Skip to main content
ವಿಡಿಯೋ
1/2
crime

ಆನ್‌ಲೈನ್ ಪ್ರಾಪರ್ಟಿ ವಂಚನೆ: ಉದ್ಯಮಿಗೆ 30 ಲಕ್ಷ ರೂ. ಪಂಗನಾಮ..!

By Sushmitha R
ಆನ್‌ಲೈನ್ ಪ್ರಾಪರ್ಟಿ ವಂಚನೆ: ಉದ್ಯಮಿಗೆ 30 ಲಕ್ಷ ರೂ. ಪಂಗನಾಮ..!

ಆನ್‌ಲೈನ್‌ನಲ್ಲಿ ಆಸ್ತಿಗಳನ್ನು ಹುಡುಕುವ ಮತ್ತು ಖರೀದಿ ಮಾಡುವ ಮೊದಲು ಸಾಕಷ್ಟು ಎಚ್ಚರ ವಹಿಸುವುದು ಅತ್ಯಗತ್ಯ.

ಆನ್‌ಲೈನ್‌ನಲ್ಲಿ ಆಸ್ತಿಗಳನ್ನು ಹುಡುಕುವ ಮತ್ತು ಖರೀದಿ ಮಾಡುವ ಮೊದಲು ಸಾಕಷ್ಟು ಎಚ್ಚರ ವಹಿಸುವುದು ಅತ್ಯಗತ್ಯ. ಆ್ಯಪ್‌ಗಳು ಹಾಗೂ ವೆಬ್‌ಸೈಟ್‌ಗಳ ಮೂಲಕ ಆಸ್ತಿ ವಿವರಗಳನ್ನು ಅಪ್‌ಲೋಡ್ ಮಾಡುವ ಉದ್ಯಮಿ ವಿಮಲ್ ಮಾಲು ಎಂಬುವವರಿಗೆ ಬರೋಬ್ಬರಿ 30 ಲಕ್ಷ ರೂಪಾಯಿ ವಂಚನೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ವ್ಯವಹಾರಕ್ಕಾಗಿ ಸ್ಥಳವನ್ನು ಹುಡುಕುತ್ತಿದ್ದ ಉದ್ಯಮಿ ವಿಮಲ್ ಮಾಲು ಅವರು, 'ಮ್ಯಾಜಿಕ್ ಬ್ರಿಕ್ಸ್' ಆನ್‌ಲೈನ್ ಪೋರ್ಟಲ್‌ನಲ್ಲಿ ತಮಗೆ ಒಂದು ಪ್ರಾಪರ್ಟಿ ಬೇಕಿದೆ ಎಂದು ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡಿದ್ದರು. ಈ ಮಾಹಿತಿಯನ್ನು ತಿಳಿದುಕೊಂಡ ಸ್ವಾತಿ ಅಲಿಯಾಸ್ ಸರಸ್ವತಿ ಎಂಬ ಮಹಿಳೆಯೊಬ್ಬಳು ವಂಚನೆಗೆ ಸಂಚು ರೂಪಿಸಿದ್ದಾಳೆ.Naixa Women's Chanderi with Cotton Lining Embroidered Straight Kurta with Pant and Dupatta Sets (NX4-556)

ಆರೋಪಿ ಸರಸ್ವತಿ, ಉದ್ಯಮಿ ವಿಮಲ್‌ಗೆ ಕರೆ ಮಾಡಿ, ನನ್ನ ಬಳಿ ಒಂದು ಆಕರ್ಷಕ ಪ್ರಾಪರ್ಟಿ ಇದೆ ಎಂದು ನಂಬಿಸಿದ್ದಾಳೆ. ಬೆಂಗಳೂರಿನ ಪ್ರತಿಷ್ಠಿತ ಪ್ರದೇಶವಾದ ಪ್ರೆಸ್ಟಿಜ್ ಮೆರಿಡಿಯನ್ ಅಪಾರ್ಟ್‌ಮೆಂಟ್‌ನಲ್ಲಿ 1725 ಚದರ ಅಡಿ ವಿಸ್ತೀರ್ಣದ ಫ್ಲಾಟ್ ಮಾರಾಟಕ್ಕಿದೆ ಎಂದು ವಿಮಲ್ ಅವರನ್ನು ಸಂಪೂರ್ಣವಾಗಿ ಒಪ್ಪಿಸಿದ್ದಾಳೆ.

ಆರೋಪಿಯು ವಿಮಲ್ ಅವರನ್ನು ನೇರವಾಗಿ ಈ ಪ್ರಾಪರ್ಟಿಯ ಬಳಿ ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ಮಾಡಿಸಿದ್ದಳು. ನಂತರ, ಈ ಆಸ್ತಿಯ ಒಟ್ಟು ಮೌಲ್ಯ 2.30 ಕೋಟಿ ರೂಪಾಯಿ ಎಂದು ವ್ಯಾಪಾರ ಕುದುರಿಸಿದ್ದಳು.ವಂಚಕಿ ಸರಸ್ವತಿ, ಈ ಪ್ರಾಪರ್ಟಿ ಪಡೆದುಕೊಳ್ಳಲು ಮುಂಗಡವಾಗಿ 30 ಲಕ್ಷ ರೂಪಾಯಿ ನೀಡುವಂತೆ ವಿಮಲ್ ಅವರನ್ನು ಕೇಳಿದ್ದಾಳೆ. ಇದನ್ನು ಓದಿ: ಅಲೋಕ್ ಕುಮಾರ್ ಅವರಿಂದ ಕಾರಾಗೃಹ ಇಲಾಖೆಯ ಡಿಜಿಪಿ ಅಧಿಕಾರ ಸ್ವೀಕಾರ..!

ಈ ಹಣವನ್ನು ಪ್ರಾಪರ್ಟಿಯ ಮಾಲೀಕರಿಗೆ ನೀಡಬೇಕು ಎಂದು ಹೇಳಿ ಉದ್ಯಮಿಯಿಂದ ಚೆಕ್‌ ಪಡೆದಿದ್ದಾಳೆ. ವಿಮಲ್ ಅವರಿಂದ 30 ಲಕ್ಷ ರೂಪಾಯಿಯ ಚೆಕ್ ಪಡೆದ ತಕ್ಷಣ, ಸರಸ್ವತಿ ಆ ಚೆಕ್ ಅನ್ನು ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದಾಳೆ.

ಬ್ಯಾಂಕಿನಿಂದ ಹಣವನ್ನು ನಗದೀಕರಿಸಿಕೊಂಡು ತಕ್ಷಣವೇ ಎಸ್ಕೇಪ್ ಆಗಿದ್ದಾಳೆ. ಪ್ರಾಪರ್ಟಿಯ ಮಾಲೀಕರು ಬೇರೆಯೇ ಇದ್ದು, ಇದು ವಂಚನೆ ಎಂದು ತಿಳಿಯುತ್ತಿದ್ದಂತೆ ವಿಮಲ್ ಅವರಿಗೆ ಆಘಾತವಾಗಿದೆ.ಇದನ್ನು ಓದಿ: ಹೊಸ ವರ್ಷಕ್ಕೆ ಡ್ರಗ್ಸ್‌ಗೆ ಕಡಿವಾಣ: ಪೊಲೀಸರ ಮಾಸ್ಟರ್ ಪ್ಲಾನ್..!

ಸದ್ಯ ಈ ವಂಚನೆಯ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಸ್ವಾತಿ ಅಲಿಯಾಸ್ ಸರಸ್ವತಿಗಾಗಿ ತೀವ್ರ ಹುಡುಕಾಟ ನಡೆಸಿ, ಆಕೆಯನ್ನು ಬಂಧಿಸಲು ಬಲೆ ಬೀಸಿದ್ದಾರೆ.