Skip to main content
ವಿಡಿಯೋ
general

ಇತಿಹಾಸ ಬರೆದ ಎಲಾನ್‌ ಮಸ್ಕ್‌ - 600 ಬಿಲಿಯನ್‌ ದಾಟಿದ ಆಸ್ತಿಮೌಲ್ಯ ಹೊಂದಿದ ವಿಶ್ವದ ಮೊದಲ ವ್ಯಕ್ತಿ!?

By Shravanthi R
ಇತಿಹಾಸ ಬರೆದ ಎಲಾನ್‌ ಮಸ್ಕ್‌ - 600 ಬಿಲಿಯನ್‌ ದಾಟಿದ ಆಸ್ತಿಮೌಲ್ಯ ಹೊಂದಿದ ವಿಶ್ವದ ಮೊದಲ ವ್ಯಕ್ತಿ!?

ಸಂಪತ್ತಿನ ವಿಚಾರದಲ್ಲಿ ಮತ್ತೊಮ್ಮೆ ಹೊಸ ದಾಖಲೆ ಬರೆದಿದ್ದಾರೆ ಉದ್ಯಮಿ ಎಲಾನ್‌ ಮಸ್ಕ್‌. ವರದಿಗಳ ಪ್ರಕಾರ, ಈ ವರ್ಷದ ಡಿಸೆಂಬರ್‌ ವೇಳೆಗೆ ಅವರ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 677 ಡಾಲರ್‌ (50 ಲಕ್ಷ ಕೋಟಿಗೂ ಅಧಿಕ) ತಲುಪಿದೆ ಎನ್ನಲಾಗಿದೆ.

ಎಲಾನ್‌ ಮಸ್ಕ್‌ ಅವರ ಒಡೆತನದ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್‌, ಟೆಸ್ಲಾ, ಎಕ್ಸ್‌ ಸಂಸ್ಥೆಗಳನ್ನೂ ಒಳಗೊಂಡಂತೆ ಅವುಗಳ ಯಶಸ್ಸು ಅವರ ಸಂಪತ್ತನ್ನು ಹೆಚ್ಚಿಸಿದೆ. ಈ ಮೂಲಕ ಪ್ರಸ್ತುತ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾದ ಗೂಗಲ್‌/ ಆಲ್ಪಾಬೆಟ್‌ನ ಮುಖ್ಯಸ್ಥರಾದ ಲ್ಯಾರಿ ಪೇಜ್‌ ಅವರನ್ನು ಹಿಂದಿಕ್ಕಿ, ಅವರಿಗಿಂತಲೂ 400 ಬಿಲಿಯನ್‌ ಡಾಲರ್‌ಗೂ ಅಧಿಕ ಸಂಪತ್ತನ್ನು ಹೊಂದಿದ್ದಾರೆ.  

ಈ ಬೆಳವಣಿಗೆ ಮೂಲಕ ಆರ್ಥಿಕ ವಲಯದಲ್ಲಿ ಎಲಾನ್‌ ಮಸ್ಕ್‌, ಇತರರಿಗಿಂತ ಎರಡು-ಮೂರು ಪಟ್ಟು ಆಸ್ತಿ ಭಾರಿ ಅಂತರವಿದೆ ಎನ್ನಲಾಗಿದೆ. ವರದಿಯು ಮಾಹಿತಿ ತಿಳಿಸಿರುವಂತೆ ವಿಶ್ವದ ಹತ್ತು ಶ್ರೀಮಂತರಲ್ಲಿ ಬಹುತೇಕರು ತಂತ್ರಜ್ಞಾನ ಕ್ಷೇತ್ರದವರಾಗಿದ್ದು, ಈ ಮೂಲಕ ಟೆಕ್‌ ಅಧಿಪತ್ಯ ಪಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: WhatsApp ಹೊಸ ಫೀಚರ್‌: ಮಿಸ್ಡ್‌ ಕಾಲ್‌ಗಳಿಗೆ ತಕ್ಷಣವೇ ಉತ್ತರ!?

ವರದಿ ಪ್ರಕಾರ, ಡಿಸೆಂಬರ್‌ 15, 2025 ರ ವೇಳೆಗೆ ವಿಶ್ವದ ಟಾಪ್‌ 10 ಶ್ರೀಮಂತ ವ್ಯಕ್ತಿಗಳು: Fire-Boltt Axiom Smart Watch – 1.43" AMOLED Display, Health & Fitness Tracking, Always-On Screen, Wireless Charging, Rotating Crown, Bluetooth Calling, Metal Case Smart Watch for Man & Woman- Black

2025ರ ವಿಶ್ವದ ಟಾಪ್ 10 ಶ್ರೀಮಂತರು (ಡಿಸೆಂಬರ್ 15ರ ವರದಿಯಂತೆ):

  1. ಎಲೋನ್ ಮಸ್ಕ್ (Elon Musk): $677 ಬಿಲಿಯನ್ (ಟೆಸ್ಲಾ, ಸ್ಪೇಸ್‌ಎಕ್ಸ್)

  2. ಲ್ಯಾರಿ ಪೇಜ್ (Larry Page): $266 ಬಿಲಿಯನ್ (ಗೂಗಲ್/ಆಲ್ಫಾಬೆಟ್)

  3. ಜೆಫ್ ಬೆಜೋಸ್ (Jeff Bezos): $249 ಬಿಲಿಯನ್ (ಅಮೆಜಾನ್)

  4. ಸರ್ಜೆ ಬ್ರಿನ್ (Sergey Brin): $247 ಬಿಲಿಯನ್ (ಗೂಗಲ್)

  5. ಲ್ಯಾರಿ ಎಲಿಸನ್ (Larry Ellison): $243 ಬಿಲಿಯನ್ (ಒರಾಕಲ್)

  6. ಮಾರ್ಕ್ ಜುಕರ್‌ಬರ್ಗ್ (Mark Zuckerberg): $228 ಬಿಲಿಯನ್ (ಮೆಟಾ/ಫೇಸ್‌ಬುಕ್)

  7. ಬರ್ನಾರ್ಡ್ ಅರ್ನಾಲ್ಟ್ (Bernard Arnault): $202 ಬಿಲಿಯನ್ (LVMH - ಐಷಾರಾಮಿ ಬ್ರ್ಯಾಂಡ್)

  8. ಸ್ಟೀವ್ ಬಾಲ್ಮರ್ (Steve Ballmer): $167 ಬಿಲಿಯನ್ (ಮೈಕ್ರೋಸಾಫ್ಟ್)

  9. ಜೆನ್ಸನ್ ಹುವಾಂಗ್ (Jensen Huang): $152 ಬಿಲಿಯನ್ (ಎನ್ವಿಡಿಯಾ - Nvidia)

  10. ವಾರೆನ್ ಬಫೆಟ್ (Warren Buffett): $150 ಬಿಲಿಯನ್ (ಬರ್ಕ್ಷೈರ್ ಹ್ಯಾಥ್‌ವೇ)