ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವುದೇ ಹೊಸ ಆಲೋಚನೆಗೆ (IDEA) ಹೊಸ ಉತ್ಪನ್ನವಾಗಿ ಮಾರುಕಟ್ಟೆಗೆ ಬರಲು ಈ ಟೆಕ್ನಾಲಜಿಕಲ್ ರೆಡಿನೆಸ್ ಲೆವೆಲ್ (Technological Readiness Level - TRL) ಎಂಬ ವಿವಿಧ ಹಂತಗಳನ್ನು ದಾಟಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರಸ್ತುತ, TRL ಹಂತಗಳು ನಿಧಾನವಾಗಿವೆ ಎಂದು ವರದಿಯು ತಿಳಿಸಿದೆ.
ಇದರಲ್ಲಿ ಪ್ರಮುಖವಾಗಿ ಈ ಕೆಳಗಿನ ಹಂತಗಳನ್ನು ಹೊಂದಿರುತ್ತದೆ:
TRL 1-3: ಪ್ರಯೋಗಾಲಯದ ಹಂತ (ಸಂಶೋಧನೆ).
TRL 4-6: ಪ್ರಾಯೋಗಿಕ ಪರೀಕ್ಷೆ (Prototype).
TRL 7-9: ಮಾರುಕಟ್ಟೆಗೆ ಸಿದ್ಧತೆ ಮತ್ತು ವಾಣಿಜ್ಯೀಕರಣ.
ಇತ್ತೀಚಿನ ವರದಿ ಪ್ರಕಾರ, ತಜ್ಞರು ಹೇಳುವಂತೆ, ತಂತ್ರಜ್ಞಾನವು TRL 4 ರಿಂದ TRL 7 ಕ್ಕೆ ತಲುಪುವ ಹಂತವನ್ನು "ಮರಣದ ಕಣಿವೆ" (Valley of Death) ಎಂದು ಬಣ್ಣಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ -
ಕಾಂಪ್ಲೆಕ್ಸಿಟಿ ಅಥವಾ ಸಂಕೀರ್ಣತೆ ಎಂದರೆ ಒಂದು ಸಣ್ಣ ತಪ್ಪು ಇಡಿಯ ಯೋಜನೆಯನ್ನು ವಿಫಲಗೊಳಿಸುವುದು.
ಸ್ಕೇಲಿಂಗ್ ಅಪ್ ಎಂದರೆ, ವಸ್ತುವಿನ ಪ್ರಮಾಣ ಹಾಗೂ ಗುಣಲಕ್ಷಣಗಳ ಬದಲಾವಣೆಯ ಪ್ರಭಾವಳಿಗಳು ಪರಿಣಮಿಸುತ್ತದೆ.
ಸುರಕ್ಷತೆ ಹಾಗೂ ಗುಣಮಟ್ಟದ ವಿಷಯವಾಗಿ ವಿವಿಧ ಪರೀಕ್ಷೆಗಳನ್ನು ಏರ್ಪಡಿಸುವುದು ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗುವುದು.
ಡೀಪ್ ಟೆಕ್ ಮತ್ತು ಹೂಡಿಕೆಗೆ ಸವಾಲು:
ಎಐ ಕಾಲದಲ್ಲಿ, ಡೀಪ್ ಟೆಕ್ ಕ್ಷೇತ್ರಗಳಲ್ಲೂ ಭಾರೀ ಸಂಶೋಧನೆ ಮುಂದುವರೆಯುತ್ತಿದೆ. ಗ್ರೀನ್ ಎನರ್ಜಿ ಸೇರಿದಂತೆ, ಇನ್ನಿತರೆ ತಂತ್ರಜ್ಞಾನಗಳು ಲಾಭ ನೀಡಲು ಭಾರಿ ಪ್ರಮಾಣದ ಬಂಡವಾಳ ಮತ್ತು ಕಾಲಾವಧಿಯನ್ನು ನಿರೀಕ್ಷಿಸುತ್ತದೆ. ಇದರ ನಡುವೆ, ಹೂಡಿಕೆದಾರರು ಮಧ್ಯಂತರ ಹಂತಗಳಲ್ಲಿ (TRL 4 - 6) ನಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಲಾಗಿದೆ.
ತಂತ್ರಜ್ಞಾನ ಅಭಿವೃದ್ದಿಗೆ ವಿವಿಧ ಮೂಲಭೂತ ವಿಜ್ಞಾನದ ಕಾರಣಗಳು ಮತ್ತು ಸವಾಲುಗಳು ಪರಿಣಮಿಸಿವೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ TRL ಹಂತಗಳು ನಿಧಾನಗತಿಯಲ್ಲಿರುವುದು ಸುಸ್ಥಿರ ಹಾಗೂ ಸುರಕ್ಷಿತ ತಂತ್ರಜ್ಞಾನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಗೂಗಲ್, ಯೂಟ್ಯೂಬ್ ಪೇಜ್ ಲೋಡಿಂಗ್ ಸಮಸ್ಯೆ: ಸೋಷಿಯಲ್ ಮೀಡಿಯಾದಲ್ಲಿ ಹ್ಯಾಶ್‌ಟ್ಯಾಗ್ ಉತ್ಕಟ!?