ಇವತ್ತಿನ ಜಾಗತಿಕ ತಾಂತ್ರೀಕರಣದ ಯುಗದಲ್ಲಿ ಬಿಜಿನೆಸ್ ಮಾಡುವುದು ಕೂಡ ಸ್ಮಾರ್ಟ್‌ನೆಸ್‌ಗೆ ಒಳಪಟ್ಟಿದೆ. ಸರಿಯಾದ ಡೇಟಾ ವಿಶ್ಲೇಷಣೆ ಹಾಗೂ ಕಾರ್ಯತಂತ್ರಗಳ ಪ್ರಯೋಗವು ದತ್ತಾಂಶಗಳ ಒಳನೋಟಕ್ಕೆ ಅಗತ್ಯವಾಗಿದೆ. ಈ ರೀತಿಯಾಗಿ ಎಐ ಸುಧಾರಿತ ವ್ಯವಹಾರ ಸಾಧಕಗಳಿಗೆ ಬಿಸಿನೆಸ್ ಇಂಟಲಿಜೆನ್ಸ್ (BI) ಎನ್ನುತ್ತಾರೆ.
ಇದರಿಂದ ನಿಮ್ಮ ಬಿಜಿನೆಸ್ ವ್ಯವಹಾರಗಳ ದತ್ತಾಂಶಗಳನ್ನು ಸರಳವಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಗಲಿದೆ. ಈ ತಂತ್ರಜ್ಞಾನ -ಚಾಲಿತ ದತ್ತಾಂಶಗಳಿಂದ ವ್ಯಾಪಾರ ಕೇಂದ್ರಿತ ಒಳನೋಟಗಳು ಹಾಗೂ ವ್ಯಾಪಾರದ ಬೆಳವಣಿಗೆಗಳನ್ನು ರೂಪಿಸುತ್ತದೆ ಎನ್ನಲಾಗಿದೆ. ಇದನ್ನು ಉದ್ಯಮ ಕೌಶಲ ಹಾಗೂ ಬಿಸಿನೆಸ್ ಮಾನಿಟರಿಂಗ್‌ಗಾಗಿ ಅಭಿವೃದ್ದಿಪಡಿಸಲಾಗಿದೆ.
ಈ ನಿಟ್ಟಿನಲ್ಲಿ ವ್ಯವಹಾರ ದತ್ತಾಂಶ ಸಂಗ್ರಹಣೆಗೆ ಸಹಾಯ ಮಾಡುವ ಟೂಲ್ಸ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ:
Sisense - ಇದು ಡೇಟಾ ಸಂಗ್ರಹಣೆ, ವಿಶ್ಲೇಷಣೆ (analysis) ಹಾಗೂ ವೀಕ್ಷಣೆಯ (visualisation) ಜೊತೆಗೆ ತನ್ನದೇ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ತಿಳಿಸಲಾಗಿದೆ.
Zoho analytics - ಇದು ದತ್ತಾಂಶ ಸಂಗ್ರಹಣೆ, ಜೋಡಣೆ, ಮಾರಾಟ ಹಾಗೂ ಮಾರುಕಟ್ಟೆ ಸಂಬಂಧಿತ ಜೋಹೋ ಆಫೀಸ್‌ನ ಸಾಫ್ಟ್‌ವೇರ್ ಆಗಿದೆ.
Board - ಕ್ಲೌಡ್ (Cloud) ಆಧಾರಿತ ಸಮಗ್ರ ಎಐ ಟೂಲ್ ಇದಾಗಿದ್ದು, ತನ್ನ ವೈಶಿಷ್ಟ್ಯಪೂರ್ಣ ಅಂಶಗಳೊಟ್ಟಿಗೆ ಸಣ್ಣದರಿಂದ ದೊಡ್ಡ ಮಟ್ಟದ ಉದ್ಯಮಗಳಿಗೆ ಸಹಕರಿಸಲಿದೆ.
Microsoft Power BI - ಮೈಕ್ರೋಸಾಫ್ಟ್‌ನಿಂದ ಬಿಡುಗಡೆ ಮಾಡಿರುವ ಉಚಿತ ಸಾಧನವಿದಾಗಿದೆ. ಬಿಸಿನೆಸ್ ದತ್ತಾಂಶ ನಿರ್ವಹಣೆಗೆ ಸಹಕರಿಸಲಿದ್ದು, ಸ್ಮಾರ್ಟ್‌ಫೋನ್ ಮೂಲಕವು ಬಳಕೆ ಮಾಡಬಹುದಾಗಿದೆ.
Dundas - ಇದೊಂದು ಸರಳ ಹಾಗೂ ಆಧುನಿಕ ಬ್ರೌಸರ್ ಆಧಾರಿತ BI ಟೂಲ್ ಆಗಿದೆ. ಇದರಲ್ಲಿ ಡ್ರ್ಯಾಗ್ ಅಂಡ್ ಡ್ರಾಪ್ ವೈಶಿಷ್ಟ್ಯವನ್ನು ಹೊಂದಿದ್ದು, ಸುಲಭವಾಗಿ ಡ್ಯಾಶಬೋರ್ಡ್‌ಗಳು ಹಾಗೂ ವರದಿಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. SOULWIT Sweat Proof Silicone Ear Cover for AirPods Max, Comfortable Fit for Gym Exercise, Easy to Clean, No Sound Quality Loss - Black
ಇವುಗಳಲ್ಲದೇ, Wyn Enterprise, Looker, MicroStrategy, ActiveBatch, CXAIR Platform ನಂತಹ BI Tools ಹಾಗೂ ಇನ್ನಿತರೆ ಪೇಡ್ ವರ್ಷನ್‌ಗಳಲ್ಲಿ BI ಟೂಲ್ಸ್‌ಗಳು ಲಭ್ಯವಿದೆ. ತಾಂತ್ರಿಕವಾಗಿ ಬಿಜಿನೆಸ್‌ಗೆ ಬೇಕಾದ ಸ್ಪರ್ಧಾತ್ಮಕತೆಯನ್ನು ಇವು ನೀಡಲಿದೆ. ಇವುಗಳನ್ನು ಬಳಸುವ ಮೂಲಕ ನಿಮ್ಮ ಬಿಜಿನೆಸ್ ವಿಸ್ತರಣೆ ಹಾಗೂ ಕಾರ್ಯನಿರ್ವಹಣೆಯನ್ನು ಗಟ್ಟಿಗೊಳಿಸಬಹುದೆನ್ನಲಾಗಿದೆ. ಇದನ್ನೂ ಓದಿ: ಮಂಗಳೂರು - ಜಾಗೃತಿ ನಡವಲ್ಲೂ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು: ವರದಿ