ನಟ ದರ್ಶನ್ ಅವರ ವಿರುದ್ಧ ಇರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿದ್ದರಿಂದ, ಅವರು ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಮರಳಿದ್ದಾರೆ. ಜೈಲಿನಲ್ಲಿ ಈಗ ಕಠಿಣ ನಿಯಮಗಳು ಜಾರಿಯಾಗಿದ್ದು, ದರ್ಶನ್ ಅವರಿಗೆ ಇದು ದೊಡ್ಡ ಶಾಕ್ ಆಗಿದೆ ಎಂದು ಕಾರಾಗೃಹ ಮೂಲಗಳು ಹೇಳುತ್ತಿವೆ.Arayna Women's Cotton Printed Floral Straight Kurta with Palazzo Pants and Dupatta
ಹೆಚ್ಚಿದ ನಿಯಮಗಳು, ದರ್ಶನ್ ಕೂಡ ಸಾಲಿನಲ್ಲಿ ನಿಂತೇ ಊಟ:
ಇತ್ತೀಚೆಗೆ ಜೈಲು ಪಾರ್ಟಿ ವಿಡಿಯೋ ವೈರಲ್ ಆದ ನಂತರ, ಅಧಿಕಾರಿಗಳು ಹಲವಾರು ನಿಯಮಗಳಲ್ಲಿ ಬದಲಾವಣೆ ಮಾಡಿದ್ದಾರೆ. ಹೊಸ ಸೂಪರಿಂಟೆಂಡೆಂಟ್ ಆಗಿ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಅಧಿಕಾರ ವಹಿಸಿಕೊಂಡ ನಂತರ, ಎಲ್ಲ ಕೈದಿಗಳಿಗೆ ಒಂದೇ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.
ದರ್ಶನ್ ಕೂಡ ಉಳಿದ ಕೈದಿಗಳಂತೆ ಸಾಲಿನಲ್ಲಿ ನಿಂತು ಊಟ ತೆಗೆದುಕೊಳ್ಳಬೇಕು, ಮತ್ತು ಶೌಚಾಲಯವನ್ನು ತಾವೇ ಸ್ವಚ್ಛಗೊಳಿಸಬೇಕು ಎಂದು ನಿಯಮಿಸಲಾಗಿದೆ.
ಸೆಲ್‌ನಲ್ಲಿ ಜಗಳ? ದೈಹಿಕ ಮತ್ತು ಮಾನಸಿಕ ಕಿರುಕುಳ ಆರೋಪ:
ದರ್ಶನ್ ಜೊತೆ ಒಂದೇ ಸೆಲ್‌ನಲ್ಲಿ ಅನುಕುಮಾರ್, ಜಗ್ಗ, ನಾಗರಾಜು, ಪ್ರದೋಶ್ ಮತ್ತು ಲಕ್ಷ್ಮಣ್ ಇದ್ದಾರೆ. ಇವರಲ್ಲಿ ನಾಗರಾಜು ಹೊರತುಪಡಿಸಿ ಉಳಿದ ಆರೋಪಿಗಳ ಮೇಲೆ ದರ್ಶನ್ ಮಾನಸಿಕ ಮತ್ತು ದೈಹಿಕ ಹಿಂಸೆ ಮಾಡುತ್ತಿದ್ದಾರೆಯೆಂಬ ಆರೋಪ ಕೇಳಿ ಬಂದಿದೆ.
ಕೆಲ ದಿನಗಳ ಹಿಂದೆ ದರ್ಶನ್ ಮತ್ತು ಜಗ್ಗ ನಡುವೆ ದೊಡ್ಡ ಜಗಳ ನಡೆದಿದ್ದು, ಜೈಲು ಸಿಬ್ಬಂದಿ ಮಧ್ಯ ಪ್ರವೇಶಿಸಿ ಜಗಳ
ತಡೆಯಬೇಕಾಯಿತು ಎನ್ನಲಾಗಿದೆ. ಮಲಗಿದ್ದ ಕೈದಿಗಳನ್ನು ಕಾಲಿನಲ್ಲಿ ತಟ್ಟಿ ಎಬ್ಬಿಸುವುದು, ಮತ್ತು ಅವಾಚ್ಯ ಶಬ್ದಗಳಲ್ಲಿ ಬೈದದ್ದು ಕೂಡ ಆರೋಪಗಳಲ್ಲಿದೆ.ಇದನ್ನು ಓದಿ:“ಕಣ್ಣೀರು ಸುರಿಸಬೇಡ… ನಿನ್ನ ಹಿಂದೆ ನಾನಿದ್ದೇನೆ” ಎಂದು ರಿಷಬ್ ಶೆಟ್ಟಿಗೆ ಸಾಂತ್ವನ ನೀಡಿದ ದೈವ..!
ಜೈಲು ಬದಲಾವಣೆಕ್ಕೆ ಮನವಿ:
ವಕೀಲರ ನೇಮಕ ವಿಚಾರದಲ್ಲೂ ಕೈದಿಗಳ ನಡುವೆ ಗಲಾಟೆ ಉಂಟಾಗಿದೆ. ದರ್ಶನ್ ಜೊತೆ ಇರುವ ಅನುಕುಮಾರ್ ಜೈಲಿನಲ್ಲಿಯೇ ಬಾಳುವುದಕ್ಕೂ ಭಯಪಟ್ಟಿದ್ದಾರೆಂದು ಹೇಳಲಾಗುತ್ತಿದೆ. ಟಾರ್ಚರ್ ತಾಳಲಾಗದೇ ಅನುಕುಮಾರ್ ಮತ್ತು ಜಗ್ಗ ಅವರು ತಮ್ಮನ್ನು ಚಿತ್ರದುರ್ಗ ಜೈಲಿಗೆ ವರ್ಗಾಯಿಸಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.