ಪ್ರಸಿದ್ಧ ಕಿರುತೆರೆ ನಟ ಗೌರವ್ ಖನ್ನಾ ‘ಬಿಗ್ ಬಾಸ್ ಸೀಸನ್ 19’ರ ಪ್ರಶಸ್ತಿಯನ್ನು ಗೆದ್ದು ಸುದ್ದಿಯಲ್ಲಿದ್ದಾರೆ. 14 ವಾರಗಳ ಕಠಿಣ ಸ್ಪರ್ಧೆಯ ನಂತರ, ಅವರು 50 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಆರಂಭದಲ್ಲಿ ಮೌನ ಸ್ವಭಾವದಿಂದ ಗಮನ ಸೆಳೆದ ಗೌರವ್, ನಂತರ ಶಕ್ತಿಶಾಲಿ ಸ್ಪರ್ಧಿಯಾಗಿ ಹೊರಹೊಮ್ಮಿದದ್ದು ಪ್ರೇಕ್ಷಕರನ್ನು ಆಶ್ಚರ್ಯಕ್ಕೊಳಪಡಿಸಿತು.U.S. POLO ASSN. Men's Solid Cotton Linen Mandarin Collar Full Sleeve Shirts
ಈ ಬಾರಿ ಬಿಗ್ ಬಾಸ್ ಸೀಸನ್ ಆಗಸ್ಟ್‌ನಲ್ಲಿ ಪ್ರಾರಂಭವಾಗಿ, ಡಿಸೆಂಬರ್ 7ರಂದು ಗ್ರ್ಯಾಂಡ್ ಫಿನಾಲೆ ಮೂಲಕ ಮುಕ್ತಾಯವಾಯಿತು. ಒಟ್ಟು 18 ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಫಿನಾಲೆಯಲ್ಲಿ ಗೌರವ್ ಖನ್ನಾ, ಫರ್ಹಾನಾ ಭಟ್, ಪ್ರಣೀತ್ ಮೋರ್, ಅಮಲ್ ಮಲಿಕ್ ಮತ್ತು ತಾನ್ಯಾ ಮಿತ್ತಲ್ ಟಾಪ್ 5 ಸ್ಥಾನಕ್ಕೇರಿದರು. ಕೊನೆಯಲ್ಲಿ ಫರ್ಹಾನಾ ಭಟ್ ಅವರನ್ನು ಸೋಲಿಸಿ, ಗೌರವ್ ಟ್ರೋಫಿ ಗೆದ್ದರು.ಡೆವಿಲ್ ಸಿನಿಮಾ ರಿಲೀಸ್ ಟೈಮ್‌ನಲ್ಲಿ ದರ್ಶನ್ ಯಾಕಿಂಗೆ ಮಾಡಿದ್ರು? ಸಹ ಕೈದಿಗಳು ಮಾಡ್ತಿರೋ ಆರೋಪವೇನು ಗೊತ್ತಾ?
ಗೌರವ್ ಖನ್ನಾ ಬಿಗ್ ಬಾಸ್ ಮನೆಯಲ್ಲಿ ಶಾಂತವಾಗಿದ್ದರೂ, ತಮ್ಮ ಆಟದ ಮೂಲಕ ಎಲ್ಲರ ಮೆಚ್ಚುಗೆ ಪಡೆದರು. ಹೆಚ್ಚು ಡ್ರಾಮಾ, ಜಗಳ, ಕೂಗಾಟ ಇರುವ ಈ ಕಾರ್ಯಕ್ರಮದಲ್ಲಿ ಶಾಂತ ಆಟ ಆಡಿದ ಕಾರಣ ಕೆಲವರು ಅವರನ್ನು ಕಡಿಮೆ ಅಂದಾಜಿಸಿದ್ದರು. ಆದರೆ ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಅವರು ಫಿನಾಲೆಗೆ ಮೊದಲಿಗರಾಗಿ ಸ್ಥಾನ ಪಡೆದರು ಮತ್ತು ಅಂತಿಮವಾಗಿ ವಿಜೇತರಾಗಿದರು.
ಮತ್ತೊಂದು ವಿಶೇಷ ಎಂದರೆ, ಗೌರವ್ ಈ ಸೀಸನ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿ. ಅವರಿಗೆ ವಾರಕ್ಕೆ ಸುಮಾರು 17.5 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿತ್ತು. ಹದಿನಾಲ್ಕು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಅವರು, ಸುಮಾರು 2.45 ಕೋಟಿ ರೂಪಾಯಿ ಗಳಿಸಿದ್ದಾರೆ. ವರದಿಗಳ ಪ್ರಕಾರ, ಗೌರವ್ ಖನ್ನಾ ಅವರ ಒಟ್ಟು ಆಸ್ತಿ 15 ರಿಂದ 18 ಕೋಟಿ ರೂಪಾಯಿ ನಡುವೆ ಇದೆ.