ಧರ್ಮಸ್ಥಳ ಷಡ್ಯಂತ್ರ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದ ವಿಶೇಷ ತನಿಖಾ ದಳ (ಎಸ್.ಐ.ಟಿ), ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾಗಿದ್ದ ಸುಜಾತಾ ಭಟ್ ಅವರ ಹೇಳಿಕೆಯ ಕುರಿತು ನೀಡಿದ ಯು-ಟರ್ನ್ ಮತ್ತು ನಂತರದ ಕ್ರಮಗಳಿಂದಾಗಿ ಸುದ್ದಿಯ ಕೇಂದ್ರಬಿಂದುವಾಗಿತ್ತು. ಅದರ ಜೊತೆಗೆ ನನಗೆ ಮಗಳೇ ಇರಲಿಲ್ಲ ಎಂದು insightrush ಚಾಲನ್ ಗೆ ಸತ್ಯ ಬಾಯಿಬಿಟ್ಟ ಸುಜಾತಾ ಭಟ್ .
ಪ್ರಕರಣದ ಆರಂಭದಲ್ಲಿ ಸುಜಾತಾ ಭಟ್ ಅವರು ಎಸ್.ಐ.ಟಿ. ಮುಂದೆ ಹೇಳಿಕೆ ನೀಡಿರುವುದಾಗಿ ಹೇಳಲಾಗಿತ್ತು. ಆದರೆ, ಆ ಹೇಳಿಕೆಯನ್ನು ತಾವೇ ಹಿಂದೆಗೆದುಕೊಂಡು, ಸತ್ಯವನ್ನು ಬಹಿರಂಗಪಡಿಸುವ ಹೇಳಿಕೆಯನ್ನು ಎಸ್.ಐ.ಟಿ. ಮುಂದೆ ನೀಡಿದ್ದರು.ANNI DESIGNER Women's Cotton Printed Maroon Hand-Print Kurta Set|A-Line Kurta With Palazzo|Co-Ord Set|Ethnic & Stylish Two Piece Dress|Casual & Office Wear Coord Set
ಸುಜಾತಾ ಭಟ್ ಅವರ ಹಿಂಬರಹದ ಹೇಳಿಕೆ:
ಎಸ್.ಐ.ಟಿ.ಗೆ ನೀಡಿದ ತಮ್ಮ ಹಿಂಬರಹದ ಹೇಳಿಕೆಯಲ್ಲಿ ಸುಜಾತಾ ಭಟ್ ಅವರು ಹಿಂದೆ ನೀಡಿದ್ದ ಹೇಳಿಕೆಯನ್ನು ಸಂಪೂರ್ಣವಾಗಿ ಸುಳ್ಳು ಎಂದು ತಳ್ಳಿಹಾಕಿದ್ದಾರೆ. ಆ ಹೇಳಿಕೆಯ ಪ್ರಮುಖಾಂಶಗಳು ಹೀಗಿವೆ.
ಅನನ್ಯ ಭಟ್' ಮಗಳೇ ಇರಲಿಲ್ಲ: ತನಗೆ 'ಅನನ್ಯ ಭಟ್' ಎಂಬ ಮಗಳೇ ಇರಲಿಲ್ಲ, ಮತ್ತು ಆಕೆ ಧರ್ಮಸ್ಥಳದಲ್ಲಿ ಕಾಣೆಯಾಗಿರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೋಲ್ಕತ್ತಾ ಸಿಬಿಐನಲ್ಲಿ ಕೆಲಸದ ನಿರಾಕರಣೆ: ಅನನ್ಯಾ ಭಟ್ ಕೋಲ್ಕತ್ತಾದ ಸಿಬಿಐನಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಹಿಂದಿನ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ಒತ್ತಡದ ಕುರಿತು ಹೇಳಿಕೆ: ತನಗೆ ಶಿವ ಶಂಕರ್ ಅವರ ಪರಿಚಯವಿತ್ತು. ಬಳಿಕ, ಟಿ. ಜಯಂತ್, ಗಿರೀಶ್ ಮತ್ತಣ್ಣನವರ್ ಅವರಂತಹ ಕೆಲವರು ತಮಗೆ ಒತ್ತಡ ಹಾಕಿ, ನಿಜವಲ್ಲದ, ಇಲ್ಲದ ವಿಷಯಗಳ ಬಗ್ಗೆ ಸುಳ್ಳು ಹೇಳಿಕೆಯನ್ನು ನೀಡುವಂತೆ ಬಲವಂತ ಮಾಡಿದ್ದರು ಎಂದು ಹೇಳಿದ್ದಾರೆ. ಇದನ್ನು ಓದಿ: ಸಿಎಂ ಸಿದ್ದರಾಮಯ್ಯ ಭೇಟಿಯಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್..!
ಮೊದಲ ಹೇಳಿಕೆ ಸುಳ್ಳು: ತಾವು ಮೊದಲು ನೀಡಿದ್ದ ಹೇಳಿಕೆ ಸಂಪೂರ್ಣ ಸುಳ್ಳಾಗಿರುತ್ತದೆ ಮತ್ತು ಒತ್ತಡದ ಕಾರಣದಿಂದ ನೀಡಿದ್ದು ಎಂದು ಒಪ್ಪಿಕೊಂಡಿದ್ದಾರೆ.
ಎಸ್.ಐ.ಟಿ. ಕ್ರಮ:
ಸುಜಾತಾ ಭಟ್ ಅವರು ಎಸ್.ಐ.ಟಿ. ಮುಂದೆ ಕೊಟ್ಟ ಈ ಹಿಂಬರಹದ ಹೇಳಿಕೆಯೇ ಅವರಿಗೆ ಮುಳುವಾಗಿದೆ. ತಮ್ಮ ಹೇಳಿಕೆಯನ್ನು ತಾವೇ ಸುಳ್ಳು ಎಂದು ಹೇಳಿ, ಪ್ರಕರಣದ ತನಿಖೆಯನ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದಾರೆ ಎಂಬ ಆಧಾರದ ಮೇಲೆ, ಎಸ್.ಐ.ಟಿ. ತಂಡವು ಸುಜಾತಾ ಭಟ್ ಅವರನ್ನೇ ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಂಡಿದೆ. ಈ ಕ್ರಮವು ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವನ್ನು ಉಂಟುಮಾಡಿದೆ.ಇದನ್ನು ಓದಿ: ರಾಷ್ಟ್ರೀಯ ಪಥ ಸಂಚಲನ: ಯಾವುದೇ ಗಲಾಟೆ, ಹಿಂಸೆ ನಡೆದಿಲ್ಲ - ಗೃಹ ಸಚಿವ ಡಾ। ಜಿ. ಪರಮೇಶ್ವರ್..!