Skip to main content
ವಿಡಿಯೋ
general

ರಾಹುಲ್ ಗಾಂಧಿ ಪೌರತ್ವ ವಿವಾದ: ರಾಯ್‌ಬರೇಲಿಯಿಂದ ಲಖನೌಗೆ ಪ್ರಕರಣ ವರ್ಗಾಯಿಸಿದ ಹೈಕೋರ್ಟ್!

By Shravanthi R
ರಾಹುಲ್ ಗಾಂಧಿ ಪೌರತ್ವ ವಿವಾದ: ರಾಯ್‌ಬರೇಲಿಯಿಂದ ಲಖನೌಗೆ ಪ್ರಕರಣ ವರ್ಗಾಯಿಸಿದ ಹೈಕೋರ್ಟ್!

ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಎದುರಿಸುತ್ತಿರುವ ಪೌರತ್ವ ವಿರೋಧದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಿದೆ ಎಂದು ವರದಿಯಾಗಿದೆ.

ಬ್ರಿಟಿಷ್ ಪೌರತ್ವ ಹೊಂದಿರುವ ಆರೋಪ ಎದುರಿಸುತ್ತಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ಅಲಾಹಾಬಾದ್ ಹೈಕೋರ್ಟ್ ರಾಯ್‌ಬರೇಲಿಯಿಂದ ಲಖನೌಗೆ ವರ್ಗಾಯಿಸಿದೆ.

ಪ್ರಕರಣ ವರ್ಗಾವಣೆಗೆ ಕಾರಣವೇನು?

ಬೆಂಬಲಿಗರ ಅಡ್ಡಿ: ದೂರುದಾರರಾದ ಎಸ್. ವಿಘ್ನೇಶ್ ಶಿಶಿರ್ ಅವರು ರಾಯ್‌ಬರೇಲಿ ನ್ಯಾಯಾಲಯದಲ್ಲಿ ವಾದ ಮಂಡಿಸಲು ರಾಹುಲ್ ಗಾಂಧಿ ಬೆಂಬಲಿಗರು ಮತ್ತು ಸ್ಥಳೀಯ ವಕೀಲರು ಅಡ್ಡಿಪಡಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ನ್ಯಾಯಸಮ್ಮತ ವಿಚಾರಣೆ: ರಾಹುಲ್ ಗಾಂಧಿ ಅವರು ರಾಯ್‌ಬರೇಲಿ ಕ್ಷೇತ್ರದ ಸಂಸದರಾಗಿರುವುದರಿಂದ, ಅಲ್ಲಿನ ಪರಿಸ್ಥಿತಿ ವಿಚಾರಣೆಗೆ ಪೂರಕವಾಗಿಲ್ಲ ಎಂಬ ಅಂಶವನ್ನು ನ್ಯಾಯಮೂರ್ತಿ ಬ್ರಿಜ್ ರಾಜ್ ಸಿಂಗ್ ಅವರು ಮಾನ್ಯ ಮಾಡಿದ್ದಾರೆ.

ನ್ಯಾಯಸಮ್ಮತತೆಯ ದೃಷ್ಟಿಯಿಂದ ಪ್ರಕರಣವನ್ನು ಲಖನೌ ನ್ಯಾಯಾಲಯಕ್ಕೆ ವರ್ಗಾಯಿಸುವುದು ಸೂಕ್ತ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. Mee Mee Disposable Nursing Breast Pads 48 Pcs | Ultra Thin Honeycomb Nursing Breast Pads with Leak Guard | Super Absorbent, Soft Cotton Maternity Pads | Compact & Discreet

ಆರೋಪದ ಹಿನ್ನೆಲೆ

ದೂರುದಾರರು: ಎಸ್. ವಿಘ್ನೇಶ್ ಶಿಶಿರ್ ಎಂಬುವವರು ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದಾರೆ.

ಪ್ರಮುಖ ಆರೋಪ: ಇಂಗ್ಲೆಂಡ್‌ನ 'ಬ್ಯಾಕಪ್ಸ್‌ ಲಿಮಿಟೆಡ್' (Backops Limited) ಎಂಬ ಕಂಪನಿಯ ದಾಖಲೆಗಳಲ್ಲಿ ರಾಹುಲ್ ಗಾಂಧಿ ಅವರು ತಮ್ಮ ರಾಷ್ಟ್ರೀಯತೆಯನ್ನು 'ಬ್ರಿಟಿಷ್' ಎಂದು ಘೋಷಿಸಿಕೊಂಡಿದ್ದಾರೆ. ಇದು ಭಾರತೀಯ ಕಾನೂನಿನ ಉಲ್ಲಂಘನೆ ಎಂಬುದು ದೂರುದಾರರ ವಾದ.

ಕಾಯಿದೆಗಳು: ಅಧಿಕೃತ ರಹಸ್ಯಗಳ ಕಾಯಿದೆ, ಪಾಸ್‌ಪೋರ್ಟ್ ಕಾಯಿದೆ ಮತ್ತು ವಿದೇಶಿಗರ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರಲಾಗಿದೆ.

ನ್ಯಾಯಾಲಯದ ಪ್ರಮುಖ ಅಂಶಗಳು

ಸಿಜೆಎಂ ನ್ಯಾಯಾಲಯಕ್ಕೆ ಸೂಚನೆ: ರಾಯ್‌ಬರೇಲಿಯ ಅಡಿಷನಲ್ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಜನಪ್ರತಿನಿಧಿಗಳ ನ್ಯಾಯಾಲಯ) ಮುಂದಿದ್ದ ಪ್ರಕರಣವನ್ನು ಈಗ ಲಖನೌನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

ನೋಟಿಸ್ ನೀಡದ ವಿಚಾರ: ಈ ಹಂತದಲ್ಲಿ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ದೂರು ಇನ್ನೂ ಎಫ್‌ಐಆರ್ ಹಂತಕ್ಕೆ ತಲುಪಿಲ್ಲದ ಕಾರಣ, ರಾಹುಲ್ ಅವರು ಈ ಹಂತದಲ್ಲಿ ಕಾನೂನಾತ್ಮಕವಾಗಿ 'ಬಾಧಿತ ವ್ಯಕ್ತಿ'ಯಾಗುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಇದನ್ನೂ ಓದಿ: ಡಿಜಿಟಲ್‌ ವಂಚನೆ - ಶಿಕ್ಷಿತರಿಂದಲೇ ಶಿಕ್ಷಿತರಿಗೆ ಆರ್ಥಿಕ ವಂಚನೆ - ಕರ್ನಾಟಕವೇ ಮೊದಲು!