Skip to main content
ವಿಡಿಯೋ
general

ಸಿನಿಪ್ರಿಯರಿಗೆ ಸಿಹಿ ಸುದ್ದಿ: ʻಮೂವೀಸ್‌ ಎನಿವೇರ್‌ʼಗೆ ಮರಳಿದ ಗೂಗಲ್‌ ಪ್ಲೇ ಮತ್ತು ಯೂಟ್ಯೂಬ್‌!?

By Shravanthi R
ಸಿನಿಪ್ರಿಯರಿಗೆ ಸಿಹಿ ಸುದ್ದಿ: ʻಮೂವೀಸ್‌ ಎನಿವೇರ್‌ʼಗೆ ಮರಳಿದ ಗೂಗಲ್‌ ಪ್ಲೇ ಮತ್ತು ಯೂಟ್ಯೂಬ್‌!?

ತಾಂತ್ರಿಕ ಅಡಚಣೆಯ ಕಾರಣ ಸ್ಥಗಿತಗೊಂಡಿದ್ದ ಬಳಿಕ ಗೂಗಲ್ ಪ್ಲೇ ಮತ್ತು ಯೂಟ್ಯೂಬ್ ಮತ್ತೆ ಡಿಸ್ನಿಯ ಮೂವೀಸ್ ಎನಿವೇರ್‌ಗೆ ಸಂಪರ್ಕಗೊಂಡಿದ್ದು, ಸಿನಿಮಾ ವೀಕ್ಷಣೆಗೆ ಹೆಚ್ಚಿನ ಸೌಲಭ್ಯ ಒದಗಿಸಿದೆ ಎಂದು ತಿಳಿಸಿದೆ.

ಡಿಸ್ನಿಯ ʻಮೂವೀಸ್‌ ಎನಿವೇರ್‌ʼಗೆ ಮತ್ತೆ ಕೂಡಿಕೊಂಡ ಗೂಗಲ್‌ ಪ್ಲೇ ಹಾಗೂ ಯೂಟ್ಯೂಬ್‌. ಇದೊಂದು ʻಡಿಜಿಟಲ್‌ ಲಾಕರ್‌ʼ ಸೇವೆಯಾಗಿದ್ದು, ಪ್ರಮುಖ ಸ್ಟುಡಿಯೋಗಳ ಮೂಲಕ ಸಿನಿಮಾಗಳನ್ನು ಸಿಂಕ್‌ ಮಾಡಲಿದೆ ಎನ್ನಲಾಗಿದೆ. 

ಕೆಲದಿನಗಳ ಹಿಂದೆ ತಾಂತ್ರಿಕ ಸುಧಾರಣೆ ಹಾಗೂ ಹೊಸ ಒಪ್ಪಂದಗಳ ಕಾರಣ, ಗೂಗಲ್‌ ಪ್ಲೇ ಹಾಗೂ ಯೂಟ್ಯೂಬ್‌ ಸೇವೆಗಳು ಮೂವೀಸ್‌ ಎನಿವೇರ್‌ ನಿಂದ ತಾತ್ಕಾಲಿಕವಾಗಿ ಸಂಪರ್ಕಕಡಿತಗೊಂಡಿದ್ದವು. ಇದೀಗ ಇವುಗಳ ಸಿಂಕ್ರೊನೈಸೇಶನ್‌ಗೆ ಮತ್ತೊಮ್ಮೆ ಅವಕಾಶ ಒದಗಿಸಲಾಗಿದೆ. ONESHISHU Baby Visual Stimulation Flash Cards – 4-Pack Combo (High-Contrast + Pattern Design + RGB + Colour Recognition) | Early Learning & Brain Development Toys for Newborns & Infants (0–12 Months)

ಇದೀಗ ಗೂಗಲ್‌ ಪ್ಲೇ ನಲ್ಲಿ ಖರೀದಿಸಿದ ಸಿನಿಮಾಗಳನ್ನು ವಿವಿಧ ಫ್ಲಾಟ್‌ಫಾರ್ಮ್‌ಗಳಲ್ಲಿ ನೋಡಬಹುದಾಗಿದೆ. ಒಂದು ಸಿನಿಮಾ ಖರೀದಿಸಿದರೆ, ತಾನಾಗಿಯೇ ಮೂವೀಸ್‌ ಎನಿವೇರ್‌ಗೆ ಲಿಂಕ್‌ ಆಗಿರುವ ಇತರೆ ಅಕೌಂಟ್‌ಗಳಲ್ಲೂ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ಈ ರೀತಿಯಾಗಿ ಸಿನಿಮಾ ವೀಕ್ಷಣೆಗೆ ಸೌಲಭ್ಯ ಹೆಚ್ಚುವರಿಯಾಗಿಸಿದೆ. ಇದನ್ನೂ ಓದಿ: ತಂತ್ರಜ್ಞಾನ ಅಭಿವೃದ್ಧಿಯಲ್ಲಿ TRL ಹಂತಗಳ ಮಹತ್ವವೇನು ಗೊತ್ತಾ!?