Skip to main content
ವಿಡಿಯೋ
1/3
cinema

ವೆಬ್‌ಸೈಟ್‌ಗಳ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಮೊರೆ ಹೋದ ಜೂನಿಯರ್ ಎನ್‌ಟಿಆರ್..! ಇಲ್ಲಿದೆ ಸಂಪೂರ್ಣ ಮಾಹಿತಿ

By Ram Chethan
ವೆಬ್‌ಸೈಟ್‌ಗಳ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಮೊರೆ ಹೋದ ಜೂನಿಯರ್ ಎನ್‌ಟಿಆರ್..! ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್, ತಮ್ಮ ಹೆಸರು, ಫೋಟೋ ಮತ್ತು ವಿಡಿಯೋಗಳನ್ನು ಅನಧಿಕೃತವಾಗಿ ವಾಣಿಜ್ಯ ಬಳಕೆ ಮಾಡುತ್ತಿರುವ ವೆಬ್‍ಸೈಟ್‌ಗಳ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಮೊರೆ ಹೋದರು. ಮಾಹಿತಿ ತಂತ್ರಜ್ಞಾನ ನಿಯಮ–2021ರ ಅಡಿಯಲ್ಲಿ ಪ್ರಕರಣವನ್ನು ತುರ್ತು ದೂರಾಗಿ ಪರಿಗಣಿಸುವಂತೆ ಕೋರ್ಟ್ ಸೂಚನೆ ನೀಡಿದೆ.

ಪ್ಯಾನ್ ಇಂಡಿಯಾ ತಾರೆಯಾದ ಜೂನಿಯರ್ ಎನ್‍ಟಿಆರ್ ಸಾಮಾನ್ಯವಾಗಿ ಯಾವುದೇ ವಿವಾದಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಆದರೆ ಈ ಬಾರಿ ಅವರು ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಕಾರಣವೇನಂದ್ರೆ, ಕೆಲವು ವೆಬ್‌ಸೈಟ್‌ಗಳು ಹಾಗೂ ಸಾಮಾಜಿಕ ಜಾಲತಾಣ ಪುಟಗಳು ಅವರ ಫೋಟೋ, ವಿಡಿಯೋ, ಹೆಸರು ಮತ್ತು ವ್ಯಕ್ತಿತ್ವಕ್ಕೆ ಸಂಬಂಧಿಸಿದ ಅಂಶಗಳನ್ನು ಅನಧಿಕೃತವಾಗಿ ಬಳಸುತ್ತಿವೆ. ಇದನ್ನು ತಡೆಯಲು ಎನ್‍ಟಿಆರ್ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.Armani Exchange Silicone Hampton Analog Blue Dial Men Watch-Ax2440, Blue Band

ಅವರಿಗೆ ಸೇರಿರುವ ವ್ಯಕ್ತಿತ್ವ ಹಕ್ಕುಗಳನ್ನು ಕಾಪಾಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವ ಎನ್‍ಟಿಆರ್ ಪರವಾಗಿ ಹಿರಿಯ ವಕೀಲ ಜೆ. ಸಾಯಿ ದೀಪಕ್ ವಾದಿಸಿದರು. ಹಲವಾರು ಇ-ಕಾಮರ್ಸ್ ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಅವರ ಅನುಮತಿಯಿಲ್ಲದೆ ಕಾಮರ್ಶಿಯಲ್ ಲಾಭಕ್ಕಾಗಿ ಅವರ ಫೋಟೋ ಹಾಗೂ ವಿಡಿಯೋಗಳನ್ನು ಬಳಸುತ್ತಿವೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ಇದನ್ನು ಓದಿ:ರಿಷಬ್‌ ಶೆಟ್ಟಿಗಾಗಿ ದೈವ ನರ್ತಕರು ಮಾಡಿದ್ರಾ ದೊಡ್ಡ ತಪ್ಪು? ನಿಜ ಏನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ!

ಇದನ್ನಗಾಧರಿಸಿ ನ್ಯಾಯಾಲಯವು ಮಾಹಿತಿ ತಂತ್ರಜ್ಞಾನ ನಿಯಮಗಳು 2021ರ ಅಡಿಯಲ್ಲಿ ಈ ಪ್ರಕರಣವನ್ನು ತುರ್ತು ದೂರು (Formal Complaint) ಎಂದು ಪರಿಗಣಿಸಲು ತರತುರಿಯಲ್ಲಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ. ಜೊತೆಗೆ, ಆರೋಪ ಎದುರಿಸುತ್ತಿರುವ ವೆಬ್‌ಸೈಟ್‌ಗಳು ಹಾಗೂ ಸಂಸ್ಥೆಗಳು ಮೂರು ದಿನಗಳಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ಸುಪಾರಿ ಜಾರಿ ಮಾಡಿದೆ.

ತಮ್ಮ ಹೆಸರು ಮತ್ತು ಗುರುತಿನ ಹಕ್ಕುಗಳನ್ನು ಪುನಃ ದೃಢಪಡಿಸಿಕೊಳ್ಳುವ ಈ ಹೆಜ್ಜೆಯಿಂದ ಜೂನಿಯರ್ ಎನ್‍ಟಿಆರ್ ತಮ್ಮ ವ್ಯಕ್ತಿತ್ವ ಹಕ್ಕುಗಳನ್ನು ಕಾನೂನುಬದ್ಧವಾಗಿ ಬಲಪಡಿಸಿದ್ದಾರೆ ಎನ್ನಬಹುದು. ಇತ್ತೀಚೆಗೆ ಹಲವಾರು ಬಾಲಿವುಡ್ ತಾರೆಗಳು ಸಹ ಇದೇ ರೀತಿಯ ವಿಷಯಗಳಿಗೆ ಕಾನೂನು ಕ್ರಮ ಕೈಗೊಂಡಿದ್ದು, ಇದೀಗ ದಕ್ಷಿಣದ ತಾರೆ ಎನ್‍ಟಿಆರ್ ಕೂಡ ತಮ್ಮ ಹಕ್ಕನ್ನು ರಕ್ಷಿಸಲು ಮುಂದಾಗಿದ್ದಾರೆ.