Skip to main content
ವಿಡಿಯೋ
general

AI, ChatGPT ಬಳಕೆ: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ವಾರ್ನಿಂಗ್‌!

By Shravanthi R
AI, ChatGPT ಬಳಕೆ: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ವಾರ್ನಿಂಗ್‌!

ಕೇಂದ್ರ ಸರ್ಕಾರವು ಮಾಹಿತಿ ಮತ್ತು ತಂತ್ರಜ್ಞಾನದಿಂದ ದೇಶದ ರಹಸ್ಯ ಮಾಹಿತಿಗಳು ಸೋರಿಕೆಯಾಗುವ ಹಿನ್ನಲೆಯಲ್ಲಿ ಸರ್ಕಾರಿ ಉದ್ಯೋಗಿಗಳು AI ಹಾಗೂ ChatGPT ಬಳಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದೆ.

ದೇಶದಲ್ಲಿ ಸೈಬರ್‌ ಭದ್ರತೆ ಮತ್ತು ಮಾಹಿತಿ ದತ್ತಾಂಶ ಸೋರಿಕೆಯನ್ನು ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರದ ನೌಕರರಿಗೆ ಕೃತಕಬುದ್ದಿಮತ್ತೆ ಹಾಗೂ ಚಾಟ್‌ಜಿಪಿಟಿಯಂತಹ ತಂತ್ರಜ್ಞಾನವನ್ನು ಬಳಸಬೇಡಿ ಎಂದು ಕಟ್ಟುನಿಟ್ಟಿನ ನಿರ್ದೇಶನ ಸೂಚಿಸಿದೆ ಎಂದು ತಿಳಿಸಲಾಗಿದೆ. 

ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಜಿತಿನ್‌ ಪ್ರಸಾದ್‌ ಅವರು, ಈ ಕುರಿತು ವಿವರಿಸಿದರು. ಯಾವುದೇ ಕಾರಣಕ್ಕೂ ಸರ್ಕಾರಿ ನೌಕರರು ಇಂತಹ ತಾಂತ್ರಿಕ ವೇದಿಕೆಗಳಲ್ಲಿ ಸರ್ಕಾರದ ಅಧಿಕೃತ ಮಾಹಿತಿ ಮತ್ತು ದತ್ತಾಂಶಗಳನ್ನು ಹಂಚಿಕೊಳ್ಳಬಾರದು. ಈ ಕುರಿತು ಆದೇಶ ಹೊರಡಿಸಲಾಗಿದೆ ಹಾಗೂ ಸರ್ಕಾರವು ಪಟ್ಟಬದ್ದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಭೆಯಲ್ಲಿ ಅವರು ತಿಳಿಸಿದ್ದಾರೆ. Stokke Clikk Highchair, Clover Green - Suitable for Kids from 6 Months to 3 Years, Ergonomic, Light & Travel Friendly, for Feeding & Sitting

 

ಸರ್ಕಾರಕ್ಕೆ ಸಂಬಂಧಪಟ್ಟ ಅಧಿಕೃತ ಮಾಹಿತಿಯನ್ನು ಹಾಗೂ ದತ್ತಾಂಶಗಳನ್ನು ಸುಧಾರಿಸುವ ಉದ್ದೇಶದಿಂದ ಅಧಿಕಾರಿಗಳು ಇವುಗಳನ್ನು ಬಳಸಿಕೊಳ್ಳುತ್ತಿದ್ದು, ಇದರಿಂದಾಗಿ ದೇಶದ ಆತಂರಿಕ ಮಾಹಿತಿ ಸೋರಿಕೆಯುಂಟಾಗಬಹುದು ಎಂಬ ಆತಂಕ ವ್ಯಕ್ತಪಡಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ತಂತ್ರಜ್ಞಾನ ಅಭಿವೃದ್ಧಿಯಲ್ಲಿ TRL ಹಂತಗಳ ಮಹತ್ವವೇನು ಗೊತ್ತಾ!?