Skip to main content
ವಿಡಿಯೋ
technology

ಡಿಜಿಟಲ್‌ ಫುಟ್‌ಪ್ರಿಂಟ್ಸ್‌: ಇಂಟರ್‌ನೆಟ್‌ನಲ್ಲಿ ಮಾಡಿದ ಪೋಸ್ಟ್‌ಗಳು ಏನಾಗಲಿವೆ!?

By Shravanthi R
ಡಿಜಿಟಲ್‌ ಫುಟ್‌ಪ್ರಿಂಟ್ಸ್‌: ಇಂಟರ್‌ನೆಟ್‌ನಲ್ಲಿ ಮಾಡಿದ ಪೋಸ್ಟ್‌ಗಳು ಏನಾಗಲಿವೆ!?

ಸೋಷಿಯಲ್‌ ಮೀಡಿಯಾ ಮತ್ತು ಆನ್‌ಲೈನ್‌ ಟೂಲ್ಸ್‌ಗಳನ್ನು ಬಳಕೆ ಮಾಡುವ ನಾವು ಅವುಗಳಲ್ಲಿ ಮರೆಯಾಗದ ಡಿಜಿಟಲ್‌ ಫುಟ್‌ಪ್ರಿಂಟ್ಸ್‌ಗಳನ್ನು ಬಿಟ್ಟಿರುತ್ತೇವೆ. ಈ ಬಗ್ಗೆ ಸಣ್ಣ ವರದಿ ಇದಾಗಿದೆ.

ಸಾಮಾನ್ಯವಾಗಿ ಬೀಚ್‌ನಲ್ಲಿ ಅಥವಾ ತೇವಾಂಶವಿರುವ ಪ್ರದೇಶಗಳಲ್ಲಿ ನಮ್ಮ ಹೆಜ್ಜೆಗುರುತುಗಳು ಇದ್ದರೆ ಏನಾಗುತ್ತೆ? ಅದು ಬಹುಶಃ ಅಳಿಸಿ ಹೋಗಬಹುದು. ಆದರೆ, ಡಿಜಿಟಲ್‌ ಫುಟ್‌ಪ್ರಿಂಟ್ಸ್‌ ಅಂದರೆ ಅಂತರ್ಜಾಲದಲ್ಲಿ ದಾಖಲಾದ ಹೆಜ್ಜೆಗುರುತುಗಳು, ನಾವು ಹಂಚಿಕೊಂಡ ಪೋಸ್ಟ್‌ಗಳು ಏನಾಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಕಂಪ್ಯೂಟರ್‌ ಅಥವಾ ಯಾವುದೇ ಡಿಜಿಟಲ್‌ ಸಾಧನಗಳನ್ನು ಬಳಕೆ ಮಾಡಿದಾಗ, ಅದರಲ್ಲಿ ಸ್ಟೋರ್‌ ಆಗುವ ಕುರುಹು ಅಥವಾ ಇತಿಹಾಸವನ್ನು ʻಡಿಜಿಟಲ್‌ ಫುಟ್‌ಪ್ರಿಂಟ್ಸ್‌ʼ ಎಂದು ಕರೆಯುತ್ತೇವೆ. ವರದಿಯು ವಿಶ್ಲೇಷಿಸುವ ಪ್ರಕಾರ, ಪ್ರತೀ ಸಾರಿಗೆ ಈ ರೀತಿ ಬಳಸಿದ, ವೆಬ್‌ಸೈಟ್ಸ್‌, ಡೌನ್‌ಲೋಡ್ಸ್‌, ಬ್ರೌಸರ್‌ಗಳ ಸ್ಟೋರ್ಡ್‌ ಫೈಲ್ಸ್‌ಗಳನ್ನೇ ಡಿಜಿಟಲ್‌ ಹೆಜ್ಜೆಗುರುತು ಎನ್ನಲಾಗಿದೆ. ಇದಕ್ಕೆ ಸೂಕ್ತವಾದ ಉದಾಹರಣೆಯೆಂದರೆ ʻಕುಕೀಸ್‌ʼ ಎನ್ನಬಹುದು. Mee Mee Baby Liquid Detergent 1 L | Ph balanced, Free from Harsh Chemicals, Safe for mother's hands & baby's skin | Anti-Bacterial, Removes Stains & Odor with One Drop, Hypoallergenic

ಹೀಗೆ ಡಿಜಿಟಲ್‌ ಹೆಜ್ಜೆಗುರುತುಗಳಾಗಿರುವ ಇವುಗಳ ಮಾಹಿತಿಯನ್ನು ಅಳಿಸಬಹುದೇ ಎಂದರೆ ತುಸು ಕಷ್ಟ ಎಂದೆನ್ನಲಾಗುತ್ತದೆ. ಆದ್ದರಿಂದ ಆನ್‌ಲೈನ್‌ ಮಾಹಿತಿ ಕುರಿತು ಎಂದಿಗೂ ಎಚ್ಚೆತ್ತಿರಬೇಕು ಹಾಗೂ ಪ್ರಜ್ಞಾಶೀಲಾರಾಗಬೇಕಿರುತ್ತದೆ. ಡಾಟಾವನ್ನು ಸಂಪೂರ್ಣವಾಗಿ ಅಳಿಸಲಾಗದು ಹಾಗೂ ಈ ಬಗ್ಗೆ ಮೂರನೇ ವ್ಯಕ್ತಿಯ (Third Party) ಯಿಂದ ದೂರವಿರುವುದು ಒಳಿತು ಎನ್ನಲಾಗಿದೆ. ಡೇಟಾವು ಆರ್ಕೈವ್‌ ಅಥವಾ ಖಾಸಗಿ ಬ್ಯಾಕಪ್‌ ವ್ಯವಸ್ಥೆಗಳಲ್ಲಿ ಶಾಶ್ವತವಾಗಿ ಉಳಿಯಬಹುದೆನ್ನಲಾಗಿದೆ. ಇದನ್ನೂ ಓದಿ: ಅನಧಿಕೃತ ಆರೋಗ್ಯ ಮಾಹಿತಿ ಬಿತ್ತರಿಸುವ ಡಿಜಿಟಲ್‌ ವ್ಯಾಧಿಗಳಿಗೆ ಕಡಿವಾಣ ಹಾಕಿ - ವರದಿ