Skip to main content
ವಿಡಿಯೋ
general

ಪೇಪರ್‌ಲೆಸ್‌ ಬಜೆಟ್‌ ಮಂಡನೆ ಮಾಡಿದ ಮೊದಲಿಗರು ನಿರ್ಮಲಾ ಸೀತರಾಮನ್‌ - ವರದಿ

By Shravanthi R
ಪೇಪರ್‌ಲೆಸ್‌ ಬಜೆಟ್‌ ಮಂಡನೆ ಮಾಡಿದ ಮೊದಲಿಗರು ನಿರ್ಮಲಾ ಸೀತರಾಮನ್‌ -  ವರದಿ

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಗದ ರಹಿತ ಬಜೆಟ್‌ ಮಂಡನೆ ಮಾಡಿದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾಗದ ರಹಿತ ಬಜೆಟ್‌ ಮಂಡನೆ ಮಾಡಿದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌. ದೇಶದ ಮೊದಲ ಬಜೆಟ್‌ ಮಂಡನೆಯಾಗಿದ್ದು 1947, ನವೆಂಬರ್‌ 26ರಂದು. ಅಂದಿನಿಂದ 2020ರವರೆಗೆ ಬ್ರೀಫ್‌ಕೇಸ್‌ನಲ್ಲಿಟ್ಟ ಮುದ್ರಿತ ಬಜೆಟ್ಟನ್ನು ಹಣಕಾಸು ಸಚಿವರು ಮಂಡಿಸುತ್ತಿದ್ದರು. 

ಆದರೆ, 2021-22ನೇ ಸಾಲಿನ ವಾರ್ಷಿಕ ಬಜೆಟ್‌ ಮಂಡಿಸಿದ ನಿರ್ಮಲಾ ಅವರು, 2019ರಲ್ಲಿ ತಮ್ಮ ಮೊದಲ ಬಜೆಟ್‌ ಬಾರಿ ಮಂಡಿಸಿದ್ದರು. ಕೋವಿಡ್‌ ಸಂದರ್ಭದಲ್ಲಿ ಬಜೆಟ್‌ ಪ್ರತಿಗಳನ್ನು ಮುದ್ರಿಸಲಿಲ್ಲ. ಸಾಫ್ಟ್‌ಕಾಪಿಗಳ ಮೂಲಕ ಬಜೆಟ್‌ ಪ್ರತಿಗಳನ್ನು ಸಂಸದರಿಗೆ ಹಂಚಲಾಗಿತ್ತು. ಸಾರ್ವಜನಿಕರಿಗೆ ಆಪ್‌ ಮೂಲಕ ಬಜೆಟ್‌ ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದೆಂದು ಕೇಂದ್ರ ತಿಳಿಸಿತ್ತು. ಫೆ.01ಕ್ಕೆ ಸತತ ಒಂಭತ್ತನೇ ಬಾರಿ ಬಜೆಟ್‌ ಮಂಡನೆ ಮಾಡುವ ಮೂಲಕ ಅತ್ಯಂತ ಹೆಚ್ಚಿನ ಅವಧಿಗೆ ಕೇಂದ್ರ ಹಣಕಾಸು ಸಚಿವರ ಹುದ್ದೆಯನ್ನು ನಿರ್ವಹಿಸಿದ ಗರಿಮೆಗೆ ಅವರು ಪಾತ್ರರಾಗಲಿದ್ದಾರೆ. boAt Rockerz 512 ANC,(~40dB) Hybrid ANC, 80H Battery, 40mm Drivers, 40ms Low Latency, ENx Tech,Stream Ad Free Music via App Support, Bluetooth Headphones, Wireless Headphone with Mic (Bold Blue)

ಕಳೆದ ವರ್ಷದ ಬಜೆಟ್‌ ಎಷ್ಟು ಮಾತ್ರ ಜಾರಿ?

ಫೆಬ್ರವರಿ 01 ರಂದು ಕೇಂದ್ರ ಸರ್ಕಾರವು, ವಿತ್ತವರ್ಷ 27 ರ ಬಜೆಟ್‌ ಮಂಡಿಸಲು ಮುಂದಾಗಿದೆ. ಆದರೆ, ಈ ಹಿಂದಿನ ವರ್ಷದ ಬಜೆಟ್‌ನ ಹಲವು ಘೋಷಣೆಗಳು ಜಾರಿಗೊಂಡಿಲ್ಲ ಅಥವಾ ಭಾಗಶಃ ಕಾರ್ಯಗತಗೊಂಡಿವೆ ಎಂದು ವರದಿಯಾಗಿದೆ. Financial Express ನ ವಿಶ್ಲೇಷಣೆಯ ಪ್ರಕಾರ, ಅನುಷ್ಠಾನದಲ್ಲಿ ಹಿಂದುಳಿದಿರುವ ಘೋಷಣೆಗಳಲ್ಲಿ ಕೃಷಿ, ಕೈಗಾರಿಕೆಗಳು, ಉದ್ಯೋಗ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಕಟಣೆಗಳು ಸೇರಿವೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆ - ಇವಿಎಂ ಬಳಕೆಗೆ ಎಸ್‌ಇಸಿಗೆ ನಾಗರೀಕ ಗುಂಪುಗಳ ಆಗ್ರಹ!?