Skip to main content
ವಿಡಿಯೋ
1/3
cinema

ಒಟಿಟಿ ಪ್ರಿಯರಿಗೆ ಶುಭ ಸುದ್ದಿ! ಈ ವಾರ ಬರ್ತಿವೆ ಸೂಪರ್ ಹಿಟ್ ಸಿನಿಮಾಗಳು – ಇಲ್ಲಿದೆ ಸಂಪೂರ್ಣ ಲಿಸ್ಟ್

By Ram Chethan
ಒಟಿಟಿ ಪ್ರಿಯರಿಗೆ ಶುಭ ಸುದ್ದಿ! ಈ ವಾರ ಬರ್ತಿವೆ ಸೂಪರ್ ಹಿಟ್ ಸಿನಿಮಾಗಳು – ಇಲ್ಲಿದೆ ಸಂಪೂರ್ಣ ಲಿಸ್ಟ್

ಡಿಸೆಂಬರ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ದೊಡ್ಡ ಸಿನಿಮಾಗಳ ಹಬ್ಬ ನಡೆಯುತ್ತಿರುವ ನಡುವೆಯೇ, ಒಟಿಟಿಯಲ್ಲೂ ಕೆಲವು ಆಸಕ್ತಿಕರ ಚಿತ್ರಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗಿವೆ. ರಶ್ಮಿಕಾ ಮಂದಣ್ಣ, ಮಮ್ಮುಟಿ, ಮಾಧುರಿ ದೀಕ್ಷಿತ್ ನಟನೆಯ ಸಿನಿಮಾಗಳು ಹಾಗೂ ಕಪಿಲ್ ಶರ್ಮಾ ಹಾಸ್ಯ ಶೋ ಈ ವಾರ ವೀಕ್ಷಣೆಗೆ ಲಭ್ಯ.

ಡಿಸೆಂಬರ್ ತಿಂಗಳು ಎಂದರೆ ಚಿತ್ರಮಂದಿರಗಳಲ್ಲಿ ಭರ್ಜರಿ ಸಿನಿಮಾಗಳ ಹಬ್ಬ. ಈ ಬಾರಿ ಕೂಡ ದೊಡ್ಡ ಸಿನಿಮಾಗಳು ತೆರೆಗೆ ಬರಲಿರುವುದರಿಂದ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಇದೆ. ಚಿತ್ರಮಂದಿರಗಳಲ್ಲಿ ಹೊಸ ಸಿನಿಮಾಗಳ ಹಾವಳಿ ಹೆಚ್ಚಿರುವ ಕಾರಣ ಈ ವಾರ ಒಟಿಟಿ ವೇದಿಕೆಗಳಲ್ಲಿ ದೊಡ್ಡ ಬಜೆಟ್ ಅಥವಾ ಹೆಚ್ಚು ಚರ್ಚೆಯಲ್ಲಿರುವ ಸಿನಿಮಾಗಳು ಬಿಡುಗಡೆಯಾಗಿಲ್ಲ. ಆದರೆ ಮನರಂಜನೆ ನೀಡುವ ಕೆಲವು ಆಸಕ್ತಿಕರ ಸಿನಿಮಾಗಳು ಮತ್ತು ವೆಬ್ ಸರಣಿಗಳು ಒಟಿಟಿಗೆ ಬಂದಿವೆ.Arayna Women's Cotton Printed Floral Straight Kurta with Palazzo Pants and Dupatta

ರಶ್ಮಿಕಾ ಮಂದಣ್ಣ ಅಭಿನಯದ ಹಿಂದಿ ಹಾರರ್ ಸಿನಿಮಾ ‘ಥಮ’ ಈ ವಾರ ಒಟಿಟಿಗೆ ಬಿಡುಗಡೆಯಾಗಿದೆ. ಆಯುಷ್ಮಾನ್ ಖುರಾನಾ ಮತ್ತು ನವಾಜುದ್ದೀನ್ ಸಿದ್ದೀಖಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಡಿಸೆಂಬರ್ 16ರಂದು ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ವೀಕ್ಷಣೆಗೆ ಲಭ್ಯವಾಗಿದೆ. ಭಯ ಮತ್ತು ರಹಸ್ಯ ಅಂಶಗಳಿರುವ ಈ ಸಿನಿಮಾ ಹಾರರ್ ಪ್ರಿಯರಿಗೆ ಒಳ್ಳೆಯ ಆಯ್ಕೆಯಾಗಬಹುದು.

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮುಟಿ ಅಭಿನಯದ ‘ಡಾಮಿನಿಕ್ ಆಂಡ್ ಲೇಡೀಸ್ ಪರ್ಸ್’ ಕೂಡ ಈ ವಾರ ಒಟಿಟಿಗೆ ಬಂದಿದೆ. ಹೆಸರೇ ಸೂಚಿಸುವಂತೆ ಇದು ಒಂದು ಥ್ರಿಲ್ಲರ್ ಸಿನಿಮಾ. ಕುತೂಹಲ ಮೂಡಿಸುವ ಕಥೆಯೊಂದಿಗೆ ಸಾಗುವ ಈ ಚಿತ್ರವನ್ನು ಜೀ5 ವೇದಿಕೆಯಲ್ಲಿ ವೀಕ್ಷಿಸಬಹುದು.ದರ್ಶನನ್ನು ಒಂದು ಸಲ ಭೇಟಿ ಮಾಡಿಸಿ ಎಂದು ಬೇಡಿಕೊಂಡ ಪವಿತ್ರಾ ಗೌಡ.. ಇಲ್ಲಿದೆ ಸಂಪೂರ್ಣ ಮಾಹಿತಿ..!

ಇತ್ತೀಚಿನ ದಿನಗಳಲ್ಲಿ ಫೀಲ್ ಗುಡ್ ಪ್ರೇಮಕಥೆಗಳು ಕಡಿಮೆಯಾಗಿವೆ. ಆ ಕೊರತೆಯನ್ನು ತುಂಬುವಂತೆ ತಮಿಳಿನ ‘ಅರೊಮಲೈ’ ಸಿನಿಮಾ ಒಟಿಟಿಗೆ ಬಿಡುಗಡೆಯಾಗಿದೆ. ಸೌಮ್ಯ ಪ್ರೇಮಕಥೆಯನ್ನೊಳಗೊಂಡ ಈ ಸಿನಿಮಾ ಪ್ರೇಮ ಕಥೆಗಳನ್ನು ಇಷ್ಟಪಡುವವರಿಗೆ ಇಷ್ಟವಾಗುವ ಸಾಧ್ಯತೆ ಇದೆ. ಈ ಚಿತ್ರ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ.

ನಟಿ ಮಾಧುರಿ ದೀಕ್ಷಿತ್ ಅಭಿನಯದ ‘ಮಿಸಸ್ ದೇಶಪಾಂಡೆ’ ಎಂಬ ಥ್ರಿಲ್ಲರ್ ವೆಬ್ ಸರಣಿಯೂ ಇದೇ ವಾರ ಬಿಡುಗಡೆಯಾಗಿದೆ. ಈ ಸರಣಿಯಲ್ಲಿ ಮಾಧುರಿ ದೀಕ್ಷಿತ್ ಸೀರಿಯಲ್ ಕಿಲ್ಲರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಫ್ರೆಂಚ್ ವೆಬ್ ಸರಣಿಯ ರೀಮೇಕ್ ಆಗಿದ್ದು, ರಹಸ್ಯ ಮತ್ತು ಮನೋವೈಜ್ಞಾನಿಕ ಅಂಶಗಳನ್ನು ಒಳಗೊಂಡಿದೆ. ಈ ವೆಬ್ ಸರಣಿಯನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ಹಾಸ್ಯ ಪ್ರಿಯರಿಗೆ ಖುಷಿ ನೀಡುವ ಸುದ್ದಿಯೆಂದರೆ, ಕಪಿಲ್ ಶರ್ಮಾ ಅವರ ಜನಪ್ರಿಯ ಹಾಸ್ಯ ಶೋ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ನಾಲ್ಕನೇ ಸೀಸನ್ ಇಂದಿನಿಂದ ಆರಂಭವಾಗಿದೆ. ಡಿಸೆಂಬರ್ 20ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಈ ಶೋ ಕುಟುಂಬ ಸಮೇತರಾಗಿ ನೋಡುವಂತ ಮನರಂಜನೆಯನ್ನು ನೀಡಲಿದೆ.