ರೇಣುಕಾ ಸ್ವಾಮಿ ಕೊಲೆ ಪ್ರಕರಣದ ನಂತರ ನಟ ದರ್ಶನ್ ತೂಗುದೀಪ ಜೈಲಿನಲ್ಲಿ ಇದ್ದೇ ಇರುವಾಗ, ಜೈಲಿನ ಒಳಗೆ ಖೈದಿಗಳಿಗೆ ರಾಜಾತಿಥ್ಯ ನೀಡಲಾಗಿದೆ ಎಂಬ ವಿವಾದ ದೊಡ್ಡ ಮಟ್ಟದಲ್ಲಿ ಕೇಳಿಬಂದಿತ್ತು. ಜೈಲಿನಲ್ಲಿ ಎಣ್ಣೆ ಪಾರ್ಟಿ, ಸ್ಮಾರ್ಟ್‌ಫೋನ್ ಬಳಕೆ, ವಿಶೇಷ ಸೌಲಭ್ಯ ಪಡೆಯುತ್ತಿರುವ ಖೈದಿಗಳ ಚಿತ್ರಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ಗೆ ಅತೀ ಆಪ್ತರಾಗಿರುವ ನಟ ಧನ್ವೀರ್ ಗೌಡರನ್ನು ಕೆಲವು ದಿನಗಳ ಹಿಂದೆ ಪೊಲೀಸರು ವಿಚಾರಣೆ ಮಾಡಿದ್ದರು.Arayna Women's Cotton Printed Floral Straight Kurta with Palazzo Pants and Dupatta
ಪೊಲೀಸರು ಧನ್ವೀರ್ ಅವರ ಮೊಬೈಲ್ ಫೋನ್ ವಶಪಡಿಸಿಕೊಂಡು ಸೈಬರ್ ಸೆಲ್‌ಗೆ ಕಳುಹಿಸಿದ್ದರು. ಆದರೆ, ಈಗ ಆ ಫೋನ್‌ನಿಂದ ಯಾವುದೇ ಡಾಟಾ ರಿಕವರಿ ಆಗಿಲ್ಲ ಎಂಬ ವರದಿ ಬಂದಿದೆ. ಇದರಿಂದ ಧನ್ವೀರ್ ಬೇಡಿಕೆಗೂ ಮುನ್ನವೇ ತಮ್ಮ ಫೋನ್‌ನಲ್ಲಿದ್ದ ಡಾಟಾ ವನ್ನು ಅಳಿಸಿದ್ದಾರೆ ಅಥವಾ ಬೇರೆ ಮೊಬೈಲ್ ಅನ್ನು ಪೊಲೀಸರಿಗೆ ಸಲ್ಲಿಸಿರುವರು ಎಂಬ ಅನುಮಾನ ಪೊಲೀಸರು ವ್ಯಕ್ತಪಡಿಸಿದ್ದಾರೆ.ಇದನ್ನು ಓದಿ:ಡೆವಿಲ್ ಸಿನಿಮಾ ರಿಲೀಸ್ ಹೊತ್ತಲ್ಲೇ ಜೈಲಲ್ಲಿ ದರ್ಶನ್ ಹಲ್ಲೆ ನಡೆಸಿದ್ರಾ? ಜೈಲಧಿಕಾರಿಗಳು ನೀಡಿದ ಸ್ಪಷ್ಟನೆ ಏನು?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಎಫ್‌ಎಸ್‌ಎಲ್ ವರದಿ ನಿರೀಕ್ಷಿಸಲಾಗಿದೆ. ವರದಿ ಬಂದ ಬಳಿಕ, ಅಗತ್ಯವಿದ್ದರೆ ಸಾಕ್ಷ್ಯ ನಾಶ ಮಾಡಿದ ಪ್ರಕರಣದಲ್ಲಿ ಧನ್ವೀರ್ ವಿರುದ್ಧ ಕೇಸು ದಾಖಲಿಸುವ ಸಾಧ್ಯತೆ ಇದ್ದೇ ಇದೆ ಎಂದು ಮೂಲಗಳು ತಿಳಿಸಿವೆ.
ದರ್ಶನ್ ಬಂಧನದ ಮೊದಲ ದಿನದಿಂದಲೂ ಧನ್ವೀರ್ ಗೌಡ ದರ್ಶನ್ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ. ನ್ಯಾಯಾಲಯದ ವಿಚಾರಣೆ, ವಕೀಲರ ನೇಮಕ ಮತ್ತು ವಿವಿಧ ಕಾನೂನು ವಿಚಾರಗಳಲ್ಲಿ ಸಹಾಯ ಮಾಡುತ್ತಿದ್ದಾರೆ. ಹಲವು ಬಾರಿ ಜೈಲಿಗೂ ಭೇಟಿ ನೀಡಿದ್ದ ಧನ್ವೀರ್ ಈಗ ತಮ್ಮ ಹೆಸರಿಗೇ ಒಮ್ಮೆ ಪ್ರಕರಣ ಸುತ್ತಿಕೊಳ್ಳುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.