Skip to main content
ವಿಡಿಯೋ
1/2
crime

ಬೆಂಗಳೂರು: ಉದ್ಯಮಿ ಮೇಲೆ ಏರ್ ಗನ್ ಫೈರಿಂಗ್, ತೀವ್ರ ಕುತೂಹಲ..!

By Sushmitha R
ಬೆಂಗಳೂರು: ಉದ್ಯಮಿ ಮೇಲೆ ಏರ್ ಗನ್ ಫೈರಿಂಗ್, ತೀವ್ರ ಕುತೂಹಲ..!

ಬೆಂಗಳೂರಿನ ಬಸವನಗುಡಿಯಲ್ಲಿರುವ ಕೃಷ್ಣರಾವ್ ಪಾರ್ಕ್ ಬಳಿ ನಡೆದ ಅನಿರೀಕ್ಷಿತ ಘಟನೆಯೊಂದರಲ್ಲಿ, ಪ್ರಸಿದ್ಧ ಉದ್ಯಮಿ ಹಾಗೂ ನರ್ತಕಿ ಮತ್ತು ಕಾರ್ಗಿಲ್ ಬಾರ್‌ಗಳ ಮಾಲೀಕರಾದ ರಾಜಗೋಪಾಲ್ ಅವರ ಮೇಲೆ ಏರ್ ಗನ್‌ನಿಂದ ಫೈರಿಂಗ್ ನಡೆಸಲಾಗಿದೆ.

ಬೆಂಗಳೂರಿನ ಬಸವನಗುಡಿಯಲ್ಲಿರುವ ಕೃಷ್ಣರಾವ್ ಪಾರ್ಕ್ ಬಳಿ ನಡೆದ ಅನಿರೀಕ್ಷಿತ ಘಟನೆಯೊಂದರಲ್ಲಿ, ಪ್ರಸಿದ್ಧ ಉದ್ಯಮಿ ಹಾಗೂ ನರ್ತಕಿ ಮತ್ತು ಕಾರ್ಗಿಲ್ ಬಾರ್‌ಗಳ ಮಾಲೀಕರಾದ ರಾಜಗೋಪಾಲ್ ಅವರ ಮೇಲೆ ಏರ್ ಗನ್‌ನಿಂದ ಫೈರಿಂಗ್ ನಡೆಸಲಾಗಿದೆ.

ಈ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಘಟನೆ ನಡೆದಿದ್ದು ಡಿಸೆಂಬರ್ 10ರ ರಾತ್ರಿ 8:30ರ ಸುಮಾರಿನಲ್ಲಿ. ಕೃಷ್ಣರಾವ್ ಪಾರ್ಕ್ ಬಳಿ ರಾಜಗೋಪಾಲ್ ಅವರು ಇದ್ದ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಏರ್ ಗನ್ ಬಳಸಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ANNI DESIGNER Women's Cotton Printed Maroon Hand-Print Kurta Set|A-Line Kurta With Palazzo|Co-Ord Set|Ethnic & Stylish Two Piece Dress|Casual & Office Wear Coord Set

ಈ ಫೈರಿಂಗ್‌ನಿಂದಾಗಿ ಉದ್ಯಮಿ ರಾಜಗೋಪಾಲ್ ಅವರ ಕತ್ತಿನ ಭಾಗಕ್ಕೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಜಯನಗರದ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ.ಪ್ರಕರಣದ ಕುರಿತು ಬಸವನಗುಡಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

ಆದರೆ ಗಾಯಗೊಂಡಿರುವ ಉದ್ಯಮಿ ರಾಜಗೋಪಾಲ್ ಅವರ ಹೇಳಿಕೆ ಪೊಲೀಸರನ್ನೂ ಗೊಂದಲಕ್ಕೆ ದೂಡಿದೆ. ವಿಚಾರಣೆ ವೇಳೆ ರಾಜಗೋಪಾಲ್ ಅವರು, ಈ ಘಟನೆ ಹಿಂದೆ ಯಾವುದೇ ನಿರ್ದಿಷ್ಟ ವ್ಯಕ್ತಿಗಳ ಕೈವಾಡ ಇರಬಹುದು ಎಂಬ ಅನುಮಾನ ನನಗಿಲ್ಲ. ಅಲ್ಲದೆ, ಫೈರಿಂಗ್‌ಗೂ ಮುನ್ನ ನನಗೆ ಯಾವುದೇ ಬೆದರಿಕೆ ಕರೆ ಕೂಡ ಬಂದಿರಲಿಲ್ಲ ಎಂದು ಹೇಳಿದ್ದಾರೆ.ಇದನ್ನು ಓದಿ: ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ: ಅತ್ಯಾಚಾರ ಪ್ರಕರಣಗಳ ವರ್ಗಾವಣೆ ಅರ್ಜಿ ವಜಾ

ಯಾಕಾಗಿ ಫೈರಿಂಗ್ ನಡೆಯಿತು, ಇದರ ಹಿಂದಿನ ಕಾರಣಗಳೇನು? ಗುಂಡು ಹಾರಿಸಿದವರು ಯಾರು? ಎಂಬ ಬಗ್ಗೆ ತಮಗೂ ಯಾವುದೇ ಸುಳಿವು ಇಲ್ಲ ಎಂದು ಉದ್ಯಮಿ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣದ ಹಿನ್ನೆಲೆ ಮತ್ತು ಉದ್ದೇಶ ಸ್ಪಷ್ಟವಾಗದ ಕಾರಣ, ಬಸವನಗುಡಿ ಪೊಲೀಸರು ಏರ್ ಗನ್ ಶೂಟರ್‌ಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.

ಶೂಟರ್‌ ಪತ್ತೆ ಮತ್ತು ಫೈರಿಂಗ್‌ನ ಉದ್ದೇಶ ಬಯಲು ಮಾಡುವ ನಿಟ್ಟಿನಲ್ಲಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಇದು ಕೇವಲ ಒಂದು ಬೆದರಿಕೆಯ ಭಾಗವೇ ಅಥವಾ ಯಾವುದಾದರೂ ಹಳೆಯ ದ್ವೇಷದ ಮುಂದುವರಿದ ಭಾಗವೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.ಇದನ್ನು ಓದಿ: ಡೆತ್ ನೋಟ್ ಬರೆದಿಟ್ಟು ತಾಯಿ-ಮಗ ಸೇರಿದಂತೆ ಮೂವರ ಸಾಮೂಹಿಕ ಆತ್ಮಹತ್ಯೆ: 14 ವರ್ಷದ ಮಗನಿಂದಲೇ ಡೆತ್ ನೋಟ್ ಬರೆಸಿದ್ದ ತಾಯಿ