ಚಿತ್ರದುರ್ಗದಲ್ಲಿರುವ ರೇಣುಕಾಸ್ವಾಮಿ ಸಮಾಧಿಯ ನಾಮಫಲಕ ಧ್ವಂಸಗೊಂಡಿರುವ ಘಟನೆ ಮತ್ತೆ ಈ ಪ್ರಕರಣಕ್ಕೆ ಹೊಸ ತಿರುವನ್ನು ತಂದಿದೆ. ರುದ್ರಭೂಮಿ ಪ್ರದೇಶದಲ್ಲಿ ಲೇಔಟ್ ನಿರ್ಮಾಣ ನಡೆಯುತ್ತಿರುವ ವೇಳೆ ಸಮಾಧಿಯ ಭಾಗಕ್ಕೆ ಹಾನಿ ಆಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಕೇಳಿದಾಗ, ರೇಣುಕಾಸ್ವಾಮಿ ಕುಟುಂಬಸ್ಥರು ತಮ್ಮಿಗೆ ಯಾವುದೇ ಪೂರ್ವ ಮಾಹಿತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.Arayna Women's Cotton Printed Floral Straight Kurta with Palazzo Pants and Dupatta
ಈ ಘಟನೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಸಮಯದಲ್ಲೇ ನಡೆದಿದ್ದು, ಜನರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. 2024ರ ಜೂನ್ ತಿಂಗಳಲ್ಲಿ ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆಂಬ ಕಾರಣಕ್ಕೆ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು ಎಂದು ತನಿಖೆ ತಿಳಿಸಿತ್ತು. ಈಗ ಸಮಾಧಿಗೆ ಧಕ್ಕೆ ಮಾಡಿದ ಘಟನೆ ಪರಿಣಾಮಕಾರಿಯಾಗಿ ಬೆಳವಣಿಗೆಯಾಗಬಹುದೆಂಬ ಅಭಿಪ್ರಾಯಗಳು ಸಮಾಜದಲ್ಲಿ ಕೇಳಿಬರುತ್ತಿವೆ.ಇದನ್ನು ಓದಿ:ದರ್ಶನ್ ಆಪ್ತ ಧನ್ವೀರ್ ಸಂಕಷ್ಟದಲ್ಲಿ..ಪೊಲೀಸರಿಗೆ ‘ಚಳ್ಳೆಹಣ್ಣು’ ತಿನ್ನಿಸಿದ ಶಂಕೆ..!ಇಲ್ಲಿದೆ ಮಾಹಿತಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತದಿಂದ ಸ್ಪಷ್ಟನೆ ಮತ್ತು ಕ್ರಮ ಕೈಗೊಳ್ಳುವ ನಿರೀಕ್ಷೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.