ಡಿಜಿಟಲ್ ಸಂವಹನಕ್ಕೆ ಬಹುದೊಡ್ಡ ಉದಾಹರಣೆಯಾಗಿರುವ ವಾಟ್ಸ್ಯಾಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ನಿಮ್ಮ ಮಿಸ್ಡ್ ಕಾಲ್‌ಗಳಿಗೆ ತಕ್ಷಣವೇ ವಾಯ್ಸ್ ನೋಟ್ ಅಥವಾ ವಿಡಿಯೋ ನೋಟ್ ಮೂಲಕ ಸಂಪರ್ಕಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಯಾರಾದರೂ ಕರೆಯನ್ನು ಸ್ವೀಕರಿಸಲು ಅಸಾಧ್ಯವಾದಲ್ಲಿ, ಕೂಡಲೇ ವಾಯ್ಸ್ ಅಥವಾ ವಿಡಿಯೋ ನೋಟ್ ಕಳುಹಿಸುವ ಸೌಲಭ್ಯವನ್ನು ಒದಗಿಸಿದೆ ಎನ್ನಲಾಗಿದೆ. ಈ ಮೂಲಕ ತ್ವರಿತ ಮಾಹಿತಿ ಪ್ರಸರಣಕ್ಕೆ, ಸುಲಭ ಹಾಗೂ ಸರಾಗ ಸಂದೇಶಗಳಿಗೆ ಇದು ಸಹಕರಿಸಲಿದೆ. ಹಳೆಯ ವಾಯ್ಸ್‌ಮೇಲ್‌ನ ಆಧುನಿಕ ಆವೃತ್ತಿಯಾಗಿ ವಾಟ್ಸ್ಯಾಪ್‌ನೊಳಗೆ ಎಐನ ಪಾತ್ರವನ್ನು ವಿಸ್ತರಿಸಿದೆ ಎನ್ನಲಾಗಿದೆ. Fire-Boltt Legacy Luxury Smart Watch with 1.43” AMOLED, Bluetooth Calling, Wireless Charging, Voice Assistant, 110+ Sports Modes & Health Tracking, Smart Watch for Man & Woman– Black SS
ವಾಯ್ಸ್ ಕರೆಗೆ ವಾಯ್ಸ್ ನೋಟ್ ಹಾಗೂ ವಿಡಿಯೋ ಕರೆಗೆ ವಿಡಿಯೋ ನೋಟ್ ಕಳುಹಿಸುವ ಆಯ್ಕೆಯನ್ನು ಹೊಂದಿದೆ. ಈ ಮೂಲಕ ಆಪ್ತರಿಗೆ ಸುಲಭವಾಗಿ ಸಂದೇಶ ಕಳುಹಿಸುವ ಉತ್ತಮ ವೈಯಕ್ತಿಕ ಅನುಭವವನ್ನು ಪಡೆಯಲು ಇದು ಅವಕಾಶ ಮಾಡಿಕೊಡಲಿದೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಜೀವರಕ್ಷಣೆಯ ಭವಿಷ್ಯಕ್ಕೆ ಹೊಸ ರೆಕ್ಕೆಗಳು: MIT ಅಭಿವೃದ್ಧಿಪಡಿಸಿದ ಏರಿಯಲ್ ಮೈಕ್ರೋಬೋಟ್‌ಗಳು!?