ಈಗಿನ ಜೆನ್‌ಝೀ ಕಿಡ್ಸ್‌ಗಳ ಕೈಯಲ್ಲಿ ಮೊಬೈಲ್ ಇದ್ದೇ ಇರುವುದು ಸಹಜ. ಮೊಬೈಲ್ ಗೇಮ್ಸ್‌ಗಳು ಅವರಿಗೆ ಖುಷಿ, ಆನಂದವನ್ನು ನೀಡುವುಲ್ಲದೇ, ಅವರನ್ನು ಕಾಡುವ ವ್ಯಸನಗಳೂ ಆಗಬಹುದು. ಆದ್ದರಿಂದ, ಅವರಿಗೆ ಮಾರಕವಾಗಬಲ್ಲ ಆನ್‌ಲೈನ್ ಗೇಮ್ಸ್‌ಗಳ ಬಗ್ಗೆ ಗಮನವಿರಿಸುವ ದೃಷ್ಟಿಯಿಂದ ಪ್ರಮುಖವಾಗಿದೆ.
ಚೋಕಿಂಗ್ ಗೇಮ್ - ಇದೊಂದು ಅಪಾಯಕಾರಿ ಹಾಗೂ ಉದ್ರೇಕವಾದ ಆಟವಾಗಿದೆ. ಮಕ್ಕಳಿಗೆ ಮಾರಣಾಂತಿಕ ಪ್ರಯತ್ನಗಳನ್ನು ಮಾಡಲು ಸೂಚಿಸುವ ಇದರಿಂದ ಪ್ರಾಣಕ್ಕೆ ಕುತ್ತಾಗುವುದು. ಇದನ್ನು ಪಾಸ್‌ಔಟ್ ಚಾಲೆಂಜ್ ಎಂದು ಕರೆಯಲಾಗುತ್ತದೆ.
ಫೈರ್ ಫೇರಿ - ಇದೊಂದು ಭೀಕರ ಪ್ರಚೋದನಕಾರಿ ಗೇಮ್ ಎನಿಸಿದೆ. ಚಿಕ್ಕ ಮಕ್ಕಳನ್ನು ಗುರಿಯಾಗಿಸಿ, ಇಂಟರ್‌ನೆಟ್ ಸವಾಲು ಹಾಗೂ ಅಪಾಯಕಾರಿ ಸಾಮಾಜಿಕ ಮಾಧ್ಯಮ ಹಗರಣವೆಂದು ಕರೆಯಲಾಗುತ್ತದೆ. ಉದಾಹರಣೆಗೆ, ಮಧ್ಯರಾತ್ರಿಯಲ್ಲಿ ಎದ್ದು ಗ್ಯಾಸ್ ಆನ್ ಮಾಡಿ ಮಲಗುವಂತೆ ಸೂಚಿಸುವುದು.
ಸಿನ್ನಮನ್ ಚಾಲೆಂಜ್: 60 ಸೆಕೆಂಡ್‌ಗಳಲ್ಲಿ ಕ್ಲಿಷ್ಟಕರ ಟಾಸ್ಕ್ ಪೂರ್ಣಗೊಳಿಸುವಂತೆ ಸೂಚಿಸುವ ಗೇಮ್ ಚಾಲೆಂಜ್ ಇದಾಗಿದೆ. ಈ ಮೂಲಕ ಆರೋಗ್ಯಕ್ಕೆ ಅಪಾಯ ತರುವ ಚಾಲೆಂಜ್ ಅಥವಾ ರಿಸ್ಕಿಯಾಗಿ ಕೈಗೊಳ್ಳುವ ಚಾಲೆಂಜ್ ಇದಾಗಿರುತ್ತದೆ ಎನ್ನಲಾಗಿದೆ.
ಬ್ಲೂವೇಲ್ ಚಾಲೆಂಜ್: ಇದು ಜಗತ್ತಿನಾದ್ಯಂತ ಸಾವಿರಾರು ಹದಿಹರೆಯದ ಮಕ್ಕಳ ಸಾವಿಗೆ ಕಾರಣವಾದಂತಹ ಗೇಮ್. ಸ್ವಯಂ ಆತ್ಮಹತ್ಯೆಗೆ ಪ್ರೇರೇಪಿಸುವ ಮೂಲಕ ಸಾಮಾಜಿಕ ಮಾಧ್ಯಮದ ಗುಂಪಿನ ಆಟವಿದಾಗಿದೆ.
ಮರಿಯಮ್ಸ್ ಗೇಮ್: ಇದೊಂದು ಭಯಾನಕ/ಸಾಹಸಮಯ ಗೇಮ್ ಆಗಿದ್ದು, ಮಕ್ಕಳ ಮೇಲೆ ಸಂಭಾವ್ಯ ನಕಾರಾತ್ಮಕ ಪರಿಣಾಮ ಬೀರುವ ಹಾಗೂ ಮಾನಸಿಕ ಒತ್ತಡ ತರುವಂತ ಗೇಮ್ ಇದಾಗಿದೆ. BonKaso AirPods Max Case – Hard Shell PU Leather Carrying Case for Over-Ear Headphones | Compatible with AirPods Max, Sony, Sennheiser | Shockproof Travel Pouch with Earpads Storage– Grey (22x22x6 cm)
ಇದಲ್ಲದೇ ಮಕ್ಕಳು ವಿಡಿಯೋ ಗೇಮಿಂಗ್ ವ್ಯಸನಿಗಳಾಗುವ ಮೂಲಕ ಅಪರಿಚಿತರೊಂದಿಗೆ ಸಂವಾದ, ವೈಯಕ್ತಿಕ ಮಾಹಿತಿ ಸೋರಿಕೆ, ಅರಿವಿಲ್ಲದೇ ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ಅವರ ಚಟುವಟಿಕೆಗಳ ಮೇಲೆ ಪೋಷಕರು ಮಿತಿಗಳನ್ನು ನಿಗದಿಪಡಿಸುವುದು ಹಾಗೂ ಎಚ್ಚರಿಕೆ ನೀಡುವುದು ಪ್ರಥಮ ಕರ್ತವ್ಯವಾಗಿರುತ್ತದೆ.
ಮಕ್ಕಳ ಸಂಪೂರ್ಣ ಬೆಳವಣಿಗೆಗೆ ಅಪಾಯಕರ ಹಾಗೂ ಅಸುರಕ್ಷಿತವಾಗಿರುವ ಆನ್‌ಲೈನ್ ಗೇಮಿಂಗ್‌ನಂತಹ ಚಟಗಳಿಂದ ಅವರನ್ನು ದೂರವಿರಿಸುವುದು ಬಹಳ ಮುಖ್ಯವಾಗಿದೆ. ಇದಕ್ಕಾಗಿ ಪೋಷಕರು ಕೈಗೊಳ್ಳಬೇಕಾದ ಎಚ್ಚರಿಕೆಗಳು ಇಂತಿವೆ:
ಮಕ್ಕಳ ದಿನನಿತ್ಯದ ಚಟುವಟಿಕೆಗಳಿಗೆ ಒಗ್ಗುವಂತೆ ಸೂಕ್ತ ಸಮಯ ನಿಗದಿ ಪಡಿಸುವುದು.
ಮಕ್ಕಳ ಚಟುವಟಿಕೆಗಳ ಮೇಲೆ ಗಮನವಿರಿಸುವುದು ಹಾಗೂ ಅವರು ಕಳೆಯುವ ಸಮಯದ ಬಗ್ಗೆ ಕಾಳಜಿ ಹೊಂದುವುದು.
ಅವರ ಹವ್ಯಾಸ ಹಾಗೂ ಅಭಿರುಚಿಗಳನ್ನು ಗುರುತುಪಡಿಸುವುದು. ಅವರ ಸಕಾರತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದು.
ಅವರಿಗೆ ಹೊರೆ ಎನಿಸಿದಾಗ ಅವರೊಟ್ಟಿಗೆ ಮುಕ್ತವಾಗಿ ಬೆರೆಯವುದು, ಅವರ ಮಾತುಗಳನ್ನು ಆಲಿಸುವುದು. ಇದನ್ನೂ ಓದಿ: ʻಟೆಂಪಲ್ʼ ಎಂಬ ಹೊಸ ಡಿವೈಸ್ ಬಗ್ಗೆ ಸುಳಿವು ಕೊಟ್ಟ ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್!?