗಳ ಮೊರೆ ಹೋಗುವುದರಿಂದ ತಪ್ಪಿಸಲಾಗಿದೆ. SOULWIT Protective Kit for AirPods Max, Headband Cover + TPU Case Protector + Silicone Ear Pads Cover, Sweatproof Accessory, Easily Washable, Anti-Scratch (Black)

ತ್ವರಿತ ಮಾಹಿತಿ ದೊರಕುವುದು ಎಂದಾದರೆ, ತಪ್ಪು ಮಾಹಿತಿಗಳ ಸಮಸ್ಯೆಯೂ ವರದಿಯಾಗುತ್ತಲಿದೆ ಎನ್ನಲಾಗಿದೆ. ಸಮಯದ ಉಳಿಕೆಯಾಗುತ್ತದೆ ಎಂದು ಹೇಳಲಾಗಿದ್ದರೂ, ನಿಖರ ಮಾಹಿತಿಯನ್ನು ನೀಡುವಲ್ಲಿ ಇದು ಯಶಸ್ವಿ ಎನ್ನುವುದರಲ್ಲಿ ತೊಡಕಿದೆ ಎನ್ನಲಾಗಿದೆ. ಹೀಗಾಗಿ, ಚಾಟ್‌ಜಿಪಿಟಿ ಎಂಬುದು ವರದಾನ ಹಾಗೂ ಶಾಪ ಎರಡನ್ನೂ ಒಳಗೊಂಡಿದೆ ಎನ್ನಬಹುದಾಗಿದೆ. ಇದನ್ನೂ ಓದಿ: 10 ನೇ ತರಗತಿಯ ಪರೀಕ್ಷಾ ತಯಾರಿಗೆ ಇಲ್ಲಿವೆ ಅತ್ಯುತ್ತಮ ಸಲಹೆಗಳು