Skip to main content
ವಿಡಿಯೋ
1/3
general

ಮಂಗಳೂರು - ಜಾಗೃತಿ ನಡವಲ್ಲೂ ಹೆಚ್ಚುತ್ತಿರುವ ಸೈಬರ್‌ ಅಪರಾಧ ಪ್ರಕರಣಗಳು: ವರದಿ

By Shravanthi R
ಮಂಗಳೂರು - ಜಾಗೃತಿ ನಡವಲ್ಲೂ ಹೆಚ್ಚುತ್ತಿರುವ ಸೈಬರ್‌ ಅಪರಾಧ ಪ್ರಕರಣಗಳು: ವರದಿ

ದಿನನಿತ್ಯ ಬೆಳಕಿಗೆ ಬರುತ್ತಿರುವ ಸೈಬರ್‌ ಅಪರಾಧ ಪ್ರಕರಣಗಳಿಂದ ಜನರು ಕಂಗೆಟ್ಟಿದ್ದಾರೆ. ಲಕ್ಷಾಂತರ ಪ್ರಮಾಣದಲ್ಲಿ ಬಹುತೇಕ ಸುಶಿಕ್ಷಿತರೇ ಹಣವಂಚನೆಗೆ ಒಳಗಾಗುತ್ತಿದ್ದಾರೆಂದು ವರದಿಯಿಂದ ತಿಳಿದುಬಂದಿದೆ.

ಇತ್ತೀಚೆಗೆ ವರದಿಯಾಗುತ್ತಿರುವ ಸೈಬರ್‌ ಪ್ರಕರಣಗಳಲ್ಲಿ ಅನಕ್ಷರಿಗಿಂತಲೂ ವಿದ್ಯಾವಂತರೇ ಸೈಬರ್‌ ವಂಚನೆ ಪ್ರಕರಣಕ್ಕೆ ಒಳಗಾಗುತ್ತಿರುವುದ ಆತಂಕಕಾರಿಯಾಗಿದೆ ಎಂದು ಪೋಲಿಸ್‌ ಅಧಿಕಾರಿಗಳು ಅಭಿಪ್ರಾಯ ತಿಳಿಸಿದ್ದಾರೆ. ಜಾಗೃತಿ ಮೂಡಿಸುತ್ತಿರುವ ಮಧ್ಯೆಯೂ ಸೈಬರ್‌ ಅಪರಾಧಗಳ ಸುಳಿಗೆ ಸಿಲುಕುತ್ತಿರುವುದು ಕಳವಳವನ್ನುಂಟು ಮಾಡಿದೆ ಎನ್ನಲಾಗಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ಆಧಾರ್‌ ಹಾಗೂ ನಮೂದಿಸಿರುವ ಮೊಬೈಲ್‌ ಸಂಖ್ಯೆ ಸೇರಿದಂತೆ ಬೆರಳಚ್ಚುಗಳ  ಮಾಹಿತಿ ಸೋರಿಕೆಯಾಗಿ ವಂಚಕರ ಕೈ ಸೇರುವಂತಾಗಿದೆ. ಕೆಲವೊಮ್ಮೆ ನೇರವಾಗಿ ಡಾಟಾ ಹ್ಯಾಕ್‌ ಮೂಲಕವು ವಂಚಿಸಲಾಗುತ್ತದೆ ಎಂದು ಸೈಬರ್‌ ತಜ್ಞರು ತಿಳಿಸಿದ್ದಾರೆ.  Geekria Headband Pad Compatible with Turtle Beach Stealth 700 Gen2/ Gen2 MAX Headphones, Head Top Cushion Cover Repair Part (Black)

ಸೈಬರ್‌ ವಂಚನೆ ಕುರಿತು ಠಾಣಾ ಮಟ್ಟದಲ್ಲೂ ಮಾಹಿತಿ ನೀಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಎಚ್ಚರಿಕೆ ವಹಿಸಲಾಗುತ್ತಿದೆ. ಆಧಾರ್‌ ಅಥವಾ ಬೆರಳಚ್ಚು ಪರಿಶೀಲನೆ ಕುರಿತಾಗಿ ಕರೆಗಳು ಬಂದರೆ ನಿರ್ಲಕ್ಷಿಸಬೇಕು. ಸ್ಪಷ್ಟತೆಯಿರದೇ ಕರೆ ಸಂದೇಶಗಳು ಬಂದರೆ ಉತ್ತರಿಸಬಾರದು. ಜನರು ಜಾಗೃತ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ ಎಂದು ಪೋಲಿಸ್‌ ಆಯುಕ್ತರು ತಿಳಿಸಿದ್ದಾರೆ ಎಂದು ವರದಿಯು ತಿಳಿಸಿದೆ. ಇದನ್ನೂ ಓದಿ: ಟೆಕ್‌ ಜಂಕ್‌: ಜೆನ್‌ ಝೀ ಮಕ್ಕಳ ಆನ್‌ಲೈನ್‌ ಗೇಮಿಂಗ್‌ ಚಟದ ಮೇಲಿರಲಿ ನಿಗಾ!