Skip to main content
ವಿಡಿಯೋ
1/3
technology

ಸೋಷಿಯಲ್‌ ಮೀಡಿಯಾ ಹವಾ - Instagram ನಲ್ಲಿ ಅತಿಹೆಚ್ಚು ಲೈಕ್ಸ್‌ ಪಡೆದ ಪೋಸ್ಟ್ಸ್‌ಗಳ್ಯಾವುವು ಗೊತ್ತಾ!?

By Shravanthi R
ಸೋಷಿಯಲ್‌ ಮೀಡಿಯಾ ಹವಾ - Instagram ನಲ್ಲಿ ಅತಿಹೆಚ್ಚು ಲೈಕ್ಸ್‌ ಪಡೆದ ಪೋಸ್ಟ್ಸ್‌ಗಳ್ಯಾವುವು ಗೊತ್ತಾ!?

ಜಗತ್ತಿನ ಪ್ರತೀ ಮೂಲೆಯಿಂದ ಜನರನ್ನು ಬೆಸೆಯುವ ಪ್ರಬಲವಾದ ವೇದಿಕೆ ಸೋಷಿಯಲ್‌ ಮೀಡಿಯಾ. ಇದರಲ್ಲಿ ಮೆಟಾದ ಇನ್‌ಸ್ಟಾಗ್ರಾಂ ಅತಿಹೆಚ್ಚು ಜನರಿಂದ ಮೆಚ್ಚುಗೆ ಪಡೆದುಕೊಂಡಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ನೆನಪುಗಳು ಇವತ್ತಿನ ಆಧುನಿಕ ಜಗತ್ತಿನ ಉಳಿಕೆಗಳಾಗಿದೆ. ಇದರಲ್ಲಿ ಹಂಚಿಕೊಳ್ಳಲಾದ ಫೋಟೋಗಳು ಹಾಗೂ ವಿಡಿಯೋಗಳ ಪೋಸ್ಟ್‌ಗಳು ಕ್ಷಣಾರ್ಧದಲ್ಲಿ ವೈರಲ್‌ ಆಗುತ್ತದೆ. ಅದರಂತೆ, ಪ್ರಸಿದ್ದ ಇನ್‌ಸ್ಟಾಗ್ರಾಂನ ಪೋಸ್ಟ್‌ಗಳ ವರದಿ ಪ್ರಕಾರ, ಅತಿಹೆಚ್ಚು ಲೈಕ್ಸ್‌ಗಳಿಸಿದ ಪೋಸ್ಟ್‌ಗಳನ್ನು ಇಲ್ಲಿ ತಿಳಿಸಲಾಗಿದೆ.

ಪ್ರತಿ ತಿಂಗಳು, ಮೆಟಾ ಒಡೆತನದ ಅಪ್ಲಿಕೇಶನ್‌ಗಳನ್ನು ಮೂರು ಶತಕೋಟಿಯಷ್ಟು ಜನರು ಬಳಸುತ್ತಾರೆಂದು ವರದಿಯು ತಿಳಿಸಿದೆ. ಇದೀಗ ಜನಪ್ರಿಯ ಇನ್‌ಸ್ಟಾಗ್ರಾಂನಲ್ಲಿ ಕ್ರೇಜ್‌ ಹುಟ್ಟಿಸಿರುವ ಪೋಸ್ಟ್‌ಗಳು ಯಾರದಪ್ಪ ಅಂದರೆ, ಫುಟ್‌ಬಾಲ್‌ ಕ್ರೀಡೆಯ ತಾರಾ ಆಟಗಾರರಾದ ಲಿಯೊನೆಲ್‌ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಅವರದು. 

ಅದೇ ರೀತಿ ವರ್ಡ್‌ ರೆಕಾರ್ಡ್‌ ಎಗ್‌ ಎಂಬ ಖಾತೆಯಿಂದ ಪೋಸ್ಟ್‌ ಆದ ಮೊಟ್ಟೆಯ ಚಿತ್ರವು ಕೂಡ ವೈರಲ್‌ ಆಗಿದೆ. 

2022 ರ ವಿಶ್ವಕಪ್‌ ಟ್ರೋಫಿಯೊಂದಿಗೆ ಮಲಗಿರುವ ಮೆಸ್ಸಿ ಅವರು ಹಂಚಿಕೊಂಡಿದ್ದಾರೆ. ಅದನ್ನು 536 ಕೋಟಿ ಜನರು ಲೈಕ್‌ ಮಾಡಿದ್ದಾರೆ. 

ಕಿಶೋರ್‌ ಮಂಡಲ್‌ ಎಂಬ ಸೋಷಿಯಲ್‌ ಮಿಡಿಯಾ ಇನ್‌ಫ್ಲೂಯನ್ಸರ್‌ ಹಾಗೂ ಅವರ ಸಹೋದರ ಹಾಡಿರುವ ಜೀನೆ ಲಗಾ ಹೂ ಹಾಡು ಅಗ್ರಸ್ಥಾನ ಪಡೆದಿದೆ ಎನ್ನಲಾಗಿದೆ. BonKaso AirPods Max Case – Hard Shell Portable Headphone Carrying Case with Earpads Storage | Compatible with AirPods Max | Anti-Pressure Vinyl Travel Pouch – Black & Orange

ಟೇಲರ್‌ ಸ್ವಿಫ್ಟ್‌ ಹಾಗೂ ಟ್ರಾವಿಸ್‌ ಕಲ್ಸೆ ಅವರು ಜೊತೆಗಿರುವ ಫೋಟೋಗೆ ಮೂರು ಕೋಟಿಯಷ್ಟು ಜನರು ಲೈಕ್‌ ಮಾಡಿದ್ದಾರೆ. 

ಎಮಿಲೊ ಪಿಯಾನೊ ಎಂಬ ಬಾಲಕಿ ಹಾಡಿರುವ ಟೈಟಾನಿಕ್‌ ಸಿನಿಮಾದ ಗೀತೆಯ ತುಣುಕಿಗೆ ಮೂರು ಕೋಟಿಯಷ್ಟು ಜನರು ಮೆಚ್ಚುಗೆ ಸೂಚಿಸಿದ್ದಾರೆ. 

ಕ್ರಿಸ್ಟಿಯಾನೊ ರೊನಾಲ್ಡೋ ಹಾಗೂ ಲಿಯೊನೆಲ್‌ ಮೆಸ್ಸಿ ಅವರು ಜೊತೆಗೂಡಿ ಚೆಸ್‌ ಆಡುತ್ತಿರುವಂತೆ ಚಿತ್ರಿಸಲಾಗಿರುವ ಫೋಟೋಗೆ ನಾಲ್ಕು ಕೋಟಿ ಜನರು ಲೈಕ್‌ ಕೊಟ್ಟಿದ್ದಾರೆ.

ಇನ್ಸ್‌ಟಾ 360 ಎನ್ನುವ ಖಾತೆಯಿಂದ ಹಂಚಿಕೊಳ್ಳುವ ಪೋಸ್ಟ್‌ಗಳನ್ನು ಹೆಚ್ಚು ಜನರು ಲೈಕ್‌ ಮಾಡುತ್ತಾರೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಬಿಜಿನೆಸ್‌ ಇಂಟಲಿಜೆನ್ಸ್‌ - ವ್ಯವಹಾರ ಬೆಳವಣಿಗೆಯ ಗುಟ್ಟು: ಎಐ ಆಧಾರಿತ BI ಟೂಲ್ಸ್‌!?