Skip to main content
ವಿಡಿಯೋ
general

ಡಿಜಿಟಲ್‌ ವಂಚನೆ - ಶಿಕ್ಷಿತರಿಂದಲೇ ಶಿಕ್ಷಿತರಿಗೆ ಆರ್ಥಿಕ ವಂಚನೆ - ಕರ್ನಾಟಕವೇ ಮೊದಲು!

By Shravanthi R
ಡಿಜಿಟಲ್‌ ವಂಚನೆ - ಶಿಕ್ಷಿತರಿಂದಲೇ ಶಿಕ್ಷಿತರಿಗೆ ಆರ್ಥಿಕ ವಂಚನೆ - ಕರ್ನಾಟಕವೇ ಮೊದಲು!

ದೇಶದೆಲ್ಲೆಡೆ ಮನೆಮಾಡಿರುವ ಸುದ್ದಿ ಡಿಜಿಟಲ್‌ ವಂಚನೆ - ಸೈಬರ್‌ ಕಳ್ಳತನದ ಪ್ರಕರಣಗಳು. ಡಿಜಿಟಲ್‌ ವಂಚಕರು ನಗರ, ಪಟ್ಟಣ ಹಾಗೂ ಗ್ರಾಮಗಳೆನ್ನದೇ ಹಣವನ್ನು ದೋಚುತ್ತಿದ್ದಾರೆ. ಈ ಅಕ್ರಮಗಳನ್ನು ನಡೆಸುವ ಜಾಲಗಳು ಅಂತರಾಷ್ಟ್ರೀಯ ಮಟ್ಟದಿಂದ ಸಕ್ರಿಯವಾಗಿದೆ ಎಂದು ವರದಿಯು ವಿಷ್ಲೇಶಿಸಿದೆ.

ರಾಷ್ಟ್ರೀಯ ಅಪರಾಧ ದತ್ತಾಂಶ ಬ್ಯೂರೋ ವರದಿಯು ಉಲ್ಲೇಖಿಸಿರುವ ಪ್ರಕಾರ, ದೇಶದಲ್ಲಿ 2021 ರಿಂದ 2023 ರವರೆಗೆ ದೇಶದಲ್ಲಿ ಶೇ.60 ರಷ್ಟು ಡಿಜಿಟಲ್‌ ವಂಚನೆ ಪ್ರಕರಣಗಳು ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ. ಈ ಪೈಕಿ ಆರ್ಥಿಕ ವಂಚನೆಯ ಪ್ರಮಾಣವು ಶೇ.39 ರಷ್ಟು ಅಧಿಕವಾಗಿದೆ ಎಂಬ ಎಚ್ಚರಿಕೆಯನ್ನು ಸೂಚಿಸಿದೆ ಎನ್ನಲಾಗಿದೆ. 

ಇವುಗಳ ನಡುವೆ ಕರ್ನಾಟಕ ರಾಜ್ಯವು ಡಿಜಿಟಲ್‌ ವಂಚನೆ ಪ್ರಕರಣಗಳ ದಾಖಲಾತಿಯಲ್ಲಿ ಮುಂಚೂಣಿಯಲ್ಲಿದ್ದು, ಆನಂತರದ ಸ್ಥಾನಗಳಲ್ಲಿ ತೆಲಂಗಾಣ, ಉತ್ತರ ಪ್ರದೇಶ ರಾಜ್ಯಗಳು ಇವೆ. ಈ ರೀತಿಯ ಪ್ರಕರಣಗಳು ಅಂತರಾಷ್ಟ್ರೀಯ ಜಾಲಗಳ ಸಂಪರ್ಕದಿಂದ ನಡೆಯುತ್ತಿದೆ ಎಂಬ ಮಾಹಿತಿಯನ್ನು ತಿಳಿಸಲಾಗಿದೆ. BabyGo Waterproof Baby Bibs | Spill-Resistant Apron Feeding Bibs for 6–12 Months, Soft & Absorbent Fast-Dry Cotton, Durable, Lightweight, Washable & Reusable Meal Time Bibs | Set of 6 (Multicolor)

ಬ್ಯಾಂಕ್‌ಗಳು ಹಾಗೂ ಮೊಬೈಲ್‌ ಸಿಮ್‌ ಕಾರ್ಡ್‌ಗಳು ಮೂಲಕ ಅಕ್ರಮ ವ್ಯವಹಾರ ಬಳಕೆಗೆ ಉಪಯೋಗಿಸಲಾಗಿದ್ದು, ಈ ರೀತಿಯ ವಂಚನೆಗೆ ಒಳಗಾದ ಕುಖ್ಯಾತಿಗೆ ಪ್ರಮುಖ ಜಿಲ್ಲೆಗಳನ್ನು ಹೆಸರಿಸಲಾಗಿದೆ. ಕರ್ನಾಟಕದಲ್ಲಿ ಬರೋಬ್ಬರಿ 22 ಸಾವಿರ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ. ಇದನ್ನೂ ಓದಿ: AI, ChatGPT ಬಳಕೆ: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ವಾರ್ನಿಂಗ್‌!