Skip to main content
ವಿಡಿಯೋ
1/3
technology

ʻಟೆಂಪಲ್‌ʼ ಎಂಬ ಹೊಸ ಡಿವೈಸ್‌ ಬಗ್ಗೆ ಸುಳಿವು ಕೊಟ್ಟ ಜೊಮ್ಯಾಟೊ ಸಿಇಒ ದೀಪಿಂದರ್‌ ಗೋಯಲ್‌!?

By Shravanthi R
ʻಟೆಂಪಲ್‌ʼ ಎಂಬ ಹೊಸ ಡಿವೈಸ್‌ ಬಗ್ಗೆ ಸುಳಿವು ಕೊಟ್ಟ ಜೊಮ್ಯಾಟೊ ಸಿಇಒ ದೀಪಿಂದರ್‌ ಗೋಯಲ್‌!?

ಆಹಾರ ವಿತರಣಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಪಡೆದಿರುವ ಜೊಮ್ಯಾಟೊ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ಆಗಿರುವ ದೀಪಿಂದರ್‌ ಗೋಯಲ್‌ ಅವರು ಟೆಂಪಲ್‌ ಎಂಬ ಹೆಸರಿನ ಹೆಲ್ತ್‌-ಟೆಕ್‌ ಸಾಧನದ ಬಗ್ಗೆ ನೀಡಿರುವ ಸುಳಿವು ವೈರಲ್‌ ಆಗಿದೆ.

ಮೆದುಳಿನ ರಕ್ತಪರಿಚಲನೆ ಬಗ್ಗೆ ಮಾಹಿತಿ ನೀಡುವ ʻಟೆಂಪಲ್‌ʼ ಎಂಬ ಹೆಸರಿನ ಹೊಸ ಸಾಧನ ಪರಿಚಯಿಸಲಾಗುವ ಬಗ್ಗೆ ಸುದ್ದಿ ಹರಿದಾಡಿದೆ. ಈ ಪ್ರಾಯೋಗಿಕ ಹೆಲ್ತ್‌-ಟೆಕ್‌ ಸಾಧನದ ಕುರಿತಾಗಿ ಜೊಮ್ಯಾಟೊ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್‌ ಗೊಯಲ್‌  ಅವರು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, “ತಂತ್ರಜ್ಞಾನದ ಆಳವಾದ ಸಂಶೋಧನೆಯ ಉತ್ಪನ್ನವಾಗಿರುವ ಇದು ನೈಜ ಸಮಯದಲ್ಲಿ ನಿಖರ ಮಾಹಿತಿ ನೀಡಲಿದೆ ಎನ್ನಲಾಗಿದೆ. ಇದರ ಚಿತ್ರವನ್ನು ಹಂಚಿಕೊಂಡಿದ್ದು, ಇದೊಂದು ವೈಜ್ಞಾನಿಕ ಆದರೆ ಅಸಂಪ್ರದಾಯಿಕ ಎಂದು ವಿವರಿಸಲಾಗಿದೆ. ಇದರ ಹೆಚ್ಚಿನ ನವೀಕೃತ ಮಾಹಿತಿ ಶೀಘ್ರವೇ ಬರಲಿದೆ” ಎಂದು ತಿಳಿಸಲಾಗಿದೆ. Tobfit Silicone Case Cover for AirPods Max Headphones, Soft Clear TPU Anti-Scratch Ear Pad/Ear Cups/Headband Cover for AirPods Max, Sweat-Proof Transparent Protector Accessories,Pink

ಈ ಸಾಧನದ ರಚನೆಯ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಕೇಳಿಬಂದಿದ್ದು, ಈ ಹಿಂದಿರುವ ಆಸಕ್ತಿದಾಯಕ ಮಾಹಿತಿಯು ಚರ್ಚೆಗೀಡಾಗಿದೆ. ಗೊಯಲ್‌ ಅವರು ಫೀಡಿಂಗ್‌ ಇಂಡಿಯಾ ಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೇವಾಲಯ (ಟೆಂಪಲ್‌) ಸಣ್ಣ ಚಿನ್ನದ ಲೋಹದ ಸಾಧನವನ್ನೇ ಇದರ ಗುರುತಾಗಿಸಿದ್ದಾರೆ ಎನ್ನಲಾಗಿದೆ. ಇದು ವೈರಲ್‌ ಆಗಿದ್ದು, ವಿವಿಧ ಕಾಮೆಂಟ್ಸ್‌ಗಳು ಕೇಳಿಬಂದಿದೆ. ಇದನ್ನೂ ಓದಿ: ದಿಗ್ಭ್ರಮೆಗೊಳಿಸಿರುವ ಡಿಜಿಟಲ್‌ ಅರೆಸ್ಟ್‌: ವಂಚಕರಿಂದ ಪಾರಾಗುವುದು ಎಂದು?!