PPF ಎಂದರೇನು?
ಸಾರ್ವಜನಿಕ ಭವಿಷ್ಯ ನಿಧಿ - PPF ಎನ್ನುವುದು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಬರೋಬ್ಬರಿ 15 ವರ್ಷಗಳು ಇದರ ಹೂಡಿಕೆಯ ಅವಧಿಯಾಗಿದೆ. ಕನಿಷ್ಠ ರೂ. 500 ರಿಂದ ರೂ. 1 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದಾದ ಸುರಕ್ಷಿತ ಹಾಗೂ ಉತ್ತಮ ಯೋಜನೆ ಇದಾಗಿದೆ.
ಯಾವುದೇ ವಯಸ್ಸಿನ ಮಿತಿಯಿಲ್ಲದ, ತೆರಿಗೆ ಉಳಿತಾಯ ಮತ್ತು ಜನಸ್ನೇಹಿಯಾದ ಸರ್ಕಾರದಿಂದ ಪ್ರಾಯೋಜಿತವಾದ ಹೂಡಿಕೆ ಯೋಜನೆ ಇದಾಗಿದೆ. ಪಿಪಿಎಫ್ ಬಡ್ಡಿದರ ಪ್ರಸ್ತುತ ಶೇ.7.1 ರಷ್ಟಿದೆ. ಹೀಗಿದ್ದರೂ VPF ಎಂದರೆ, ಸ್ವಯಂ-ಪ್ರೇರಿತ ಭವಿಷ್ಯ ನಿಧಿ ಯೋಜನೆ ಎಂಬುದು ಇದಕ್ಕಿಂತಲೂ ಸೂಕ್ತವಾದ ಯೋಜನೆ ಎನ್ನಲಾಗಿದೆ.
VPF ಎಂದರೇನು?
ನೌಕರರ ಭವಿಷ್ಯ ನಿಧಿ (EPF) ನ ಹಣವನ್ನು ಪ್ರತಿ ತಿಂಗಳು ಉದ್ಯೋಗಿಗಳ ಸಂಬಳದಿಂದ ಕಡಿತಗೊಳಿಸಲಾಗುತ್ತದೆ. ಇದರಲ್ಲಿ ಕಂಪನಿಯ ಉದ್ಯೋಗದಾತರ ಕೊಡುಗೆ ಕೂಡಿಕೊಂಡಿರುತ್ತದೆ.
ಆದರೆ, VPF ಎನ್ನುವುದು ಸಂಬಳ ಪಡೆವ ನೌಕರರು ಹೆಚ್ಚುವರಿಯಾಗಿ ಹೂಡಿಕೆ ಮಾಡುವ ಯೋಜನೆಯಾಗಿದೆ. ಪ್ರಸ್ತುತ ಇದರ ಬಡ್ಡಿದರ ಶೇ.8.25 ರಷ್ಟಿದೆ. Mother Sparsh 99% Pure Water (Unscented) Baby Wipes with Lid I Natural Plant made cloth - Super thick Wet Wipes I 72 pcs/pack - Pack of 2 (Super Saver Pack)
VPF ಖಾತೆ ತೆರೆಯುವುದು ಹೇಗೆ?
ನೀವು ಕೆಲಸ ಮಾಡುವ ಕಂಪನಿಯ ಕಚೇರಿ ವಿಭಾಗವನ್ನು ಸಂಪರ್ಕಿಸಿ, VPF ಖಾತೆಯನ್ನು ತೆರೆಯಬಹುದು. ನೀವು ಎಷ್ಟು ಮೊತ್ತದ ಠೇವಣಿಯನ್ನು ಇಡಲು ಬಯಸುತ್ತೀರಿ ಅದನ್ನು ತಿಳಿಸಬೇಕಿರುತ್ತದೆ. ಅದರನ್ವಯ, ಪ್ರತಿ ತಿಂಗಳು, ನಿಮ್ಮ ಸಂಬಳದಿಂದ VPF ಗಾಗಿ ನಿರ್ಧಿಷ್ಟ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.
VPF ಆದಾಯ ತೆರಿಗೆಯ ಸೆಕ್ಷನ್ 80C ರ ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯವಿದೆ. ಒಂದು ವೇಳೆ ಉದ್ಯೋಗ ಬದಲಿಸುವಾಗ, ಒಂದೇ UAN ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ EPF ಮತ್ತು VPF ಹಣವನ್ನು ವರ್ಗಾಯಿಸಬಹುದು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಕ್ರಿಸ್‌ಮಸ್ ಸಂಭ್ರಮಕ್ಕೆ ಮನೆಯಲ್ಲೇ ತಯಾರಿಸಿ ಆರೋಗ್ಯಕರ 'ಡ್ರೈ ಫ್ರೂಟ್ಸ್ ಕೇಕ್'..!
(ವಿಶೇಷ ಸೂಚನೆ: ಇದು ಹಣಕಾಸಿನ ಮಾಹಿತಿ ಒದಗಿಸುವ ಉದ್ದೇಶದಿಂದ ಕೂಡಿದೆ. ಇದರಿಂದ ಆರ್ಥಿಕ ನಷ್ಟ ಉಂಟಾದಲ್ಲಿ ಇನ್ಸೈಟ್‌ರಶ್ ಜವಾಬ್ದಾರರಾಗಿರುವುದಿಲ್ಲ. ಓದುಗರು ಈ ಮಾಹಿತಿಯ ಆಧಾರದ ಮೇಲೆ ಹೂಡಿಕೆ ಮಾಡುವಾಗ ಹಣಕಾಸು ತಜ್ಞರ ಸಲಹೆಗಳನ್ನು ಪಡೆಯುವುದು ಉತ್ತಮ.)