Skip to main content
ವಿಡಿಯೋ
general

ಅನಧಿಕೃತ ಆರೋಗ್ಯ ಮಾಹಿತಿ ಬಿತ್ತರಿಸುವ ಡಿಜಿಟಲ್‌ ವ್ಯಾಧಿಗಳಿಗೆ ಕಡಿವಾಣ ಹಾಕಿ - ವರದಿ

By Shravanthi R
ಅನಧಿಕೃತ ಆರೋಗ್ಯ ಮಾಹಿತಿ ಬಿತ್ತರಿಸುವ ಡಿಜಿಟಲ್‌ ವ್ಯಾಧಿಗಳಿಗೆ ಕಡಿವಾಣ ಹಾಕಿ -  ವರದಿ

ಬದಲಾಗುತ್ತಿರುವ ವೇಗದ ಜೀವನಶೈಲಿಯಲ್ಲಿ, ಡಿಜಿಟಲ್‌ ಚಿಕಿತ್ಸಾ ಸಲಹೆಗಳನ್ನು ಅನುಸರಿಸುವ ಅಥವಾ ನಂಬುವ ಪ್ರವೃತ್ತಿಯಿಂದ ಆರೋಗ್ಯಕ್ಕೆ ಪರಿಣಾಮ ಬೀರುವುದರ ಪ್ರಾಮುಖ್ಯತೆಯನ್ನು ವರದಿಯಲ್ಲಿ ವಿವರಿಸಲಾಗಿದೆ.

ಹಿಂದೆಲ್ಲಾ ಬಾಯಿಂದ ಬಾಯಿಗೆ ಸುಳ್ಳು ಸುದ್ದಿಗಳು ವಿಸ್ತರಿಸುತ್ತಿದ್ದವು. ಇದೀಗ ಡಿಜಿಟಲ್‌ ಯುಗ. ಇವತ್ತಿನ ದಿನಗಳಲ್ಲಿ ತಾಂತ್ರಿಕ ವೈದ್ಯರೆನಿಸಿಕೊಂಡ ಡಿಜಿಟಲ್‌ ಅಪ್ಲಿಕೇಶನ್‌ಗಳು ಖಾತರಿಯಲ್ಲದ ಮಾಹಿತಿಯನ್ನು ಬಿತ್ತರಿಸುವ ಡಿಜಿಟಲ್‌ ವ್ಯಾಧಿಗಳನ್ನು ಉಂಟು ಮಾಡುತ್ತಿದೆ ಎಂಬ ಬಗ್ಗೆ ವರದಿಯು ತಿಳಿಸಿದೆ. 

ಅವೈಜ್ಞಾನಿಕ ಆರೋಗ್ಯ ಸಲಹೆಗಳನ್ನು ಒದಗಿಸುವ ಮೂಲಕ ಆನ್‌ಲೈನ್‌ ಪೋರ್ಟಲ್‌ ಹಾಗೂ ಸಾಮಾಜಿಕ ಜಾಲತಾಣಗಳು ಡಿಜಿಟಲ್‌ ಚಿಕಿತ್ಸಾ ಸಲಕರಣೆಗಳಾಗಿದೆ ಎನ್ನಲಾಗಿದೆ. ತಜ್ಞರು ತಿಳಿಸುವಂತೆ ಇಂತಹ ಅನಧಿಕೃತ ಮಾಹಿತಿ ಮತ್ತು ಸಲಹೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದಿದ್ದಾರೆ. Pampers Active Baby Tape Style Baby Diapers, Newborn/Extra Small (NB/XS) Size, 72 Count, Adjustable Fit with 5 star skin protection, Up to 5kg Diapers

ಅಂತರ್ಜಾಲ ಮತ್ತು ಇತರೆ ಮಾಧ್ಯಮಗಳಿಂದ ಸಿಗುವ ಪುಕ್ಕಟ್ಟೆ ಆರೋಗ್ಯ ಸಲಹೆಗಳಿಗಿಂತಲೂ ವೈದ್ಯರನ್ನು ನೇರ ಸಂದರ್ಶಿಸುವುದು ಸೂಕ್ತವೆಂದು ತಿಳಿಸಲಾಗಿದೆ. ಆದಷ್ಟು ಸುಳ್ಳು ಮಾಹಿತಿಗಳಿಂದ ದೂರವಿದ್ದು, ರೋಗ ಅಥವಾ ಆರೋಗ್ಯ ಸಂಬಂಧಿತ ಚಿಕಿತ್ಸೆಯ ಬಗ್ಗೆ ಪರಿಶೀಲಿಸಿಯೇ ಮುಂದುವರೆಯಬೇಕೆಂದು ತಿಳಿಸಲಾಗಿದೆ. ಇದನ್ನೂ ಓದಿ: AI, ChatGPT ಬಳಕೆ: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ವಾರ್ನಿಂಗ್‌!