Skip to main content
ವಿಡಿಯೋ
business

ಷೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್‌ ಶಾಕ್‌ - ಕೆಲವೇ ನಿಮಿಷಗಳಲ್ಲಿ ADR 40% ಏರಿಕೆ ಕಂಡಿದ್ದೇಕೆ!?

By Shravanthi R
ಷೇರು ಮಾರುಕಟ್ಟೆಯಲ್ಲಿ ಇನ್ಫೋಸಿಸ್‌ ಶಾಕ್‌ - ಕೆಲವೇ ನಿಮಿಷಗಳಲ್ಲಿ ADR 40% ಏರಿಕೆ ಕಂಡಿದ್ದೇಕೆ!?

ನ್ಯೂಯಾರ್ಕ್‌ ಸ್ಟಾಕ್‌ಎಕ್ಸ್‌ಚೇಂಜ್‌ (NYSE) ನಲ್ಲಿ ಭಾರತೀಯ ಇನ್ಪೋಟೆಕ್‌ ಕಂಪನಿ ಇನ್ಫೋಸಿಸ್‌ನ ಎಡಿಆರ್‌ ಬೆಲೆಗಳು ಕೆಲ ಸಮಯದಲ್ಲೇ ಜಿಗಿತ ಕಂಡಿದೆ. ಇದನ್ನು ಮಾರುಕಟ್ಟೆಯ ಪರಿಭಾಷೆಯಲ್ಲಿ ʻಫ್ಲಾಶ್‌ ಜಂಪ್‌ʼ ಎಂದು ಕರೆಯಲಾಗುತ್ತದೆ.

ಭಾರತೀಯ ಐಟಿ ದೈತ್ಯ ಇನ್ಪೋಸಿಸ್‌ ಕಂಪನಿಯ ಅಮೆರಿಕನ್‌ ಡಿಪಾಸಿಟರಿ ರಿಸಿಟ್ಸ್‌ಗಳು - (ADR) ಅನಿರೀಕ್ಷಿತವಾಗಿ ಏರಿಕೆ ಕಂಡಿದೆ ಎಂದು ವರದಿಯಿಂದ ತಿಳಿದುಬಂದಿದೆ. NYSE ಷೇರು ಮಾರುಕಟ್ಟೆಯಲ್ಲಿ, ಕೆಲವೇ ಸಮಯದಲ್ಲೇ ಶೇ.40 ರಷ್ಟು ಜಿಗಿತ ಕಂಡಿದ್ದು, ಹೂಡಿಕೆದಾರರನ್ನು ಬೆರಗುಗೊಳಿಸಿದೆ ಎನ್ನಲಾಗಿದೆ. 

ವರದಿಯ ಪ್ರಕಾರ, ಇದಕ್ಕೆ ಕಾರಣವು ವ್ಯವಹಾರಿಕ ಫಲಿತಾಂಶವಲ್ಲ ಬದಲಾಗಿ ತಾಂತ್ರಿಕ ಅಂಶಗಳು ಕಾರಣ ಎಂದು ವಿಶ್ಲೇಷಣೆಯಲ್ಲಿ ತಿಳಿಸಲಾಗಿದೆ. ಇದರೊಟ್ಟಿಗೆ, ಟ್ರೇಡಿಂಗ್‌ ವ್ಯವಸ್ಥೆಯಲ್ಲಿ ʻಫ್ಯಾಟ್‌ ಫಿಂಗರ್‌ ಟ್ರೇಡ್‌ʼ ಎಂದರೆ, ತಪ್ಪಾಗಿ ದೊಡ್ಡ ಮಟ್ಟದ ಆರ್ಡರ್‌ ನೀಡುವುದು ಎಂದಾಗಿದೆ. INFANTSO Baby Rocker & Bouncer for 0 to 2 Years (Pink), Chair for Newborn with Calming Vibrations, Music & Toys, 3 Position Adjustable Backrest with Feeding Tray

ಇದಲ್ಲದೇ, ಇದಕ್ಕೆ ಅಲ್ಗಾರಿದಂ ಟ್ರೇಡಿಂಗ್‌ ಎಂದರೆ, ಕಂಪ್ಯೂಟರ್‌ ಆಧಾರಿತ ಅಲ್ಗಾರಿದಂಗಳು, ಬದಲಾವಣೆ ಮತ್ತು ಶಾರ್ಟ್‌ ಸ್ವ್ಕೀಜ್‌ - ಬೆಲೆ ಏರತೊಡಗಿದಾಗ ನಷ್ಟದಿಂದ ತಪ್ಪಿಸಿಕೊಳ್ಳಲು ಷೇರು ಖರೀದಿ ಹೀಗೆ ಅಸಹಜ ಮಾರುಕಟ್ಟೆಯ ನಿಯಂತ್ರಕ ಲಕ್ಷಣಗಳಿಂದಾಗಿ ಹೂಡಿಕೆದಾರರಲ್ಲಿ ಗೊಂದಲವುಂಟಾಗಿಸಿತು ಎನ್ನಲಾಗಿದೆ. ಇದನ್ನೂ ಓದಿ: ಸಿನಿಪ್ರಿಯರಿಗೆ ಸಿಹಿ ಸುದ್ದಿ: ʻಮೂವೀಸ್‌ ಎನಿವೇರ್‌ʼಗೆ ಮರಳಿದ ಗೂಗಲ್‌ ಪ್ಲೇ ಮತ್ತು ಯೂಟ್ಯೂಬ್‌!?