Skip to main content
ವಿಡಿಯೋ
1/3
technology

ದಿಗ್ಭ್ರಮೆಗೊಳಿಸಿರುವ ಡಿಜಿಟಲ್‌ ಅರೆಸ್ಟ್‌: ವಂಚಕರಿಂದ ಪಾರಾಗುವುದು ಎಂದು?!

By Shravanthi R
ದಿಗ್ಭ್ರಮೆಗೊಳಿಸಿರುವ ಡಿಜಿಟಲ್‌ ಅರೆಸ್ಟ್‌: ವಂಚಕರಿಂದ ಪಾರಾಗುವುದು ಎಂದು?!

ಡಿಜಿಟಲ್‌ ಬಂಧನ ಅಥವಾ ಅರೆಸ್ಟ್‌ ಎಂಬುದು ತಂತ್ರಜ್ಞಾನ, ಮನೋವಿಜ್ಞಾನ ಹಾಗೂ ಕಾನೂನು ಕ್ಷೇತ್ರಗಳ ವ್ಯಾಪ್ತಿಗೆ ವಿಸ್ತರಿಸಿದ್ದು. ಈ ಬಗ್ಗೆ ಎಚ್ಚರಿಕೆ ಹಾಗೂ ಜಾಗೃತರಾಗುವುದು ಅತ್ಯಗತ್ಯವಾದುದಾಗಿದೆ.

ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳ ತೀವ್ರತೆಯ ಕುರಿತು ಇತ್ತೀಚೆಗೆ, ಸುಪ್ರೀಂ ಕೋರ್ಟ್‌ ಸ್ಪಂದಿಸಿದೆ. ದೇಶಾದ್ಯಾಂತ ಈ ಪ್ರಕರಣಗಳ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದೆ. ಸರ್ಕಾರದ ಸಂಸ್ಥೆಗಳು ಹಾಗೂ ಅಧಿಕಾರಿಗಳ ಹೆಸರಲ್ಲಿ ವಂಚಿಸುವ ಸೈಬರ್‌ ಕಳ್ಳರನ್ನು ಮಟ್ಟ ಹಾಕುವಲ್ಲಿ ಈ ದಿಶೆಯ ನಿರ್ಧಾರವು ಪ್ರಾಮುಖ್ಯತೆ ಹೊಂದಿದೆ. 

ಜನರನ್ನು ನಿರ್ದಾಕ್ಷಿಣ್ಯವಾಗಿ ಸುಲಿಗೆಗೈಯ್ಯುತ್ತಲಿರುವ ಈ ಅಪರಾಧ ಕೃತ್ಯವು, ಜನರಲ್ಲಿ ಮಾನಸಿಕ ತಳಮಳವನ್ನು ಹೆಚ್ಚಿಸಿತು. ತನಿಖಾಧಿಕಾರಿಗಳಿಗೆ ಬ್ರಹ್ಮರಾಕ್ಷಸನಂತೆ ಕಾಡಿವೆ. ಡೀಪ್‌ಫೇಕ್‌ ವಿಡಿಯೋ, ಧ್ವನಿ ಬದಲಿಸುವ ತಂತ್ರಜ್ಞಾನ ಬಳಕೆ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜನಮಾನ್ಯರಿಂದ ಹಿಡಿದು ಪಬ್ಲಿಕ್‌ ಫಿಗರ್‌ಗಳೆನಿಸಿಕಂಡವರನ್ನೂ ಒಳಗೊಂಡು ವಂಚಿಸಲಾಗುತ್ತಿರುವುದಾಗಿ ತಿಳಿದುಬಂದಿದೆ. GadgetBite Headphone Carrying EVA Case Earpads Storage Bag Headphone Pouch Portable Anti-Pressure Compatible with AirPods Max (Black)

ಈಗ ಇದಕ್ಕೆ ಕಡಿವಾಣ ಹಾಕಲು ಕಾನೂನು ಅಸ್ತ್ರಗಳನ್ನು ಪ್ರಯೋಗಿಸಲು ಮುಂದಣ ಹೆಜ್ಜೆ ಇಡಲಾಗಿದೆ. ಇದರ ನಿಗ್ರಹಕ್ಕಾಗಿ NETRA ನೆಟ್‌ವರ್ಕ್‌ ಟ್ರಾಫಿಕ್‌ ವಿಶ್ಲೇಷಣಾ ಯೋಜನೆ ಎಂಬ ಡಿಜಿಟಲ್‌ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಲಾಗಿದೆ.  https://cybercrime.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ ದೂರು ಸಲ್ಲಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಜಾಗೃತ ಕ್ರಮಗಳನ್ನು ಕೈಗೊಳ್ಳುವುದಾಗಿ ಹಾಗೂ ವಂಚಕರನ್ನು ಸದೆಬಡಿಯುವಲ್ಲಿ ಭರವಸೆ ತೋರಿದೆ. ಇದನ್ನೂ ಓದಿ: ಶೈಕ್ಷಣಿಕ ಕಲಿಕೆಗೆ ಚಾಟ್‌ಜಿಪಿಟಿ ಶಾಪವೋ.. ವರವೋ..?!