Skip to main content
ವಿಡಿಯೋ
1/2
general

ಅಲೋಕ್ ಕುಮಾರ್ ಅವರಿಂದ ಕಾರಾಗೃಹ ಇಲಾಖೆಯ ಡಿಜಿಪಿ ಅಧಿಕಾರ ಸ್ವೀಕಾರ..!

By Sushmitha R
ಅಲೋಕ್ ಕುಮಾರ್ ಅವರಿಂದ ಕಾರಾಗೃಹ ಇಲಾಖೆಯ ಡಿಜಿಪಿ ಅಧಿಕಾರ ಸ್ವೀಕಾರ..!

ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಕಾರಾಗೃಹ ಇಲಾಖೆಯ ಮಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷಕರಾಗಿ (ಡಿಜಿಪಿ) ಇಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಕಾರಾಗೃಹ ಇಲಾಖೆಯ ಮಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷಕರಾಗಿ (ಡಿಜಿಪಿ) ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಅಲೋಕ್ ಕುಮಾರ್.

ಕಾರಾಗೃಹ ಇಲಾಖೆಯ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ಇಲಾಖೆಯ ಸುಧಾರಣೆಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಅಧಿಕಾರ ಸ್ವೀಕಾರ ಸಮಾರಂಭವು ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಪ್ರೀಡಂ ಪಾರ್ಕ್ ರಸ್ತೆಯಲ್ಲಿರುವ ಕಾರಾಗೃಹ ಇಲಾಖೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ.Naixa Women's Pure Cotton Embroidered Straight Kurta with Pant and Dupatta Sets for Wedding and Festival Wear

ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ಅಧಿಕಾರ ಸ್ವೀಕರಿಸಿದ ಕೂಡಲೇ ಅಲೋಕ್ ಕುಮಾರ್ ಅವರು ಕಾರಾಗೃಹ ಇಲಾಖೆಯಲ್ಲಿನ ವ್ಯವಸ್ಥೆ ಹಾಗೂ ಎದುರಾಗುತ್ತಿರುವ ಸವಾಲುಗಳ ಕುರಿತು ಮಾಹಿತಿ ಪಡೆಯಲು ಮಹತ್ವದ ಸಭೆಗಳನ್ನು ನಡೆಸಲಿದ್ದಾರೆ.

ಇಂದು ನಡೆಯುವ ಸಭೆಗಳ ಕೇಂದ್ರಬಿಂದು, ಜೈಲುಗಳಲ್ಲಿ ನಡೆಯುತ್ತಿರುವ ಅಕ್ರಮಗಳು ಮತ್ತು ಅವ್ಯವಹಾರಗಳು. ಸೆಲ್ಫೋನ್ ಬಳಕೆ, ಮಾದಕ ವಸ್ತುಗಳ ಸಾಗಣೆ, ವಿಐಪಿ ಟ್ರೀಟ್‌ಮೆಂಟ್ ಮತ್ತು ಭದ್ರತಾ ಲೋಪಗಳಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದನ್ನು ಓದಿ: ಹೊಸ ವರ್ಷಕ್ಕೆ ಡ್ರಗ್ಸ್‌ಗೆ ಕಡಿವಾಣ: ಪೊಲೀಸರ ಮಾಸ್ಟರ್ ಪ್ಲಾನ್..!

ಜೈಲುಗಳಲ್ಲಿ ಪಾರದರ್ಶಕತೆ ಮತ್ತು ಶಿಸ್ತು ತರುವ ನಿಟ್ಟಿನಲ್ಲಿ ಅಲೋಕ್ ಕುಮಾರ್ ಅವರು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.ಇದನ್ನು ಓದಿ: ಗರುಡ್‌ ಡಿಫೆನ್ಸ್‌ ಟೆಕ್‌: ಭಾರತೀಯ ಆಧುನಿಕ ಕಣ್ಗಾವಲು ತಂತ್ರಜ್ಞಾನಕ್ಕೆ ಹೊಸ ಭರವಸೆ!