ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ. ಸಿನಿಮಾದ ಪ್ರಚಾರ ಭರದಿಂದ ನಡೆಯುತ್ತಿದೆ.
ಡಿಸೆಂಬರ್ 20ರಂದು ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದೀಪ್ ಮಾತನಾಡಿದರು. ತಮ್ಮ ಸಿನಿಮಾದ ವಿರುದ್ಧ ಕೆಟ್ಟ ಪ್ರಚಾರ ಮಾಡುತ್ತಿರುವ ಕೆಲವರಿಗೆ ಅವರು ಪರೋಕ್ಷವಾಗಿ ಎಚ್ಚರಿಕೆ ನೀಡಿದರು. "ಯುದ್ಧಕ್ಕೆ ನಾವು ಸಿದ್ಧ" ಎಂದು ಹೇಳಿ ಅಭಿಮಾನಿಗಳನ್ನು ಉತ್ಸಾಹಗೊಳಿಸಿದರು.Arayna Women's Cotton Printed Floral Straight Kurta with Palazzo Pants and Dupatta
ಇದಕ್ಕೆ ಪ್ರತಿಕ್ರಿಯೆಯಾಗಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದಾವಣಗೆರೆಯಲ್ಲಿ ಮಾತನಾಡಿದರು. ಅವರು ಯಾರ ಹೆಸರನ್ನೂ ಹೇಳದೇ ಸುದೀಪ್‌ಗೆ ಟಾಂಗ್ ಕೊಟ್ಟರು. "ದರ್ಶನ್ ಜೈಲಿನಲ್ಲಿರುವಾಗ ಕೆಲವರು ಅವರ ಬಗ್ಗೆಯೂ, ಅಭಿಮಾನಿಗಳ ಬಗ್ಗೆಯೂ ಹೊರಗೆ ಮತ್ತು ಮಾಧ್ಯಮಗಳಲ್ಲಿ ಮಾತನಾಡುತ್ತಾರೆ. ಆದರೆ ದರ್ಶನ್ ಇದ್ದಾಗ ಅವರು ಗೊತ್ತೇ ಆಗದಂತೆ ಇರುತ್ತಾರೆ. ಬೆಂಗಳೂರಿನಲ್ಲಿದ್ದಾರಾ ಎಂದೇ ಗೊತ್ತಾಗುವುದಿಲ್ಲ" ಎಂದು ಹೇಳಿದರು.ದರ್ಶನನ್ನು ಒಂದು ಸಲ ಭೇಟಿ ಮಾಡಿಸಿ ಎಂದು ಬೇಡಿಕೊಂಡ ಪವಿತ್ರಾ ಗೌಡ.. ಇಲ್ಲಿದೆ ಸಂಪೂರ್ಣ ಮಾಹಿತಿ..!
ಇದಲ್ಲದೇ, "ದರ್ಶನ್ ಯಾರನ್ನೂ ಟೀಕಿಸುವುದಿಲ್ಲ, ಬೇಜಾರು ಮಾಡಿಕೊಳ್ಳುವುದಿಲ್ಲ. ನೀವೂ ಅಭಿಮಾನಿಗಳು ತಲೆ ಕೆಡಿಸಿಕೊಳ್ಳಬೇಡಿ" ಎಂದು ಫ್ಯಾನ್ಸ್‌ಗೆ ಸಲಹೆ ನೀಡಿದರು.
ಈ ಮಾತುಗಳು ಸೋಷಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿವೆ. ಅಭಿಮಾನಿಗಳ ನಡುವೆ ಮಾತಿನ ಯುದ್ಧ ಶುರುವಾಗಿದೆ. ಆದರೆ ಎಲ್ಲರೂ ಶಾಂತಿಯಿಂದ ಇರಬೇಕು ಎಂದು ಹಲವರು ಹೇಳುತ್ತಿದ್ದಾರೆ.