Skip to main content
ವಿಡಿಯೋ
1/3
general

10 ನೇ ತರಗತಿಯ ಪರೀಕ್ಷಾ ತಯಾರಿಗೆ ಇಲ್ಲಿವೆ ಅತ್ಯುತ್ತಮ ಸಲಹೆಗಳು

By Shravanthi R
10 ನೇ ತರಗತಿಯ ಪರೀಕ್ಷಾ ತಯಾರಿಗೆ ಇಲ್ಲಿವೆ ಅತ್ಯುತ್ತಮ ಸಲಹೆಗಳು

ಇನ್ನೇನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದೆ. ಇರುವ ಸಮಯವನ್ನು ನಿರ್ಲಕ್ಷಿಸದೇ ಒಂದಷ್ಟು ಟಿಪ್ಪಣಿ ಮಾದರಿಗಳನ್ನು ಹಾಕಿಕೊಂಡು ಓದಿನಲ್ಲಿ ಮಗ್ನರಾಗುವುದು ಪರೀಕ್ಷೆಗೆ ಸಹಾಯಕಾರಿಯಾಗಲಿದೆ.

ಮುಂಬರುವ ಫೆಬ್ರವರಿ, ಮಾರ್ಚ್‌ - ಏಪ್ರಿಲ್‌ನಲ್ಲಿ ನಡೆಯಲಿರುವ 10 ನೇ ತರಗತಿಯ ಪರೀಕ್ಷೆಯು ಮಕ್ಕಳ ವಿದ್ಯಾಭ್ಯಾಸ ಜೀವನದಲ್ಲಿ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅವರ ಅಂಕಗಳಿಕೆ ಮಾತ್ರವಲ್ಲದೇ, ಉತ್ತಮ ಓದುವ ಹವ್ಯಾಸ ಹಾಗೂ ಪರೀಕ್ಷಾ ಮಾದರಿ ಪ್ರದರ್ಶನಕ್ಕಾಗಿ ತಯಾರಿ ನಡೆಸುವುದು ಅತ್ಯವಶ್ಯಕ.

ಇರುವಷ್ಟು ಸಮಯದಲ್ಲಿ ಪೂರ್ಣಪ್ರಮಾಣದ ಓದು, ಅಭ್ಯಾಸ ಹಾಗೂ ತಯಾರಿಯು ಪರೀಕ್ಷೆಗೆ ಪೂರಕವಾದ ಸಾಮರ್ಥ್ಯ ಹಾಗೂ ಆತ್ಮಸ್ಥೈರ್ಯವನ್ನು ತುಂಬಲಿದೆ. ಇದಕ್ಕಾಗಿ ಪಾಲಿಸಬೇಕಾದ ಕೆಲವಂಶಗಳು ಈ ಕೆಳಗಿನಂತಿವೆ:

  • ಸಂಪೂರ್ಣ ಪಠ್ಯಕ್ರಮದ ಅವಲೋಕನ

ಪ್ರತೀ ವಿಷಯಗಳ ಪಠ್ಯಕ್ರಮವನ್ನು ವಿಷಯವಾರು ಅರ್ಥೈಸಿಕೊಳ್ಳುವುದು ಹಾಗೂ ಹೆಚ್ಚಿನ ಅಧ್ಯಯನಕ್ಕಾಗಿ ತಡಕಾಡದೇ, ಸ್ಮಾರ್ಟ್‌ ರೀಡಿಂಗ್‌ ಟೆಕ್ನಿಕ್‌(ಮೈನ್‌ ಕಾನ್ಸೆಪ್ಟ್‌) ಗಳ ಕೀವರ್ಡ್‌ ಸಾರಸಹಿತ ಗ್ರಹಿಸುವಿಕೆ.

  • ದಿನನಿತ್ಯದ ಟಾಸ್ಕ್‌ ಪ್ಲಾನ್ಸ್‌

ದಿನವೂ ಸಣ್ಣ ಸಣ್ಣ ಗುರಿಗಳ ಹೊಂದಿ, ಅರ್ಥಾತ್‌ ವಿಷಯಗಳ ಸಂಗ್ರಹಣೆಯನ್ನು ಬಿಡಿಗೊಳಿಸುವುದು, ಆದಷ್ಟು ಸಮರ್ಪಕವಾಗಿ ಓದುವ ತಂತ್ರ. ಹೆಚ್ಚು ವೀಕ್‌ ಸಬ್ಜೆಕ್ಟ್‌ಗಳ ಕಡೆ ಗಮನ ಹರಿಸುವುದು.

  • ಪ್ರಶ್ನೆಪತ್ರಿಕೆಗಳ ಬಿಡಿಸುವಿಕೆ

ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದರಿಂದ ಪ್ರಶ್ನೆಗಳನ್ನು ಕೇಳಿರುವ ಶೈಲಿ, ಮರುಕಳಿಸುವ ಪ್ರಶ್ನೆಗಳ ಬಗ್ಗೆ ಒಂದು ಐಡಿಯಾ ಬರುವುದು. ಸರಿಯಾದ ಸಮಯಕ್ಕೆ ಉತ್ತರಿಸುವ ಅಭ್ಯಾಸ ಬೆಳೆಸಿಕೊಳ್ಳಲು ಸಹಕಾರಿಯಾಗುವುದು.

  • ನೋಟ್‌ ಮೇಕಿಂಗ್‌ 

ಹೆಚ್ಚು ಬಾರಿ ಕೇಳಲಾದ ಪ್ರಶ್ನೆಗಳು, ವಿಷಯಗಳ ಬಗ್ಗೆ ಕಿರುನೋಟ್ಸ್‌, ಪಾಯಿಂಟ್ಸ್‌, ಕ್ರ್ಯಾಕ್‌ ಹ್ಯಾಕ್ಸ್‌( ಸೂಚಿಗಳು) ಗಳನ್ನು ಬರೆದಿಡುವುದು. ಉದಾಹರಣೆಗೆ ಅಬ್ರಿವೇಷನ್ಸ್‌ಗಳನ್ನು ನೋಟ್‌ ಮಾಡಿಕೊಳ್ಳುವುದು.

  • ಇತರೆ ರೆಫರೆನ್ಸ್‌ ಪುಸ್ತಕಗಳು

ಕಷ್ಟ ವಿಷಯಗಳು, ಪ್ರಶ್ನೆಗಳಿಗೆ ಹೆಚ್ಚು ಕಲಿಕೆಗಾಗಿ ಇತರೆ ಪುಸ್ತಕಗಳ ಸಹಾಯಪಡೆಯಿರಿ. ಆದರೆ, ವಿಷಯಗಳ ಬಗ್ಗೆ ಗೋಜಲು ಮಾಡಿಕೊಳ್ಳದೇ, ಅರ್ಥವಾಗುವ ರೀತಿಯಲ್ಲಿ ಪ್ರಯತ್ನಿಸಿ ಓದಿ.

  • ಪ್ರಾಕ್ಟಿಸ್‌, ಪ್ರಾಕ್ಟಿಸ್‌

ನೋಟ್‌ ಮೇಕಿಂಗ್‌ ಅಲ್ಲದೇ, ಓದಿದ್ದನ್ನು ಕರಗತ ಮಾಡಿಕೊಳ್ಳಲು ಪುನರಾವರ್ತಿತ ಬರವಣಿಗೆ, ಓದುವ ಶೈಲಿಯನ್ನು ಗಟ್ಟಿಗೊಳಿಸಿಕೊಳ್ಳುವುದು. ಸೂತ್ರಗಳು, ಮುಖ್ಯ ಅಂಶಗಳನ್ನು ಬರೆದಿಡಿ. 

  • ಪುನರಾವರ್ತಿತ ಓದು

ಓದಿದ್ದಷ್ಟೂ ಗ್ರಹಿಸಲು ಸಾಧ್ಯವಾಗದಿದಲ್ಲಿ ಸರಳವಾಗಿ ಫೋಕಸ್‌ ಮಾಡಲು ಪ್ರಯತ್ನಿಸಿ. ಮೊದಲ ಆದ್ಯತೆಯನ್ನು ನಿಮಗೆ ಬರೆಯಲು, ಓದಲು ಸಾಧ್ಯವಾಗುವಂತ ವಿಷಯಗಳ ಮೇಲೆ ಕೊಟ್ಟು, ನಂತರ ಯೋಚಿಸಿ ಸಮಯ ತೆಗೆದುಕೊಂಡು ಮನನ ಮಾಡಿಕೊಳ್ಳಿ. SOULWIT Replacement Earpads for Airpods Max Over-Ear Headphones, Ear Pads Cushions with Durable Mesh Fabric, Softer Foam - Space Gray

  • ಪ್ರೆಸೆಂಟಿಂಗ್‌ ಸ್ಕಿಲ್‌

ಉತ್ತರ ಪತ್ರಿಕೆಗಳಲ್ಲಿ ಬರೆಯುವ ಕೌಶಲವನ್ನು ವೃದ್ದಿಸಿಕೊಳ್ಳಿ. ಅಂದವಾದ ಬರವಣಿಗೆಯಿಂದ ಅಂಕಗಳಿಕೆಗೆ ವಿಶ್ವಾಸ ಮೂಡುವುದು. ಉತ್ತಮವಾಗಿ ಉತ್ತರಗಳನ್ನು ಪ್ರದರ್ಶಿಸುವ ಮೂಲಕ ಹೆಚ್ಚು ಅಂಕಗಳನ್ನು ಪಡೆಯಬಹುದಾಗಿದೆ.

  • ಆರೋಗ್ಯಪೂರ್ಣ ಓದು

ಪರೀಕ್ಷೆ ನಿಮಿತ್ತ ಹೆಚ್ಚು ಒತ್ತಡ, ನಿದ್ರಾಹೀನಾ ತಯಾರಿ ಸಲ್ಲದು. ಪರೀಕ್ಷೆಗೆ ತೆರಳುವ ಮುನ್ನ ಸರಿಯಾದ ಕ್ರಮದಲ್ಲಿ ನಿದ್ದೆ, ಊಟ ಹಾಗೂ ಪರೀಕ್ಷೆಗೆ ಬೇಕಿರುವ ಪರಿಕರಗಳನ್ನು ನೋಡಿಕೊಳ್ಳುವುದು ಉತ್ತಮ.

  • ಆತ್ಮವಿಶ್ವಾಸವಿರಲಿ

ಪರೀಕ್ಷೆ ಬಗ್ಗೆ ಆತಂಕ ಹೊಂದದೇ, ಸಾಧ್ಯವಾದಷ್ಟು ಶಿಸ್ತಿನಿಂದ ಪರೀಕ್ಷೆಯನ್ನು ತೆಗೆದುಕೊಳ್ಳಿ. ಇದರಿಂದ ಸಕಾರಾತ್ಮಕ ಚಿಂತನೆ ಮತ್ತು ಹುರುಪು ಹೆಚ್ಚಲಿದೆ. ಪ್ರತಿಫಲಾಪೇಕ್ಷೆಯಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ.

ಜೀವನದಲ್ಲಿ ಮಹತ್ತರ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಎನ್ನುವ ವಿದ್ಯಾಶ್ರೇಣಿಯನ್ನು ದಾಟಿ ಮುಂದು ಹೋಗಲು ಪರಿಣಾಮಕಾರಿ ಅಭ್ಯಾಸದ ಅನಿವಾರ್ಯಕ್ಕಿಂತಲೂ ಅದನ್ನು ಅನುಸರಿಸುವ ಶ್ರದ್ದೆ ಹೊಂದುವುದು ಮುಖ್ಯವಾಗಿದೆ. ಈ ಮೇಲಿನ ಎಲ್ಲಾ ಸಲಹೆಗಳನ್ನು ಪಾಲಿಸಬೇಕೆಂದೇನಲ್ಲ. ಆದರೆ, ಔಚಿತ್ಯಪೂರ್ಣ ತಯಾರಿಯು ಯಶಸ್ಸನ್ನು ತಂದುಕೊಡಬಲ್ಲದು. ಇದನ್ನೂ ಓದಿ: 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ಬಳಕೆ ನಿಷೇಧ: ಪರಿಣಾಮವೇನು?